ಚಿತ್ರದುರ್ಗ: ಮೊಳಕಾಲ್ಮುರು: ಪಟ್ಟಣದ ತಾಲೂಕು ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೋಟೆಲ್ ಮತ್ತು ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗೆ ಅವಕಾಶವಿದೆ. ಸರ್ಕಾರವು ಹೊರಡಿಸುವ ಕೋವಿಡ್ ಮಾರ್ಗಸೂಚಿಗಳನ್ನು ಜನರು ಅನುಸರಿಸಬೇಕು. ಜನರ ಅನುಕೂಲಕ್ಕೆ ತಕ್ಕಂತೆ ಅಗತ್ಯ ಸೇವೆಗಳಿಗೆ ಸರ್ಕಾರ ಅನುಮತಿ ನೀಡಲಾಗಿದೆ. ಕಿರಾಣಿ ಅಂಗಡಿಗಳು ನ್ಯಾಯಬೆಲೆ ಅಂಗಡಿ ದಿನಸಿ ಅಂಗಡಿಗಳು ಹಣ್ಣು ಮತ್ತು ತರಕಾರಿಗಳು ಮಾಂಸ ಮತ್ತು ಮೀನು ಆಹಾರ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ ಎಂದು ಚಿತ್ರದುರ್ಗ ಎಸಿ ಪ್ರಸನ್ನಕುಮಾರ್ ತಿಳಿಸಿದ್ದಾರೆ. ಬ್ಯಾಂಕುಗಳು ವಿಮಾ ಕಚೇರಿಗಳು ಎಟಿಎಂ ಗೆ ಅನುಮತಿ ನೀಡಲಾಗಿದ್ದು ಕಟಿಂಗ್ ಶಾಪ್ ಗಳು ಹಾಗೂ ಬ್ಯೂಟಿ ಪಾರ್ಲರ್ ಗಳಿಗೆ ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳನ್ವಯ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಕೋವಿಡ್ ನಿಂದ ಪಾರಾಗಲು ಜನರು ಸ್ವಯಂ ಇಚ್ಛೆಯಿಂದ ಲಾಕ್ ಡೌನ್ ಅವಶ್ಯಕವಾಗಿದೆ ಎಂದು ಪರಿಗಣಿಸಿದರೆ.
ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
