;

ಹೊಸಪೇಟೆ:CPIM ಪಕ್ಷದಿಂದ ಜಿಲ್ಲಾ ಮಟ್ಟದ ವಿದ್ಯುತ್ ಸಮಾವೇಶ…!!!

ಹೊಸಪೇಟೆ:CPIM ಪಕ್ಷದಿಂದ ಜಿಲ್ಲಾ ಮಟ್ಟದ ವಿದ್ಯುತ್ ಸಮಾವೇಶ -ವಿಜಯನಗರ ಜಿಲ್ಲೆ ಹೊಸಪೇಟೆ:ನಗರದ ಅಂಬೇಡ್ಕರ್ ಬುದ್ಧ ಬಸವ ಭವನದಲ್ಲಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದ)ದಿಂದ ಸೆ5ರಂದು ಜಿಲ್ಲಾ ಮಟ್ಟದ ವಿದ್ಯುತ್ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ವಿದ್ಯುತ್ ಖಾಸಗೀಕರಣ ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆ,ಹಾಗೂ ಆಧಾರ್ ನೊಂದಣಿ ಯನ್ನು ಮಾಡಿಸುವುದನ್ನು ಪ್ರತಿರೋಧಿಸಲಾಯಿತು. ಸಂಬಂಧಿಸಿದಂತೆ ಮುಖಂಡರು ಸರ್ಕಾರದ ನಿಲುವನ್ನು ತೀವ್ರವಾಗಿ, ಖಂಡಿಸಿ ಮಾತನಾಡಿದರು. ಸಿಪಿಐ ಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಸಮಾವೇಶ ಉದ್ಘಾಟಿಸಿದರು. ಪಕ್ಷದ ರಾಜ್ಯ ಮುಖಂಡರಾದ ಎಮ್.ಜಂಬಯ್ಯನಾಯಕ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಿ.ಮಾಳಮ್ಮ, ಆರ್.ಭಾಸ್ಕರ ರೆಡ್ಡಿ, ಜಿಲ್ಲಾ ಸಮಿತಿಯ ಮುಖಂಡರು ಎ.ಕರುಣಾನಿಧಿ, ಎಸ್.ಜಗನಾಥ್, ಎಂ.ಗೋಪಾಲ್, ವಿ.ಸ್ವಾಮಿ, ಯಲ್ಲಲಿಂಗ ಸೇರಿದಂತೆ ಮತ್ತಿತರರು ಸಮಾವೇಶದ ವೇದಿಕೆಯಲ್ಲಿದ್ದರು. ಸಮಾವೇಶದಲ್ಲಿ ರಾಜ್ಯ ಹಾಗೂ ಜಿಲ್ಲಾ ಪ್ರಮುಖ ಮುಖಂಡರು, ಸಮಾವೇಶವನ್ನುದ್ಧೇಶಿಸಿ ಮಾತನಾಡಿದರು. ಸಮಾವೇಶದಲ್ಲಿ ಜಿಲ್ಲೆ ಹಾಗೂ ವಿವಿದ ತಾಲೂಕುಗಳ ಪ್ರಮುಖ ಪದಾಧಿಕಾರಿಗಳು, ವಿವಿದ ಘಟಕಗಳ ಕಾರ್ಯಕಾರಣಿ ಸದಸ್ಯರು ಭಾಗಿಯಾಗಿದ್ದರು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;