ಹಿಟ್ನಾಳ ಮತ್ತು ಕಂಪಸಾಗರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ..ಕೊಪ್ಪಳ ಜಿಲ್ಲೆಯ ಹಿಟ್ನಾಳ ಮತ್ತು ಕಂಪಸಾಗರ ಗ್ರಾಮದಲ್ಲಿ ವಿಶೇಷ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆಯ ಜನಜಾಗೃತಿ ಕಾರ್ಯಕ್ರಮ.
ದಿನಾಂಕ: 06-09-2023ರಂದು ಕೊಪ್ಪಳ ಜಿಲ್ಲೆಯ ಹಿಟ್ನಾಳ ಮತ್ತು ಕಂಪಸಾಗರ ಗ್ರಾಮದಲ್ಲಿ ಪಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕು ಹೊಸಪೇಟೆ ಬ್ರಾಂಚ್ ಹಾಗೂ ಸೇವಾ ಮೊಬ್ ಸಹ ಭಾಗಿತ್ವದಲ್ಲಿ ವಿಶೇಷ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತಹೀನತೆಯ ಜನಜಾಗೃತಿ ಕಾರ್ಯಕ್ರಮವನ್ನು ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಗ್ರಾಮಸ್ತರಿಗೆ ಬಿ.ಪಿ, ಶುಗರ್ ಹಾಗು ರಕ್ತ ತಪಾಸಣೆ ಮಾಡಿ, ಉಚಿತ ಮಾತ್ರೆಗಳನ್ನು ನೀಡಲಾಯಿತು, ಅಲ್ಲದೆ ರಕ್ತಹೀನತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ 200 ಕ್ಕೆ ಹೆಚ್ಚು ಗ್ರಾಮಸ್ಥರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು. ಈ ಶಿಬಿರವನ್ನು ಆಯೋಜಿಸಿದ್ದ ಗ್ರಾಮದ ಗ್ರಾಮದ ಗ್ರಾಮಸ್ಥರು, ಪಿನ್ ಕೇರ್ ಫೈನಾನ್ಸ್ ಬ್ಯಾಂಕಿನ ಮುಖ್ಯಸ್ಥರಾದ ಶ್ರೀ ಭೂಪತಿ ರೆಡ್ಡಿ, (ZH) ಶ್ರೀ ಸುರೇಶ್ ಬಾಬು (DM), ಪರಮೇಶ(DM-CSR), ಶ್ರೀ ಅಣ್ಣಾ ರಾವ್, Dr. ವಿಜಯ್ ಹಾಗೂ ಸೇವಾ ಮೊಬ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಗ್ರಾಮದ ಎಲ್ಲ ಸದಸ್ಯರು ಭಾಗವಹಿಸಿದ್ದರು…

ವರದಿ. ಮಂಜುನಾಥ್ ದೊಡ್ಡಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
