ಸದ್ಗುಣ ವಿದ್ಯಾರ್ಥಿ ಬದುಕಿಗೆ ಭೂಷಣ – ಕುಂ.ವೀ…!!!

ಸದ್ಗುಣ ವಿದ್ಯಾರ್ಥಿ ಬದುಕಿಗೆ ಭೂಷಣ – ಕುಂ.ವೀ

ಕೊಟ್ಟೂರು: ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದು ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಗುಣ ಮಟ್ಟದ ಶಿಕ್ಷಣ ಪಡೆದು ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿವಿಧ ಸಾಂಸ್ಕೃತಿಕ ಸಂಘಗಳನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸಮಯ ಪಾಲನೆ ಬಹಳ ಮುಖ್ಯವಾಗಿರುತ್ತದೆ ಹಾಗೂ ತಂದೆ ತಾಯಿ ಹಾಗೂ ಗುರು ಹಿರಿಯರೊಂದಿಗೆ ಗೌರವದಿಂದ ವರ್ತಿಸಿ ವಿನಯ, ನೈತಿಕತೆ ಮತ್ತು ಸದ್ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಪ್ರಾಚಾರ್ಯ ಜಿ.ಸೋಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಹೆಚ್ ಎಂ ರವೀಂದ್ರಸ್ವಾಮಿ ಹಾಗೂ ಜಗದೀಶ್ ಚಂದ್ರ ಬೋಸ್‌ ಮಾತಾಡಿದರು.

ಉಪನ್ಯಾಸಕರಾದ ಸಿದ್ದಲಿಂಗನಗೌಡ , ಸಕ್ರಪ್ಪ ರಡ್ಡೇರ್, ಡಿ.ಅಂಜಿನಪ್ಪ,

ಕೆ.ಎಂ.ರೇಣುಕಾಸ್ವಾಮಿ, ಎಂ.ಜಯಣ್ಣ, ಜಿ.ಕರಿಬಸಪ್ಪ, ಗುರಪ್ಪನಾಯಕ, ಎಂ ಬಸವರಾಜ, ಪ್ರವೀಣ್ ಕುಮಾರ್, ತುಷಾರ್, ಶಶಿರೇಖಾ, ಸುಷ್ಮಾ ಪಾಟೀಲ್, ಕೆ.ಜೆ.ಪೂರ್ಣಿಮ, ಕೆ.ಎಂ. ಮಂಜುಳಾ, ಪಾರ್ವತಿ, ಜಿ.ಶಿವರಾಜ್, ಎಚ್. ಪ್ರಕಾಶ, ಕೊಟ್ರೇಶ್ ಮುಂತಾದವರು ಪಾಲ್ಗೊಂಡಿದ್ದರು.

ಚಿತ್ರ – ಕೊಟ್ಟೂರಿನ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿವಿಧ ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಕುಂ.ವೀರಭದ್ರಪ್ಪ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend