ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಹೊಸಹಳ್ಳಿ ಹೋಬಳಿಯಲ್ಲಿ ಮತಯಾಚನೆ…!!!

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಹೊಸಹಳ್ಳಿ ಹೋಬಳಿಯಲ್ಲಿ ಮತಯಾಚನೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೊಸಳ್ಳಿ ಹೋಬಳಿ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ನಿಷ್ಠಿರುದ್ರಪ್ಪ ಶುಕ್ರವಾರದಂದು ಹೊಸಹಳ್ಳಿ ಹೋಬಳಿಯ ಕನ್ನಡಸಾಹಿತ್ಯಪರಿಷತ್ತಿನ ಮತದಾರರ ಮನೆ ಮನೆಗಳಿಗೆ ತೆರಳಿ ಮತಯಾಚಿಸಿದರು

ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಿಸುವ ಯೋಜನೆ ಹೊಂದಿದ್ದೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿ ನಿಷ್ಠಿರುದ್ರಪ್ಪ ಮತಯಾಚಿಸಿದರು.
ಮತಯಾಚನೆ ಬಳಿಕ ಮಾತನಾಡಿ ನಿಷ್ಠಿರುದ್ರಪ್ಪ ಜಿಲ್ಲೆಯಲ್ಲಿ ಸದಾ ಸಾಹಿತಿಕ ಮತ್ತು ಸಾಂಸ್ಕೃತಿಕ ವಾತಾವರಣವನ್ನು ನಿರ್ಮಾಣ ಗೊಳಿಸುವ ಆಶಯ ವ್ಯಕ್ತಪಡಿಸಿದರು ಅಲ್ಲದೆ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಸಮ್ಮೇಳನ ದೊಂದಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿ ಜಿಲ್ಲೆಯಲ್ಲಿ ಆಯೋಜಿಸುವ ಅಭಿಲಾಷೆ ಹೊಂದಿದ್ದೇನೆ. ಮತದಾರರು ಮತನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ಮತಯಾಚನೆಯಲ್ಲಿ ಪ್ರಮುಖರಾದ ಮಾಜಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ ರವಿಕುಮಾರ್.ಡಾಕ್ಟರ ವೃಷಭೇಂದ್ರ ಚಾರ್, ಕೆಜಿ ಕುಮಾರ ಗೌಡ, ಶಾಮ ಸುಂದರ ಸಫಾರಿ, ವೀರೇಶ್ ಕಿಟ್ಟಪ್ಪ ನವರ್, ಧನಂಜಯ ಲೋಕಿಕೆರೆ,ವೆಂಕಟೇಶ್ ಸಫಾರ್, ಸಾಹಿತಿ ಯು ಜಗನ್ನಾಥ್, ಡಾಕ್ಟರ್ ಶರಣಪ್ಪ, ಮತ್ತು ಅಜೀವ ಸದಸ್ಯರುಗಳನ್ನು ಭೇಟಿ ಮಾಡಿ ಮತ ಹಾಕುವಂತೆ ಮತಯಾಚನೆ ಮಾಡಿದರು. ಮತ್ತಿತರರು ಉಪಸ್ಥಿತರಿದ್ದರು…

ವರದಿ ಕೆಎಸ್ ವೀರೇಶ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend