ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನಡೆಸಲು ಹೆಚ್ಚಿನ ಸಮಯ ನೀಡುವ ಅನುಮತಿ,ಕೋವಿಡ್ ಹಿನ್ನೆಲೆ ಕರ್ಫ್ಯೂ ಇರುವ ದಿನಗಳಲ್ಲಿ ವ್ಯಾಪಾರ ಮಾಡಲು ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಪಟ್ಟಣದ ವ್ಯಾಪಾರಸ್ಥರು ಸಬ್ ಇನ್ಸ್ಪೆಕ್ಟರ್ ಗೆ ಮನವಿ. ಸರ್ಕಾರದ ಆದೇಶಗಳನ್ನು ಕಾರ್ಯರೂಪಕ್ಕೆ ತಂದು ಪರಿಪಾಲನೆ ಮಾಡುವುದಷ್ಟೇ ನಮ್ಮ ಕರ್ತವ್ಯ ವ್ಯಾಪಾರಸ್ಥರಿಗೆ ಹೆಚ್ಚಿನ ಅವಧಿ ಕಲ್ಪಿಸಲು ಅನುಮತಿ ನೀಡಲು ನಮಗೆ ಬರುವುದಿಲ್ಲ ಮೊಳಕಾಲ್ಮುರು ಸಬ್ ಇನ್ಸ್ಪೆಕ್ಟರ್ ಬಸವರಾಜ್ ಹೇಳಿಕೆ. ಸರ್ಕಾರದ ಆದೇಶದನ್ವಯ ಪೊಲೀಸ್ ಇಲಾಖೆ ಕೆಲಸ ಮಾಡುತ್ತದೆ. ಸಮಯದ ವಿಸ್ತರಣೆ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ರವರೇ ನಿಮಗೆ ಅನುಮತಿ ನೀಡಬೇಕು ಇದು ನಮ್ಮ ವ್ಯಾಪ್ತಿಗೆ ಬರೋಲ್ಲ. ಸರ್ಕಾರವು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದು ಸರ್ಕಾರ ಅಣತಿಯಂತೆ ನಾವು ಕೆಲಸ ಮಾಡುತ್ತೇವೆ. ಕೋವಿಡ್ ನಿಯಮಗಳನ್ನು ಎಲ್ಲರೂ ಅನುಸರಿಸಬೇಕು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿಮ್ಮ ಎಲ್ಲರ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ ಎಂದು ಹೇಳಿದರು.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
