ಸಾಸಲವಾಡ:ಶ್ರೀ.ಧ.ಮಂ.ಗ್ರಾ.ಅ.ಸಂಸ್ಥೆಯಿಂದ ಕೆರೆಗೆ ಕಾಯಕಲ್ಪ…!!!

ವರದಿ. ಡಿ. ಎಂ ಈಶ್ವರಪ್ಪ ಸಿದ್ದಾಪುರ

ಸಾಸಲವಾಡ:ಶ್ರೀ.ಧ.ಮಂ.ಗ್ರಾ.ಅ.ಸಂಸ್ಥೆಯಿಂದ ಕೆರೆಗೆ ಕಾಯಕಲ್ಪ*
-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಾಸಲವಾಡ ಗ್ರಾಮದಲ್ಲಿ,ಕೆರೆಯನ್ನ ಸಂಸ್ಥೆವತಿಯಿಂದ ಕಾಯಕಲ್ಪ ನೆರವೇರಿಸಲಾಗಿದೆ.ಹೂಳು ತೆಗೆದಿದ್ದು,ಕೆರೆಯನ್ನ ಸಂಪೂರ್ಣ ಸಮತಟ್ಟಾಗಿಸಿ ಒಪ್ಪ ಓರಣ ಮಾಡಲಾಗಿದೆ.ಸಂಸ್ಥೆಯೊಂದಿಗೆ ಸಾಸಲವಾಡ ಕೆರೆ ಕ್ಷೇಮಾಭಿವೃದ್ಧಿ ಸಂಘದ ಸಹಕಾರದಲ್ಲಿ,ಸುಮಾರು 65ದಿನಗಳ ನಿರಂತರ ಕಾಮಗಾರಿ ನಡೆಸಲಾಗಿದೆ,ಒಟ್ಟು1587ಕ್ಕೂ ಹೆಚ್ಚು ತಾಸುಗಳ ನಿರಂತರ ಕಾಮಗಾರಿ ನಡೆದಿದೆ ಎಂದು ನಿರ್ವಹಣೆಕಾರರು ತಿಳಿಸಿದ್ದಾರೆ,ಒಟ್ಟು 14ಲಕ್ಷ20ಸಾವಿರ ರೂ ಮಂಜೂರಾಗಿದ್ದು ಕಾಮಗಾರಿ ಸಂಪೂರ್ಣವಾಗಿದೆ.19.349ಟ್ರ‍ಕ್ಟ್ ರ ನಷ್ಟು ಹೂಳು ಹಾಗೂ ಇತರೆ ಮಣ್ಣು ಹೊರಹಾಕಲಾಗಿದ್ದು,ಸುಮಾರು 750ಕ್ಕೂ ಹೆಚ್ಚು ಟ್ರಾಕ್ಟರ್ ನಷ್ಟು ಫಲವತ್ತಾದ ಮಣ್ಣನ್ನು ರೈತರ ಹೊಲಗಳಿಗೆ ಹಾಕಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಸಾಸಲವಾಡ ಕೆರೆಯಿಂದ ಕೂಡ್ಲಿಗಿ ರಾಷ್ಟ್ರೀಯ ಹೆದ್ದಾರಿ ರಸ್ಥೆಯವರೆಗೆ 5ಕಿಮೀ ವಿಸ್ತೀರ್ಣದ ರಾಜಕಾಲುವೆ ದುರಸ್ಥಿ ಕಾರ್ಯ ಮಾಡಲಾಗಿದೆ,18ಎಕರೆಯಷ್ಟು ವಿಸ್ತೀರ್ಣದ ಕೆರೆಯ ಆಜುಬಾಜಿನ ತ್ಯಾಜ್ಯ ಗಿಡಗಂಟೆಗಳನ್ನ ತರೆವುಗೊಳಿಸಲಾಗಿದೆ.ಸುಮಾರು 73ಕ್ಕೂ ಹೆಚ್ಚು ತಾಸುಗಳ ನಿರಂತರ ಕಾಮಗಾರಿ ನಡೆಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿ ತಳಿಸಿದ್ದಾರೆ.
ಸಾಸಲವಾಡ ಕೆರೆ ಬೃಹತ್ ಕ್ರೀಡಾಂಗಣದಂತೆ ಕಂಗೊಳಿಸುತ್ತಿದೆ, ಧರ್ಮಸ್ಥಳ ಗ್ರ‌ಾಮಾಭಿವೃದ್ಧಿ ಸಂಸ್ಥೆಯು ಸಾಸಲವಾಡ ಗ್ರಾಮಸ್ಥರ ಸಹಕಾರಲ್ಲಿ ಮಾಡಿದ ಶ್ರಮದಾನದಿಂದಾಗಿ ಸಾಸಲವಾಡ ಕೆರೆ ಸಂರಕ್ಷಣೆ ನಡೆದಿದೆ.ಸಂಸ್ಥೆಯ ಕೆ್ರ ಸಂರಕ್ಷಣಾ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ,ಹಾಗೂ ಸಂಸ್ಥೆಯಿಂದಾಗಿ ಕೆರೆ ಪುನರ್ಜನ್ಮ ಹಿಂದಿದ್ದು ಅದಕ್ಕಾಗಿ ತಾವೆಲ್ಲರೂ ಸಂಸ್ಥೆಗೆ ಚಿರ ಋಣಿಗಳೆಂದು ಕೃತಜ್ಞತೆ ಸಲ್ಲಿಸಿದ್ದಾರೆ.ಗ್ರಾಮದ ಮುಖಂಡರು ಜನಪ್ರತಿನಿಧಿಗಳು,ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ರೈತ ಸಂಘ,ಕನ್ನಡ ಪರ ಸಂಘಟನೆಗಳ ಮುಖಂಡರು, ಗ್ರಾಮದ ಹಿರಿಯರು ಇದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend