ಮಲ್ಲಿಗೆ ನಾಡಿನಿಂದ ಹಂಪಿಯ ಒಳನೋಟಕ್ಕೆ ಪಯಣ
ಹೂವಿನ ಹಡಗಲಿ
*ನಾಡಿನ ಜನತೆಗಾಗಿ ಸಾಹಿತ್ಯ ಕಲಾ ವೇದಿಕೆ ಹೊಳಗುಂದಿ- ಹೂವಿನಹಡಗಲಿ* ಹಾಗೂ ವರಪುತ್ರ ಬ್ರಾಂಡ್ ಚಾನೆಲ್ ಆಯೋಜಿತ ಕನ್ನಡ ವಿಶ್ವವಿದ್ಯಾಲಯದ ಉಪಕುಲಸಚಿವರಾದ ಶ್ರೀ ಎಂ ಎಂ ಶಿವಪ್ರಕಾಶ್ ಅವರು ಹಂಪಿಯ ಚರಿತ್ರೆ ಕುರಿತು ರಚಿಸಿದ ಹಂಪಿಯ ಒಳನೋಟಗಳು ಕೃತಿಯ ಅವಲೋಕನ ಕಾರ್ಯಕ್ರಮ ಮತ್ತು ಹಂಪಿಯ ದರ್ಶನ ಕಾರ್ಯಕ್ರಮ ದಿನಾಂಕ:-26-07-2026 ರಂದು ಶ್ರೀ ಹಂಪಿ ವಿರೂಕಾಕ್ಷೆಶ್ವರಸ್ವಾಮಿ ಪದವಿ ಕಾಲೇಜ್ ಕಮಲಾಪುರ
ಕಮಲಾಪುರದಲ್ಲಿ ನಡೆಯಲಿದ್ದು ಕೃತಿಯ ಲೇಖಕರಾದ ಶ್ರೀ ಎಂ ಎಂ ಶಿವಪ್ರಕಾಶ್ ಅವರು ಇದರ ನೇತೃತ್ವ ವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಪ್ರಾಂಶುಪಾಲರಾದ ಶ್ರೀ ಬಸವರಾಜ್ ಎಮ್ಮಿಗನೂರ್ ಇವರು ವಹಿಸಲಿದ್ದು
ಕಾರ್ಯಕ್ರಮದಲ್ಲಿ ಕೃತಿಯ ಅವಲೋಕನದ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಜಿ ಯರಿಸ್ವಾಮಿ ಶಿಕ್ಷಕರು ಹೊಸಪೇಟೆ ಸಾಹಿತಿಗಳು, ಶ್ರೀ ವೆಂಕಟೇಶ್ ಬಡಿಗೇರ್ ಉಪನ್ಯಾಸಕರು ಕಮಲಾಪುರ ಸಾಹಿತಿಗಳು, ಶ್ರೀ ಉದೇದಪ್ಪ ಶಿಕ್ಷಕರು ಹೊಸಪೇಟೆ, ಶ್ರೀಮತಿ ಗೌರಮ್ಮ ಮಲ್ಲಿನಾಥ್ ಶಿಕ್ಷಕಿ ಹಾಗೂ ಸಾಹಿತಿಗಳು, ಶ್ರೀ ಟಿ ಎಂ ವೀರಭದ್ರಯ್ಯ ಶಿಕ್ಷಕರು ಉತ್ತಂಗಿ ಸಾಹಿತಿಗಳು, ಶ್ರೀಮತಿ ಯು ರೇಣುಕಾ ಹೂವಿನಡಗಲಿ. ಸಾಹಿತಿಗಳು ಹಾಗೂ ಪ್ರೌಡಶಾಡಶಾಲೆ ಶಿಕ್ಷಕಿ, ಶ್ರೀಮತಿ ಶಶಿಕಲಾ ನಾಗಭೂಷಣ್ ಶಿಕ್ಷಕಿ ಸಾಹಿತಿಗಳು ಹರಪನಹಳ್ಳಿ, ಕುಮಾರಿ ಶಾಂತ ಹರಪನಹಳ್ಳಿ ಸಾಹಿತಿಗಳು, ಶ್ರೀಮತಿ ನಯನ ಮಲ್ಲಿನಾಥ ಸೋಗಿ ಸಾಹಿತಿಗಳು, ಡಾ. ಶ್ರೀ ಅನಿಲ್ ಕುಮಾರ ಪ್ರಸನ್ನ ದೇವರ ಮಠ ಹೂವಿನಹಡಗಲಿ ಶಿಕ್ಷಕರು ಸಾಹಿತಿಗಳು, ಶ್ರೀ ಎ. ಚಂದ್ರಪ್ಪ ಶಿಕ್ಷಕರು ಹೂವಿನಹಡಗಲಿ ಸಾಹಿತಿಗಳು, ಶ್ರೀ. ಮಹೇಶ ಶಿಕ್ಷಕರು ಕೊಟ್ಟೂರು ಇವರು ಭಾಗವಹಿಸಲಿದ್ದು, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಮತ್ತು ಈ ಕಾರ್ಯಕ್ರಮದ ಮೂಲಕ ಐತಿಹಾಸಿಕ ಹಂಪಿಯ ಕುರಿತಾದ ಅದ್ಭುತ ಕೃತಿಯ ಅವಲೋಕನ ಕಾರ್ಯಕ್ರಮವನ್ನು ಶ್ರೀ ಚನ್ನವೀರಸ್ವಾಮಿ ಹಿರೇಮಠ ಹೊಳಗುಂದಿ ಇವರು ಅಯೋಜಿಸಿದ್ದು ಮಲ್ಲಿಗೆ ನಾಡು ಮತ್ತು ವಿಜಯನಗರ ಸಾಮ್ರಾಜ್ಯದ ನಂಟು ಬಹಳ ದೀರ್ಘಕಾಲಿನದ್ದು, ಹಂಪಿಯ ಒಳನೋಟ ಕೃತಿಯ ಮೂಲಕ ಹಂಪಿಯ ವಿಶೇಷ ಅಧ್ಯಯನ ಮತ್ತು ಚರ್ಚೆ ಈ ಮೂಲಕ ಆಮೂಲಾಗ್ರವಾಗಿ ಆಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
