ಕೂಡ್ಲಿಗಿ ಶ್ರೀಕೃಷ್ಣ ಜನ್ಮಾಷ್ಟಮಿ: “ರಾಧಾ ಕೃಷ್ಣ” ವೇಷದಲ್ಲಿ ಸಂಭ್ರಮಿಸಿದ ಮಕ್ಕಳು…!!!

ಕೂಡ್ಲಿಗಿ ಶ್ರೀಕೃಷ್ಣ ಜನ್ಮಾಷ್ಟಮಿ: “ರಾಧಾ ಕೃಷ್ಣ” ವೇಷದಲ್ಲಿ ಸಂಭ್ರಮಿಸಿದ ಮಕ್ಕಳು-ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಲ್ಲಿ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಧಾರ್ಮಿಕ ಶ್ರದ್ಧಾವಂತರು, ತಮ್ಮ ಮಕ್ಕಳಿಗೆ ರಾಧಾ ಕೃಷ್ಣ ರ ವೇಷ ತೊಡಿಸಿ ಸಂಭ್ರಮಿಸಿದರು. ಕೆಲ ಶಾಲೆ ಕಾಲೇಜುಗಳಲ್ಲಿಯೂ ಕೂಡ, ಸ್ವಯಂ ಪ್ರೇರಣೆಯಿಂದ ಸಾಕ್ಷಾತ್ ರಾಧಾ ಕೃಷ್ಣ ರಂತೆ, ವೇಷ ಭೂಷಣ ಹಾಕಿಕೊಂಡು ಸಂಭ್ರಮಿಸಿದರು. ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ, ದೇವಸ್ಥಾನಗಳಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ದೆ ಭಕ್ತಿಯಿಂದ ಆಚರಿಸಲಾಯಿತು. ಪಟ್ಟಣ ಬಾಲಪ್ರತಿಭೆ ಬಿ.ಎಸ್.ಹರಣಿ ರಾಧಾ ಳಂತೆ, ವೇಷ ಭೂಷಣ ತೊಟ್ಟು ಸಂಭ್ರಮಿಸಿದಳು. ಪಟ್ಟಣದ ಸ್ಪಂದನ ಶಾಲೆಯ ಹಲವು ಮಕ್ಕಳು, ರಾಧಾ ಕೃಷ್ಣ ರಂತೆ ವೇಷ ಭೂಷಣ ತೊಟ್ಟು ಬಹು ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಮಹಾಲಕ್ಷ್ಮಿ ಸೇರಿದಂತೆ, ಶಿಕ್ಷಕಿಯರು ಹಾಗೂ ಸಿಬ್ಬಂದಿ ಮಕ್ಕಳಿಗೆ ಪ್ರೋತ್ಸಾಹಿಸಿದರು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend