;

ಮಲ್ಲೇಬೋರನಹಟ್ಟಿ: ದೇವರ ಎತ್ತುಗಳಿಗೆ; ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯಿಂದ ಮೇವು ವಿತರಣೆ..!!

ವರದಿ. ಮಂಜುನಾಥ್. ಎಚ್

ಚಿತ್ರದುರ್ಗ: ನಾಯಕನಹಟ್ಟಿ/ ಅಬ್ಬೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇಬೋರನಹಟ್ಟಿ ಗ್ರಾಮದ ವಡಲೇಶ್ವರ ದೇವರ ಎತ್ತುಗಳಿಗೆ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯಿಂದ ಮೇವು ವಿತರಿಸಿ ಅವರು ಮಾತನಾಡಿದರು. ಹೋಬಳಿಯಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು, ಅಡವಿಯಲ್ಲಿ ದೇವರ ಎತ್ತುಗಳಿಗೆ ಮೇವು, ನೀರು ಇಲ್ಲದಂತಾಗಿದೆ. ಹಾಗಾಗಿ ದೇವರ ಎತ್ತುಗಳಿಗೆ ಮೇವು ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಕೆ.ಬಿ. ಓಬಣ್ಣ ಹೇಳಿದರು. ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಮ್ಯಾಸನಾಯಕ ಬುಡಕಟ್ಟು ಜನಾಂಗವು ವಿಶಿಷ್ಟವಾದ ಸಂಸ್ಕೃತಿ ಹೊಂದಿದೆ. ಜನಾಂಗವು ಹಿಂದಿನಿಂದಲೂ ಪಶುಪಾಲನೆ ಮತ್ತು ಪಶುಗಳ ಸಂರಕ್ಷಣೆಯಲ್ಲಿ ತೊಡಗಿದೆ. ತಮ್ಮ ಕಟ್ಟೆಮನೆಗಳು ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಗುಡಿಕಟ್ಟು ದೇವರುಗಳಿಗೆ ದೇವರ ಎತ್ತುಗಳನ್ನು ಬಿಡುವ ಪದ್ಧತಿ ಇದೆ.
ಈ ದೇವರ ಎತ್ತುಗಳನ್ನು ಪೋಷಣೆ ಮಾಡಲು ಕಿಲಾರಿಗಳು ಇದ್ದಾರೆ. ಅಡವಿಯಲ್ಲಿ ಮೇವು ಮತ್ತು ನೀರಿನ ಕೊರತೆಯಿಂದ ದೇವರ ಎತ್ತುಗಳು ಸಾಯುತ್ತಿವೆ. ಆದಕಾರಣ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯನ್ನು ರಚಿಸಿಕೊಂಡು ಎರಡೂ ತಾಲ್ಲೂಕಿನಲ್ಲಿರುವ ದೇವರ ಎತ್ತುಗಳಿಗೆ ಪ್ರತಿವರ್ಷ ಬೇಸಿಗೆಯಲ್ಲಿ ಮೇವು ಒದಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಮುಖಂಡ ಕಾಕಾಸೂರಯ್ಯ, ಜಗಳೂರು ತಾಲ್ಲೂಕಿನಿಂದ ಉಚಿತವಾಗಿ ಮೆಕ್ಕೆಜೋಳದ ಮೇವು ಸಂಗ್ರಹಿಸಿ. ಮಲ್ಲೇಬೋರನಹಟ್ಟಿ ವಡಲೇಶ್ವರ ದೇವರ ಎತ್ತುಗಳು, ಭೀಮಗೊಂಡನಹಳ್ಳಿ ಮತ್ತು ದಾಸರಮುತ್ತೇನಹಳ್ಳಿ ಓಬಳದೇವರು ದೇವರ ಎತ್ತುಗಳಿಗೆ, ಮಲ್ಲೂರಹಳ್ಳಿ ರಾಜಲುದೇವರು ದೇವರ ಎತ್ತುಗಳಿಗೆ ತಲಾ ಒಂದು ಲೋಡ್‌ನಷ್ಟು ಮೇವು ವಿತರಿಸಲಾಯಿತು. ನೆಲಗೇತಹಟ್ಟಿ ಚನ್ನಕೇಶವ ದೇವರ ಎತ್ತುಗಳಿಗೆ, ಕುದಾಪುರ, ಬೋಸೆದೇವರಹಟ್ಟಿ, ನನ್ನಿವಾಳ ಗ್ರಾಮಗಳ ದೇವರ ಎತ್ತುಗಳಿಗೆ ಮೇವು ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಮೇವು ಖಾಲಿಯಾದ ತಕ್ಷಣ ಮತ್ತೆ ಮೇವು ಒದಗಿಸಲಾಗುವುದು ಎಂದು ತಿಳಿಸಿದರು. ಮುಖಂಡ ಚಂದ್ರಣ್ಣ, ಟಿ.ಪಿ. ಮಂಜುನಾಥ, ಕೆ.ಸಿ. ರಮೇಶ, ಕಿಲಾರಿ ಪಾಲಯ್ಯ, ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;