ಧರ್ಮವನ್ನು ಉಳಿಸಿದ ಶ್ರೀ ಕೃಷ್ಣ…!!!

ಧರ್ಮವನ್ನು ಉಳಿಸಿದ ಶ್ರೀ ಕೃಷ್ಣ

ಹೊಳಲ್ಕೆರೆ ತಾಲ್ಲೂಕು ಆಡಳಿತದ ವತಿಯಿಂದ ತಾಲೂಕು ಕಛೇರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಾಮಿಯನ್ನು ಆಚರಿಸಲಾಯಿತು.. ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಶಾಸಕ ಡಾ. ಎಂ ಚಂದ್ರಪ್ಪ ಅವರು ಉದ್ಛಾಟಿಸಿದರು.. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.. ಶ್ರೀ ಕೃಷ್ಣ ಅದರ್ಮವನ್ನು ಮಟ್ಟ ಹಾಕಿ ಧರ್ಮವನ್ನು ಉಳಿಸುತ್ತಾ ಬಂದಿದ್ದಾನೆ. ಕೃಷ್ಣನ ಬಗ್ಗೆ ಎಷ್ಟು ಗುಣಗಾನ ಮಾಡಿದರೂ ಸಾಲದೂ. ಪರಮಾತ್ಮನ ಸೇವೆ ಮಾಡುವುದಕ್ಕೆ ನಾವು ಸದಾ ಮುಂದೆ ಇರುತ್ತೇವೆ ಎಂದರು.. ಇನ್ನು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಾಡಿದ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕ ಉಮೇಶ್ ಮಾತನಾಡಿ ದರ್ಮದ ರಕ್ಷೆಣೆಗಾಗಿ ಕೃಷ್ಣ ಹುಟ್ಟಿದ್ದು. ನಾವುಗಳು ದ್ವಾಪರ ಯುಗದಿಂದ ಕೃಷ್ಣನನ್ನು ಆರಾಧಿಸುತದತ್ತಾ ಬಂದಿದ್ದೇವೆ, ಜಗತ್ತಿಗೆ ಕೃಷ್ಣ ಕೊಟ್ಟಿರುವ ಕೊಡುಗೆಯನ್ನು ನಾವು ಭಗವತ್ ಗೀತೆಯಲ್ಲಿ ಕಾಣಬಹುದು ಎಂದು ತಿಳಿಸಿದರು.

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಆದ ಚಿತ್ತಪ್ಪ ಅವರು ಮಾತನಾಡಿ. ನಮ್ಮ ದೇಶದಲ್ಲಿ ಅಲ್ಲದೇ ವಿದೇಶಗಳಲ್ಲೂ ಕೃಷ್ಣನನ್ನು ಆರಾಧಿಸುವ ಅಪಾರ ಭಕ್ತರು ಇದ್ದರೆ ಇಡೀ ಜಗತ್ತೆ ಶ್ರೀ ಕೃಷ್ಣನ ಬಗ್ಗೆ ಅಪಾರವಾದ ಭಕ್ತಿ ಗೌರವ ಹೊಂದಿದ್ದಾರೆ. ಎಂದರು. ಕಾರ್ಯಕರ್ಮದಲ್ಲಿ ಯಾದವ ಸಮಾಜದ ಮುಖಂಡರಾದ ಶಿವಮೂರ್ತಿ ಸ್ವಾಗತಿಸಿದರು.

ತಹಶೀಲ್ದಾರ್ ಬಿಬಿ ಫಾತೀಮಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಜುನಾಥ, ಪುರಸಭೆ ಮುಖ್ಯಾಧಿಕಾರಿ ವಾಸೀಂ, ಬಿಸಿಎಂ ಇಲಾಖೆಯ ಪ್ರಧೀಪ್. ಯಾದವ ಸಮಾಜದ ಮುಖಂಡರಾದ ತಿಮ್ಮಣ್ಣ, ಚಿತ್ತಪ್ಪ, ಬಂಗಾರಪ್ಪ, ಬಸವರಾಜ್, ಸುರೇಶ್, ಅಣ್ಣಪ್ಪ, ಇನ್ನು ಮುತಾಂದ ಅನೇಕ ಮುಖಂಡರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು…

ವರದಿ. ಸುರೇಶ್. ಹೊಳಲ್ಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend