ಹೊಸಕೇರಿ:97ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ವಶಕ್ಕೆ…!!!

ಹೊಸಕೇರಿ:97ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ವಶಕ್ಕೆ*

-ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಹೊಸಕೇರಿ ಗ್ರಾಮದ ಹೊರವಲಯದಲ್ಲಿ, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 2.79ಲಕ್ಷ ರೂ ಮೌಲ್ಯದ 97.50ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಕೂಡ್ಲಿಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ,
ಹೊಸಕೇರಿ ಗ್ರಾಮದ ನಾಗರಾಜ್ ಎಂಬುವವರ ತೋಟದ ಮನೆಯಲ್ಲಿ ಗಿಡ್ಡಪ್ಪ ಹಾಗೂ ವೀರೇಶ ಎಂಬುವವರು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು.
ಖಚಿತ ಮಾಹಿತಿಯನ್ನಾಧರಿಸಿ ಆಹಾರ ಇಲಾಖಾಧಿಕಾರಿ ಮಲ್ಲಿಕಾರ್ಜುನರವರು, ಕೂಡ್ಲಿಗಿ ಸಿಪಿಐ ವಸಂತ ಅಸೋದೆ ನೇತೃತ್ವದಲ್ಲಿ ಪಿಎಸ್ಐ ಡಿ.ಸುರೇಶ್ ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ.ದಾಳಿ ಮಾಡಿ 97.50ಕ್ವಿಂಟಾಲ್ ಒಟ್ಟು 243ಅಕ್ಕಿ ಮೂಟೆಗಳನ್ನು ವಸಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಿಡ್ಡಪ್ಪ ಹಾಗೂ ವೀರೇಶ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು,ಪ್ರಮುಖ
ಆರೋಪಿ ನಾಗರಾಜ ತಲೆಮರೆಸಿಕೊಂಡಿದ್ದಾನೆಂದು ತಿಳಿದುಬಂದಿದೆ….

ವರದಿ. ಧನಂಜಯ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend