ದೇಶದಲ್ಲಿ ಮಹಿಳೆಯರಿಗೆ ಪೂಜ್ಯ ಭಾವನೆ ನೀಡಲಾಗುತ್ತಿದೆ – ನಾಡಗೌಡ…!!!

ದೇಶದಲ್ಲಿ ಮಹಿಳೆಯರಿಗೆ ಪೂಜ್ಯ ಭಾವನೆ ನೀಡಲಾಗುತ್ತಿದೆ – ನಾಡಗೌಡ.

ಸಿಂಧನೂರು :ನ.11.ನಮ್ಮ ದೇಶದಲ್ಲಿ ಮಹಿಳೆ ಯರಿಗೆ ಪೂಜ್ಯ ಭಾವನೆ ಯನ್ನು ನೀಡಲಾಗುತ್ತದೆ. ಅದರಲ್ಲಿ ಒನಕೆ ಓಬವ್ವ ಕೂಡ ಒಬ್ಬರು.ಅವರ ಜಯಂತಿ ಆಚರಣೆ ಮಾಡುವುದರಲ್ಲಿ ಅರ್ಥವಿದೆ. ಮುಂದುವರೆದ ರಾಷ್ಟ್ರಗಳಲ್ಲಿ ಮಹಿಳೆಯರು ಮುಂದೆ ಬಂದಿಲ್ಲ, ಅವರಿಗೆ ಯಾವುದೇ ಸ್ಥಾನ ಮಾನ ನೀಡಿಲ್ಲ, ನಮ್ಮ ದೇಶದಲ್ಲಿ ಮಹಿಳೆಯರು ಮುಂದೆ ಇದ್ದಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.
ನಗರದ ಕನಕ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ನಂತರ ಮಿನಿ ವಿಧಾನಸೌಧದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕನಕ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.


ಸರ್ವಜ್ಞನ ವಚನಗಳ ನಂತರ ದಾಸಸಾಹಿತ್ಯದಲ್ಲಿ ಪುರಂದರ ದಾಸರ ಹಾಗೂ ಕನಕದಾಸರ ಎರಡು ವ್ಯಕ್ತಿಗಳ ಹೆಸರು ಮುಂಚೂಣಿ ಇದ್ದವು. ಕನಕ ದಾಸರು ಬದುಕಿನ ಅಂಕುಡೊಂಕು ಗಳನ್ನು ಎತ್ತಿ ತೋರಿದರು.ಧರ್ಮಗಳು ಎಲ್ಲಿ ಸ್ಥಾಪನೆಯಾಗಿವೆ ಎಂಬ ಉದಾಹರಣೆ ಇದ್ದವು. ಜಾತಿಗಳು ಹೆಮ್ಮರ ವಾಗಿ ಬೆಳೆದಿದ್ದವು, ಆದರೆ ಹೇಗೆ ಹುಟ್ಟಿಕೊಂಡವು ಎಂಬುದು ಯಾರಿಗೂ ತಿಳಿದಿರಲಿಲ್ಲ.ಕನಕದಾಸರು ಅದನ್ನು ಕಂಡು ಹಿಡಿದರು.ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಹೋರಾಡಿದರು.ಅವರ ಆದರ್ಶ ಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳದಿದ್ದರು ಸ್ವಲ್ಪ ಮಟ್ಟಿಗೆ ಯಾದರೂ ಅಳವಡಿಸಿಕೊಳ್ಳಬೇಕು ಎಂದರು.
ಕನಕದಾಸರು ಕವಿ, ಸಾಹಿತ್ಯ,ಸಂತ ಶ್ರೇಷ್ಠರಾಗಿದ್ದು ಅವರು ಜನಿಸಿದ ಈ ಪುಣ್ಯಭೂಮಿಯಲ್ಲಿ ನಾವೆಲ್ಲ ಜೀವಿಸುತ್ತಿರುವುದೇ ನಮ್ಮ ಸೌಭಾಗ್ಯವಾಗಿದೆ. ಎಲ್ಲಾ ಸುಖ ಸಂಪತ್ತು ವೈಭೋಗ ಎಲ್ಲಾವನ್ನು ತ್ಯಾಗಮಾಡಿ ಸಮಾಜದ ಅಂಕುಡೊಂಕು, ಮೇಲು ಕೀಳು ಸರಿಮಾಡಲು ಸಾಮಾಜಿಕ ವ್ಯವಸ್ಥೆ ವಿರುದ್ಧ ಒಬ್ಬಂಟಿಯಾಗಿ ಹೋರಾಡಿದರು. ನಾವೆಲ್ಲರೂ ಸ್ವಾರ್ಥಕತೆಯನ್ನು ಬಿಟ್ಟು ಸ್ವಾಭಿಮಾನಿ ಗಳಾಗಿ ಮುನ್ನಡೆಯಬೇಕು.ಇಂತಹ ಶ್ರೇಷ್ಠ ಸಂತರ ಮಾರ್ಗದಲ್ಲಿ ಜೀವಿಸುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ.ಮಹಿಳೆಯರು ತಾಳ್ಮೆ ಮತ್ತು ಛಲವನ್ನು ಹೊಂದಿರುತ್ತಾರೆ. ನಾವೂ ಯಾವುದರಲ್ಲೂ ಕಡಿಮೆ ಇಲ್ಲ ನಾವೆಲ್ಲರೂ ಸಮಾನರು ಎನ್ನುವುದಕ್ಕೆ ಒನಕೆ ಓಬವ್ವ ಸಾಕ್ಷಿ. ಇಂತಹ ಮಹನೀಯರ ಜಯಂತಿ ಆಚರಣೆ ಮಾಡಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಕೆ. ವಿರೂಪಾಕ್ಷಪ್ಪ ಮಾತನಾಡಿದರು.
ಸಮಾಜದಲ್ಲಿ ನಡೆಯುವ ಅನ್ಯಾಯ ಅಸಮಾನತೆ ಜಾತೀಯತೆ ವಿರುದ್ಧ ತಂಬೂರಿ ಮೂಲಕ ಜನರನ್ನು ಕನಕದಾಸರು ಎಚ್ಚರಗೋಳಿ ಸಿದರು ಎಂದು ನೀರುಪಾದೆಪ್ಪ ವಕೀಲರು ಕನಕದಾಸರ ಕುರಿತು ಉಪನ್ಯಾಸ ನೀಡಿದರು.
ಬೀರಪ್ಪ ಶಂಬೋಜಿ ಯಾವುದೇ ತರಬೇತಿ ಪಡೆಯದೇ ಸಂದರ್ಭಕ್ಕೆ ತಕ್ಕಂತೆ ಹೋರಾಟ ಮಾಡಿದ ಮಹಿಳೆಯರಲ್ಲಿ ಒನಕೆ ಓಬವ್ವ ಒಬ್ಬರು. ತನ್ನ ಪತಿ ಊಟಕ್ಕೆ ಕುಳಿತಾಗ ಸೈನಿಕರು ಮುತ್ತಿಗೆ ಹಾಕಿದಾಗ ಅವರನ್ನು ಎಬ್ಬಿಸದೇ ಕೈಗೆ ಸಿಕ್ಕ ಒನಕೆಯನ್ನು ಹಿಡಿದು ಶತ್ರು ಸೈನ್ಯವನ್ನು ಸದೆಬಡಿದಳು ಎಂದು ವೀರವನಿತೆ ವನಕೆ ಓಬವ್ವ ಕುರಿತು ಉಪನ್ಯಾಸ ನೀಡಿದರು.
ತಹಸೀಲ್ದಾರ ಅರುಣ್ ಹೆಚ್ ದೇಸಾಯಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕನಕದಾಸರ ಹಾಗೂ ಒನಕೆ ಓಬವ್ವ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ದ್ವಿತೀಯ, ತೃತೀಯ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿದರು.
ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾ.ಪ.ಇಓ ಲಕ್ಷ್ಮೀದೇವಿ, ಚಲವಾದಿ ಮಹಾಸಭಾದ ಅಧ್ಯಕ್ಷ ರಾಮಣ್ಣ ಗೋನ್ವಾರ, ಕುರುಬರ ಸಂಘದ ಅಧ್ಯಕ್ಷ ಬಸವರಾಜ, ಶಿವನಗೌಡ ಗೋರೆಬಾಳ, ಅಮರೇಗೌಡ ವಿರುಪಾಪುರು,ನರಸಪ್ಪ ಕಟ್ಟಿಮನಿ, ಖಾಜಿ ಮಲ್ಲಿಕ್, ಜಿಲಾನಿಪಾಷ, ಅಯ್ಯಪ್ಪ ವಕೀಲರು, ಶರಣಬಸವ ಮಲ್ಲಾಪೂರು,ನೀರುಪಾದಿ ಸಾಸಲಮರಿ ಇನ್ನಿತರರಿದ್ದರು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend