ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಹಾನಗಲ್ ರಸ್ತೆಯಲ್ಲಿರುವ ವೆಂಕಟೇಶ್ವರ ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ವೈ.ಕೆ.ಎಸ್. ಲೇಔಟ್‌ನಲ್ಲಿ ವ್ಯಕ್ತಿಯ ಕೊಲೆ ನಡೆದಿದೆ. ಇಂದ್ರಜಿತ್ (20) ಮತ್ತು ಮೊಹಮ್ಮದ್ ವಜೀರ್ (23) ಇವರು ಉತ್ತರಪ್ರದೇಶ ರಾಜ್ಯದ ದುಮಾರಿಯಾಗಂಜ್ ತಾಲ್ಲೂಕಿನ ಜಮೌತಾ ಗ್ರಾಮದವರೆಂದು ಗುರುತಿಸಲಾಗಿದ್ದು, ಪಿ.ಓ.ಪಿ.ಕೆಲಸಕ್ಕಾಗಿ ಸುಮಾರು ದಿನಗಳಿಂದ ವಾಸವಿದ್ದು, ಮದ್ಯವ್ಯಸನಿಗಳಾಗಿದ್ದರಿಂದ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಇಂದ್ರಜಿತ್ ಎಂಬ ಆರೋಪಿಯು ಮೊಹಮ್ಮದ್ ವಜೀರ್‌ನನ್ನು ರಾಡ್‌ನಿಂದ ಹೊಡೆದು ಜೀವ ತೆಗೆದಿದ್ದಾನೆ. ಪ್ರಕರಣವು ಮೊಳಕಾಲ್ಮುರು ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ. ವಿಚಾರಣೆ ಮುಂದುವರೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ಆಡಿಷನಲ್ ಎಸ್.ಪಿನಂದಗಾವಿ, ಡಿ.ವೈ.ಎಸ್.ಪಿ. ಶ್ರೀಧರ್, ವೃತ್ತ ನಿರೀಕ್ಷಕ ಉಮೇಶ್, ಪಿ.ಎಸ್.ಐ. ಬಸವರಾಜ್, ಎ.ಎಸ್.ಐ, ತಿಮ್ಮಣ್ಣ, ಸಿಬ್ಬಂದಿಗಳಾದ ಭಾಷಾ, ಶ್ರೀಧರ್, ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
