;

ಸಂಡೂರಿನಲ್ಲಿ ಸಿಡಿಲಿಗೆ ಸಾ*ವು: ದನ ಕಾಯಲು ಹೋದ 19ರ ಯುವತಿ ಅಕ್ಷತಾ ದುರಂತ ಅಂತ್ಯ..!!

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇ ಜೋಗಿಕಲ್ಲು ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ 19 ವರ್ಷದ ಯುವತಿ ಅಕ್ಷತಾ ಸ್ಥಳದಲ್ಲೇ ಮೃ*ತಪಟ್ಟ ಘಟನೆ ನಡೆದಿದೆ.

 

ಮೃ*ತ ಅಕ್ಷತಾ ಸಂಡೂರು ತಾಲೂಕಿನ ಮುರಾರಿ ಗ್ರಾಮದವರಾಗಿದ್ದು, ಬಡತನ ಹಿನ್ನೆಲೆ ದೊಡ್ಡಪ್ಪ ಹಾಗೂ ದೊಡ್ಡಮ್ಮನ ಆಶ್ರಯದಲ್ಲಿ ವಾಸವಾಗಿದ್ದರು. ಗ್ರಾಮದ ಸಮೀಪ ದನ ಕಾಯಲು ತೆರಳಿದ್ದ ವೇಳೆ ಆಕೆಗೆ ಸಿಡಿಲು ಬಡಿದು ದುರ್ಘಟನೆ ಸಂಭವಿಸಿದೆ.

 

ಸಿಡಿಲಿನ ತೀವ್ರ ಹೊಡೆತದಿಂದ ಅಕ್ಷತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕುಟುಂಬದಲ್ಲಿ ಆಘಾತ ಮಡುಗಟ್ಟಿದೆ. ಈ ಸಂಬಂಧ ಚೋರನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;