ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ…!!!

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ.

ಸಿಂಧನೂರು :ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾದಿಕಾರಿಗಳು ಸಿಂಧನೂರು ವತಿಯಿಂದ ಜೂನಿಯರ್ ಕಾಲೇಜಿನಲ್ಲಿ ಪ್ರೌಢಶಾಲಾ ಮಟ್ಟದ ದಾಸ ಶ್ರೇಷ್ಠ ಕನಕದಾಸರ ಜಯಂತಿ ಹಾಗೂ ವೀರವನಿತೆ ಒನಕೆ ಓಬವ್ವ ಜಯಂತಿ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ನಗರದ ತಹಸೀಲ್ ಕಛೇರಿ ಯಲ್ಲಿ ಕನಕದಾಸ ಹಾಗೂ ವೀರವನಿತೆ ಒನಕೆ ಓಬವ್ವ ಜಯಂತಿ ದಿನದಂದು ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಸಕ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ ಬಹುಮಾನ ವಿತರಣೆ ಮಾಡಿದರು.


ಕನಕದಾಸರ ಜಯಂತಿ ಕುರಿತು ಪ್ರಬಂಧ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪದ್ದಮ್ಮ/ಹಿರೇದುರುಗಪ್ಪ 10ನೇ ತರಗತಿ ಪಗಡದಿನ್ನಿ, ದ್ವಿತೀಯ ಸ್ಥಾನ ಸಂಜನಾ/ಅಮರೇಶ 10ನೇ ತರಗತಿ ವಿರುಪಾ ಪೂರು, ತೃತೀಯಾ ಸ್ಥಾನ ಬಿ. ಬಸವಕುಮಾರ/ ಅಮರೇಶ 10ನೇ ತರಗತಿ ಜ್ಞಾನ ಜ್ಯೋತಿ ಪ್ರೌಢ ಶಾಲೆ, ವೀರವನಿತೆ ಒನಕೆ ಓಬವ್ವ ಜಯಂತಿ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಲ್ಲವಿ /ಶರಣೇಗೌಡ 10ನೇ ತರಗತಿ ವಿರುಪಾಪೂರು, ದ್ವಿತೀಯ ಸ್ಥಾನ ಸಣ್ಣ ಹುಸೇನಪ್ಪ ಕೆ. 9ನೇ ತರಗತಿ ಸುಕಾಲಪೇಟೆ, ತೃತೀಯ ಸ್ಥಾನ ಮಂಜುಳಾ/ಅಶೋಕ 10ನೇ ತರಗತಿ ಪಗಡದಿನ್ನಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ, ಸೋಮನಗೌಡ ಬಾದರ್ಲಿ, ತಹಸೀಲ್ದಾರ ಅರುಣ್ ಹೆಚ್ ದೇಸಾಯಿ,ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಬಿಇಓ ಶರಣಪ್ಪ ವಟಗಲ್, ‌‌ತಾ.ಪ.ಇಓ ಲಕ್ಷ್ಮೀದೇವಿ, ಚಲವಾದಿ ಮಹಾಸಭಾದ ಅಧ್ಯಕ್ಷ ರಾಮಣ್ಣ ಗೋನ್ವಾರ, ಕುರುಬರ ಸಂಘದ ಅಧ್ಯಕ್ಷ ಬಸವರಾಜ, ಶಿವನಗೌಡ ಗೋರೆಬಾಳ, ಅಮರೇಗೌಡ ವಿರುಪಾಪುರು, ನರಸಪ್ಪ ಕಟ್ಟಿಮನಿ, ಖಾಜಿ ಮಲ್ಲಿಕ್, ಜಿಲಾನಿಪಾಷ, ಅಯ್ಯಪ್ಪ ವಕೀಲರು, ಶರಣ ಬಸವ ಮಲ್ಲಾಪೂರು ಇನ್ನಿತರರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend