ಜವಳಗೇರಾ ಲಾರಿ ಬೈಕ್ ಅಪಘಾತ ಬೈಕ ಸವಾರ ಸಾವು…!!!

ಜವಳಗೇರಾ ಲಾರಿ ಬೈಕ್ ಅಪಘಾತ ಬೈಕ ಸವಾರ ಸಾವು.

ಸಿಂಧನೂರ. ನ.11 ಲಾರಿಗೆ ಬೈಕ ಡಿಕ್ಕಿ ಒಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿ ರುವ ಘಟನೆ ಮಣ್ಣಿಕೇರ ಕ್ಯಾಂಪ ಹತ್ತಿರ ತಡರಾತ್ರಿ ಅಪಘಾತ ಸಂಭವಿಸಿದೆ.
ತಾಲ್ಲೂಕಿನ ಜವಳಗೇರಾ ಗ್ರಾಮದ ಹತ್ತಿರ ಇರುವ ಮಣ್ಣಿಕೇರಿಕ್ಯಾಂಪ ಹತ್ತಿರ ನಿಂತ ಲಾರಿಗೆ ಬೈಕ್ ಡಿಕ್ಕಿ ಒಡೆದು ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದು ಮೃತಪಟ್ಟ ಬೈಕ್ ಸವಾರ ಮಂಜುನಾಥ ಎಂದು ತಿಳಿದು ಬಂದಿದೆ.
ನೆಲ್ಲು ಕೊಯ್ಯುವ ಮೀಷನ ರಿಪೇರಿ ಮಾಡಿಸುವ ಸಂಬಂಧ ನಿನ್ನೆ ರಾತ್ರಿ ಜವಳಗೇರಾ ಗ್ರಾಮದಿಂದ ಮಾನ್ವಿಗೆ ಹೋಗಿ ಮರಳಿ ಮನೆಗೆ ಬರುವಾಗ ನಿನ್ನೆ ರಾತ್ರಿ 9ಕ್ಕೆ ಮಣ್ಣಿಕೇರಿ ಕ್ಯಾಂಪ ಹತ್ತಿರ ನಿಲ್ಲಿಸಿದ ಲಾರಿಗೆ ಬೈಕ್ ಡಿಕ್ಕಿ ಒಡೆದು ಬೈಕ ಸವಾರ ಮಂಜುನಾಥ ತಂದೆ ದಿ.ಬಸವರಾಜ ವಯಸ್ಸು:28 ಜಾತಿ :ಕುರಬರು ಗೌಡನಬಾವಿ ಮೃತಪಟ್ಟಿದ್ದಾನೆ.
ಅಪಘಾತ ನಡೆದ ಸ್ಥಳಕ್ಕೆ ಬಳಗಾನೂರ ಪೊಲೀಸ ಠಾಣೆಯ ಪಿಎಸ್ಐ ವೀರುಪಾಕ್ಷಪ್ಪ ಶೆಟ್ಟಿ ಬೇಟಿ ನೀಡಿ ಮೃತ ವ್ಯಕ್ತಿಯ ಶವನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆಯ ನಂತರ ಶವನ್ನು ಕುಟುಂಬಸ್ಥರಿಗೆ ನೀಡಿ ಆಂಜನೇಯ ಸಂಗಟಿ ನೀಡಿದ ದೂರಿನ ಮೇರೆಗೆ ಬೈಕ್ ಚಾಲಕ ಹಾಗೂ ಲಾರಿ ಚಾಲಕನ ವಿರುದ್ಧ ಬಳಗಾನೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಲಾರಿ ಚಾಲಕನ ಹೆಸರು ಹಾಗೂ ವಿಳಾಸ ತಿಳಿದು ಬಂದಿಲ್ಲ..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend