ಹೊನ್ನಾಳಿ ನ್ಯಾಮತಿ ಅವಳಿ ತಾಲೂಕನ್ನು ಬರಗಾಲವೆಂದು ಘೋಷಿಸಬೇಕೆಂದು ಎಂಪಿ ಕರಿಬಸಪ್ಪ ಗೌಡ ಆಗ್ರಹಿಸಿದರು…
ಹೊನ್ನಾಳಿ, ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಅಧ್ಯಕ್ಷರು ಕರಿಬಸಪ್ಪ ಗೌಡ ಎಂ ಪಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕ ಗಳನ್ನು ತೀವ್ರ ಬರಗಾಲ ಛಾಯೆ ಗೋಚರವಾಗಿದ್ದು ಸರ್ಕಾರದ ಯಾವಾಗ ತಿಂಗಳಲ್ಲಿ ಎಷ್ಟೆಷ್ಟು ಮಳೆಯಾಗಬೇಕು ವಾಡಿಕೆ ಅದೇ ರೀತಿ ಮಳೆ ಬಂದಿಲ್ಲ ಜೂನ್ ತಿಂಗಳಲ್ಲಿ ಸ್ವಲ್ಪ ಅದಮಳೆಯಾದ್ದರಿಂದ ರೈತಾಪಿ ವರ್ಗದವರು ಬಿತ್ತನೆಯನ್ನು ಮಾಡಿದ್ದಾರೆ ಆದರೆ ಈಗ ಮಳೆಯು ಬಾರದೆ ಬಿತ್ತಿದಂತ ಹಲವಾರು ಬೆಳೆಗಳು ಬತ್ತಿವೆ ಆದ್ದರಿಂದ ಸರ್ಕಾರದ ವಾಡಿಕೆಯಂತೆ ಮಳೆ ಆಗದೇ ಇರುವ ಕಾರಣ ಅವಳಿ ತಾಲೂಕುಗಳನ್ನು ಬರಗಾಲವೆಂದು ಘೋಷಣೆ ಮಾಡಬೇಕು
ಮಾನ್ಯ ಮುಖ್ಯಮಂತ್ರಿಗಳು ಬರಗಾಲವೆಂದು ಘೋಷಿಸಿ ಬರಗಾಲ ದ ಸಮಸ್ಯೆಗಳನ್ನು ಪರಿಹರಿಸಲು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಮಾರ್ಗ ಸೂಚನೆಯನ್ನು ನೀಡುತ್ತಾರೆ ಆದರೆ ಇವರದೇ ಮಂತ್ರಿ ಮಂಡಲದ ಇಂಧನ ಸಚಿವರಾದ ಕೆ ಜೆ ಜಾರ್ಜ್ ಇಂಧನ ಸಚಿವರು ಮತ್ತು ದಾವಣಗೆರೆ ಉಸ್ತುವಾರಿ ಮಂತ್ರಿಗಳಾಗಿದ್ದಾರೆ ಇವರು ಆಗಸ್ಟ್ ತಿಂಗಳವರೆಗೂ ಕಾದು ನೋಡಬೇಕು ಆನಂತರ ರಾಜ್ಯದಲ್ಲಿ ಬರಗಾಲವನ್ನು ಘೋಷಣೆ ಮಾಡುತ್ತೇವೆ ಎಂದು ದ್ವಂದ್ವ ಹೇಳಿಕೆಯನ್ನು ನೀಡುತ್ತಿದ್ದಾರೆ ದಾವಣಗೆರೆ ಜಿಲ್ಲಾ ಆಡಳಿತ ಹಾಗೂ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಆಡಳಿತದ ಯಂತ್ರಗಳು ಸಂಪೂರ್ಣ ನಿಷ್ಕ್ರಿಯವಾಗಿದ್ದು ಆಡಳಿತದಲ್ಲಿ ಯಾವುದೇ ರೀತಿಯ ರೈತರಿಗೆ ಅನ್ನದಾತರಿಗೆ ಅನುಕೂಲವಾಗುವಂತ ಕೆಲಸ ಕಾರ್ಯಗಳು ಮಾಡುತ್ತಿಲ್ಲ ಆದ್ದರಿಂದ ಕೆಲವು ದಿನಗಳಲ್ಲಿ ಅಧಿಕಾರಿಗಳು ಬರಗಾಲದ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ತಾಲೂಕು ಮತ್ತು ಜಿಲ್ಲಾಡಳಿತದ ವಿರುದ್ಧ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟವನ್ನು ನಡೆಸಲಾಗುವುದು
ನ್ಯಾಮತಿಯಲ್ಲಿ ಕೆರೆ ತುಂಬಿಸುವ ಯೋಜನೆಯು ನೂರಾರು ಕೋಟಿ ವೆಚ್ಚದ್ದಾಗಿದ್ದು ಇಲ್ಲಿಯವರೆಗೆ 400 ರಿಂದ 500 ಕೋಟಿ ವೆಚ್ಚ ಮಾಡಿದ್ದು ಸಂಪೂರ್ಣ ಕಾರ್ಯ ಕಾಮಗಾರಿಯು ನಡೆದಿದ್ದು ವಿದ್ಯುತ್ ಸಂಪರ್ಕವನ್ನು ಕಲ್ಪಿಸದೆ ಇರುವುದರಿಂದ ಸರ್ಕಾರ ಖರ್ಚು ಮಾಡಿದಂತ ಹಣವು ಸರಿಯಾಗಿ ಸದ್ಬಳಿಕೆಯಾಗದೆ ಕೊಳೆತ ಹೆಣದಂತೆ ಆಗಿದೆ ಆದ್ದರಿಂದ ಈ ಕಾಮಗಾರಿಯನ್ನು ವರಿತವಾಗಿ ಕಾರ್ಯಗತಗೊಳಿಸಬೇಕು ಈಗಿನ ಶಾಸಕರು ಚುನಾಯಿತರಾಗಿ ಮೂರು ವರ್ಷ ಕಳೆದರೂ ಇವರದೇ ಸರ್ಕಾರವಿದ್ದರೂ ಇದರ ಬಗ್ಗೆ ಗಮನ ಹರಿಸಬೇಕು ಆದರೆ ಇಲ್ಲಿಯವರೆಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಲ್ಲ ಇದರ ಬಗ್ಗೆ ಹಲವಾರು ಬಾರಿ ಮನವಿಯನ್ನು ಮಾಡಿದ್ದೇವೆ ತಾಲೂಕಿನ ಶಾಸಕರಾದ ಡಿಜಿ ಶಾಂತನಗೌಡರು ಅಧಿಕಾರಕ್ಕೆ ಬರುವ ಮುಂಚೆ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವ ಮಾಡುತ್ತಿದ್ದ ನಾನು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರವನ್ನು ತಡೆಹಿಡಿತೇನೆ, ಭ್ರಷ್ಟಾಚಾರ ಯಾವ ಇಲಾಖೆಯಲ್ಲೂ ನಡೆದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು ಆದರೆ ಬಿಜೆಪಿ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕರಿಬಸಪ್ಪ ಗೌಡ ಎಂ ಪಿ ತಿಳಿಸಿದರು
ಈ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷರಾದ ಕೆ ಸಿ ಬಸಪ್ಪ, ಉಪಾಧ್ಯಕ್ಷರಾದ ಬಸವರಾಜಪ್ಪ ಬಣಕಾರ್ ,..
ವರದಿ ಪ್ರಭಾಕರ್ ಮುದ್ದಣ್ಣರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
