ಗಂಗಾ ಪರಮೇಶ್ವರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು
ಹೊನ್ನಾಳಿ, ಪಟ್ಟಣದ ಕಡೆಕೇರಿಯಲ್ಲಿರುವ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಜಯಂತಿ ನೆರವೇರಿಸಿದ್ದ ಭಕ್ತಾದಿಗಳು ಗಂಗಾಪರಮೇಶ್ವರಿ ದೇವಸ್ಥಾನದಿಂದ ತುಂಗಭದ್ರ ನದಿಗೆ ತೆರಳಿ ಗಂಗೆಯ ಪೂಜೆ ಸಲ್ಲಿಸಿ ನಂತರ ಗಂಗೆಯ ಕೇಲನ್ನು ಹೊತ್ತ ಮಹಿಳೆಯರು ಗಂಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಅಭಿಷೇಕ ಹಾಗೂ ಸಹಸ್ರ ಪೂಜೆಗಳನ್ನು ನೆರವೇರಿಸಿ ನೂರಾರು ಭಕ್ತರು ಗಂಗಾಪರಮೇಶ್ವರಿಯ ಆಶೀರ್ವಾದ ಪಡೆದು
ನಾಡಿನ ಜನರೆಲ್ಲರಿಗೂ ಆಯುರ್ ಆರೋಗ್ಯ ಸಕಲ ಸಂಪತ್ತು , ರೈತ ಕುಲಕ್ಕೆ ಮಳೆ ಬೆಳೆ ಸಮೃದ್ಧಿಯಾಗಿ ಅಭಿವೃದ್ಧಿ ಯಾಗಲೆಂದು ಭಕ್ತಾದಿಗಳು ಶ್ರೀ ತಾಯಿ ಯಲ್ಲಿ ಬೇಡಿಕೊಂಡರು
ವಿಜೃಂಭಣೆಯಿಂದ ಪೂಜೆ ಸಲ್ಲಿಸಿದರು, ಬಂದಂತ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು, ಈ ಸಂದರ್ಭದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ರಂಗಣ್ಣ ತರಕಾರಿ, ಉಪಾಧ್ಯಕ್ಷರಾದ ಶಂಕರಣ್ಣ ಇಟ್ಟಿಗೆ, ಮಂಜಪ್ಪ ಎಸ್ ಕಾರ್ಯದರ್ಶಿ, ನಾಗರಾಜ್ ಸಹ ಕಾರ್ಯದರ್ಶಿ, ಜಯಪ್ಪ ಖಜಾಂಜಿ, ಹಾಗೂ ಸಮಾಜದ ಮುಖಂಡರಾದ ಬಿಳಚಿ ಮಂಜಪ್ಪ, ಕನಕ ಮಂಜಪ್ಪ, ಚೆನ್ನೇಶ್ ಬಿಜೆಪಿ, ರಘು ಕಲ್ಕೇರಿ, ಪೈಲ್ವಾನ್ ಮಂಜು, ರಾಜಪ್ಪ,ಕೇಶವಣ್ಣ ಎ.ಪಿ.ಎಂ.ಸಿ, ಹಾಗೂ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು..
ವರದಿ ಪ್ರಭಾಕರ್ ಮುದ್ದಣ್ಣರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
