
ಜಂಗಮಸೋವೇನಹಳ್ಳಿ:ಶ್ರೀಹನುಮಂತರಯ ಉತ್ಸವ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಜಂಗಮಸೋವೇನಹಳ್ಳಿ ಗ್ರಾಮದ, ಶ್ರೀ ಹನುಮಂತರಾಯ ದೇವರ ಉತ್ಸವ ಪ್ರತಿ ವರ್ಷದಂತೆ ಚಂದ್ರಮಾನ ಯುಗಾದಿಯಂದು ಸಾಂಪ್ರದಾಯಕವಾಗಿ ಸಂಭ್ರಮದಿಂದ ಜರಗಿತು.
ಭಕ್ತರು ಬೆಳ್ಳಂಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿಗೆ ಕುಂಕುಮ ಪೂಜೆ,ಎಲೆ ಪೂಜೆ,ಪಂಚಾಮೃತ ಅಭಿಷೇಕ, ವಿವಿಧ ಬಣ್ಣಗಳ ಕುಂಕುಮಗಳಿಂದ ಆಂಜನೇಯಸ್ವಾಮಿಗೆ ಅಲಂಕಾರ ಮಾಡಿದ್ದರು. ಶ್ರೀ ಸ್ವಾಮಿಗೆ ಭಕ್ತರು ತಮ್ಮ ಇಷ್ಟಾರ್ಥ ಸೇವೆ ದೀಡ್ ದಂಡ ನಮಸ್ಕಾರ,ಹಣ್ಣು ಕಾಯಿ, ಕರ್ಪೂರ ಸೇವೆ ಸಲ್ಲಿಸಿ ಭಕ್ತಿ ಮೆರೆದರು.ಸಂಜೆಯ ಗೋಧೂಳಿ ಸಮಯದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಉತ್ಸವಮೂರ್ತಿಯನ್ನು, ಪಲ್ಲಕ್ಕಿಯಲ್ಲಿ ತೆಗೆದುಕೊಂಡು ಶಿವಪುರ ಗ್ರಾಮದ ಹೊರವಲಯದ ತೋಟದಲ್ಲಿನ ಐತಿಹಾಸಿಕ ಹಳೆಯ ತೆರೆದ ಬಾವಿಯಲ್ಲಿ ಗಂಗೆ ಪೂಜೆಯನ್ನು ನೆರವೇರಿಸಲಾಗುತ್ತದೆ.

ಶ್ರೀ ಆಂಜನೇಯ ದೇವರ ಪೂಜಾರಿಗೆ ಕುಂಭ (ಕೇಲು) ಹೊರಿಸಿ ಗ್ರಾಮಕ್ಕೆ ವಾಪಸಾಗಲಿದ್ದು, ಕೇಲು ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಜಾನಪದ ಕಲಾ ಪ್ರಕಾರಗಳಾದ ಹಲಗೆ ಮೇಳ ಇನ್ನಿತರ ಜಾನಪದ ಕಲಾ ಪ್ರಕಾರಗಳೊಂದಿಗೆ,ಭಕ್ತ ಸಮೂಹ ಭಕ್ತಿಪೂರ್ವಕವಾಗಿ ಗ್ರಾಮಕ್ಕೆ ಸ್ವಾಗತಿಸಿಕೊಳ್ಳಾಲಾಗುದು. ಆರೋಗ್ಯ ಮಳೆ-ಬೆಳೆ ಇನ್ನಿತರ ವಿಚಾರವಾಗಿ ಪೂಜಾರಿ ವಾರ್ಷಿಕ ಭವಿಷ್ಯವಾಣಿಯನ್ನು ತಿಳಿಯುತ್ತಾರೆ,ಗ್ರಾಮದಲ್ಲಿನ ಇತರ ದೇವಸ್ಥಾನಗಳ ದರ್ಶನ ಪಡೆಯಲಾಗುವುದು. ನಂತರ ಆಂಜನೇಯ ಉತ್ಸವಮೂರ್ತಿಯನ್ನು ಹಾಗೂ ಪೂಜಾರಿಯ ಹೊತ್ತ ಕುಂಭವನ್ನು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು.
.ನಂತರ ಗ್ರಾಮದ ಅರಣ್ಯ ವಲಯದಲ್ಲಿ ಬೇಟೆ ಗಿಡವನ್ನು ತಂದು ಸಂಪ್ರದಾಯಿಕ ಪೂಜಿಸಲಾಗುವುದು,ಪೂಜಾರಿ ಗ್ರಾಮದ ಪ್ರದಕ್ಷಣೆ ಹಾಕಿದ ನಂತರ ದಾಸ ಸಮೂಹದವರು ಹೊಂಡ (ಪುಷ್ಕರಣಿ) ಹಾಕಿದ ಚಪ್ಪರದ (ಹಂದರ) ನಾಲ್ಕು ಕಂಬಗಳಗೆ ಮತ್ತು ಮಧ್ಯ ಕಟ್ಟಿದ ತೆಂಗಿನಕಾಯಿಯನ್ನು ಚಂಗನೆ ಜಿಗಿಯುತ ಕಿತ್ತುಕೊಳ್ಳುವ ಸಂಪ್ರದಾಯವಿದೆ. ಹೊಂಡದಲ್ಲಿರುವ ಓಕುಳಿ ಚೆಲ್ಲುವ ಜಾಗಟೆ ಶಂಖನಾದಗಳ ರಾಮ ರಾಮ ಗೋವಿಂದಾ ಗೋವಿಂದ ಎಂಬ ನಾಮಸ್ಮರಣೆ ಮಾಡುವುದು ಸಂಪ್ರದಾಯ. ಗ್ರಾಮದ ಮಹಿಳೆಯರು ಸೋಬಾನ ಪದ ಇನ್ನಿತರ ಜಾನಪದ ಪದಗಳ ಮುಖಾಂತರ ಭಕ್ತಿ ಸಮರ್ಪಿಸುತ್ತಾರೆ, ಮಣೇವು ಹಾಡಹುದು ಭಕ್ತರು ಮಾಡುವ ನೈವೇದ್ಯ ಮಂಡಕ್ಕಿ ಬೆಲ್ಲ ಸಿಹಿ ಖಾದ್ಯಗಳು ಹಣ್ಣು ಇವುಗಳನ್ನೆಲ್ಲ ಮಡಿ ಬಟ್ಟೆಯಲ್ಲಿ ಹಾಕಿದ ನೈವೇದ್ಯಗಳ ದಾಸಪ್ಪಗಳು, ಗೋವಿಂದ ಗೋವಿಂದ ಎನ್ನುತ್ತಾ ಶಂಖನಾದ ಜಾಗಟೆ ಬಾರಿಸುತ ನೈವೇದ್ಯದ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ದಾಸ ಸಮೂಹ ನೈವೇದ್ಯ ತೆಗೆದುಕೊಳ್ಳುತ್ತಿರುವುದು ಇನ್ನಿತರ ಪೂಜಾ ಸಂಪ್ರದಾಯಗಳು ಅಹೋರಾತ್ರಿ ಜರಗಿದವು, ಭಕ್ತರು ಎಲ್ಲಾ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತಸಮೂಹ ಭಾಗಿಯಾಗಿದ್ದರು.ಭಕ್ತಿ ಸಮರ್ಪಿಸಿ ಧನ್ಯತಾಭಾವ ಮೆರೆದು ಶ್ರೀ ಆಂಜನೇಯಸ್ವಾಮಿ ಕೃಪೆಗೆ ಪಾತ್ರರಾದರು. *ಡಿ ಎಂ ಈಶ್ವರಪ್ಪ ಸಿದ್ದಾಪುರ*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
