ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: (ಏಪ್ರಿಲ್-22) ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಮಂಗಗಳ ಸರಣಿ ಸಾವಿನ ಪ್ರಕರಣ ವರದಿಯಾಗಿದೆ.* ಕೋತಿಗಳ ನಿಗೂಢ ಸಾವಿಗೆ ಕಾರಣ ತಿಳಿಯದೇ ಜನರು ಆತಂಕಗೊಂಡಿದ್ದಾರೆ. * ಮೊಳಕಾಲ್ಮುರು ತಾಲೂಕಿನ ರಾಂಪುರ ಗ್ರಾಮದಲ್ಲಿ ಇದುವರೆಗೂ ನಾಲ್ಕು ಕೋತಿಗಳು ಮೃತಪಟ್ಟಿವೆ. ನಿದ್ರಾವಸ್ಥೆಯಲ್ಲಿ ಕುಳಿತ ಮಂಗಗಳು ಏಕಾಏಕಿ ಮೃತಪಡುತ್ತಿವೆ. ವಿಷಾಹಾರ ಸೇವನೆ? ಇದಕ್ಕೆ ಕಾರಣವಿರಬಹುದೇ? ಎಂದು ಶಂಕಿಸಲಾಗಿದೆ. ಗ್ರಾಮದ 20 ಮಂದಿಗೆ ಕಚ್ಚಿದ ಒಂಟಿ ಮಂಗ, ಆತಂಕ ಗ್ರಾಮದಲ್ಲಿ ಇದೂವರೆಗೂ ನಾಲ್ಕಕ್ಕೂ ಹೆಚ್ಚು ಕೋತಿಗಳು ಸಾವನ್ನಪ್ಪಿವೆ. ಮೃತಪಟ್ಟಿರುವ ಕೋತಿಗಳಿಗೆ ಗ್ರಾಮಸ್ಥರು ಹಾಗೂ ಪೋಲಿಸರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮೃತ ಪಟ್ಟ ಕೋತಿಗಳಿಗೆ ಗ್ರಾಮಸ್ಥರು ಪೂಜೆಯನ್ನು ಸಲ್ಲಿಸಿ, ಪ್ರತ್ಯೇಕವಾದ ಗುಂಡಿ ತೋಡಿ ಸುರಕ್ಷಿತವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಒಂದೇ ಗ್ರಾಮದಲ್ಲಿ ಕೋತಿಗಳ ಸರಣಿ ಸಾವಿಗೆ ಕಾರಣ ಏನು? ಎಂಬುದು ಜನರ ಪ್ರಶ್ನೆಯಾಗಿದೆ. ಸರಣಿ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
