;

ಕೃಷಿ ಇಲಾಖೆ ಆತ್ಮ ಯೋಜನೆ ಅಡಿಯಲ್ಲಿ ಕೃಷಿಕರಿಗೆ ಏರ್ಪಡಿಸಿದ ತಾಲೂಕು ಮಟ್ಟದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ…!!

ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಗ್ರಾಮ*

*ತಾಲೂಕಿನ *ಕಾನಹೊಸಹಳ್ಳಿ* *ಗ್ರಾಮದಲ್ಲಿ ದಿನಾಂಕ. 26. 3 2021ರಂದು ಗಾಣಿಗರ ಸಮುದಾಯ ಭವನ ದಲ್ಲಿ ಭಾರತದ 75ನೇ ಸ್ವಾತಂತ್ರೋತ್ಸವದ ಆಚರಣೆ ಸ್ಮರಣಾರ್ಥ ಹಾಗೂ ಅಮೃತ ಮಹೋತ್ಸವದ ಅಂಗವಾಗಿ ಕೃಷಿ ಇಲಾಖೆ ಆತ್ಮ ಯೋಜನೆ ಅಡಿಯಲ್ಲಿ ಕೃಷಿಕರಿಗೆ ಏರ್ಪಡಿಸಿದ ತಾಲೂಕು ಮಟ್ಟದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.* ನೀರನ್ನು ಉಳಿಸಿ ಮಣ್ಣನ್ನು ಸಂರಕ್ಷಣೆ ಮಾಡಿ:– ಕೃಷಿ ಇಲಾಖೆಯ ಉಪನಿರ್ದೇಶಕ ಸಹದೇವ ಎರಗೊಪ್ಪ.
ಕೃಷಿ ಇಲಾಖೆ ಆತ್ಮ ಯೋಜನೆ ಅಡಿಯಲ್ಲಿ ಏರ್ಪಡಿಸಿದ್ದ ಕೃಷಿಕರ ತರಬೇತಿ ಕಾರ್ಯಕ್ರಮದಲ್ಲಿ ನೀರನ್ನು ಉಳಿಸಿ ಮಣ್ಣನ್ನು ಸಂರಕ್ಷಣೆ ಮಾಡದಿದ್ದಲ್ಲಿ ಮುಂದೊಂದು ದಿನ ಜಲ ಕ್ಷಾಮ ಉಂಟಾಗಿ ನೀರಿಗಾಗಿ ಯುದ್ಧ ಮಾಡುವ ಕಾಲ ಬರಬಹುದು. ಕುರಿತು ಇಂದು ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ ಹತ್ತು ವರ್ಷಗಳ ಮಳೆಯ ಪ್ರಮಾಣ ಲೆಕ್ಕ ಹಾಕಿದರೆ ವರ್ಷದಿಂದ ವರ್ಷ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ ಹಾಗೂ ಅಕಾಲಿಕ ಮಳೆಯಾಗುತ್ತಿದ್ದು ರೈತರ ಬೆಳೆಗಳಿಗೆ ತೊಂದರೆ ಉಂಟಾಗುತ್ತಿದೆ ಇದಕ್ಕೆ ಪರಿಹಾರ ಎಂದರೆ ಪ್ರತಿಯೊಬ್ಬರು ಮಳೆಯ ನೀರನ್ನು ಇಂಗಿಸಬೇಕು ಹಾಗೂ ಭೂಮಿಗೆ ವಿಷ ಉಣಿಸುವ ಕೆಲಸವನ್ನು ಬಿಡಬೇಕು ಮಳೆಬಂದಾಗ ಓಡುವ ನೀರನ್ನು ತಡೆಗಟ್ಟಿ ನಿಂತ ನೀರನ್ನು ಇಂಗಿಸಬೇಕು ಬೇಕು ಎಂದು ಹೊಸಪೇಟೆ ವಿಭಾಗದ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಸಹದೇವ ಎರಗೊಪ್ಪ ಹೇಳಿದರು.
ಸಂಪನ್ಮೂಲ ವ್ಯಕ್ತಿ ವಾಸುದೇವ್ ಮೂರ್ತಿ ಮಾತನಾಡಿ ಇವತ್ತಿನ ಕೃಷಿಯನ್ನು ಬದಲಾವಣೆ ಮಾಡಿಕೊಂಡರೆ ಮಾತ್ರ ಆರ್ಥಿಕವಾಗಿ ಕೃಷಿಕ ಸಧೃಡ ಆಗಬಹುದು ಒಂದು ಇಂಚು ಮಣ್ಣು ತಯಾರಾಗಲು 600 ವರ್ಷ ಬೇಕಾಗುತ್ತದೆ ಆರೋಗ್ಯವಂತ ಮಣ್ಣು ಇದ್ದರೆ ಮಾತ್ರ ಆರೋಗ್ಯಕರ ಬೆಳೆಗಳನ್ನು ಬೆಳೆಯಲು ಮಾತ್ರ ಸಾಧ್ಯ ನಾವು ಬೆಳೆಯುವ ಬೆಳೆಗಳಿಗೆ 17 ಪೋಷಕಾಂಶಗಳು ಬೇಕು ಅವೆಲ್ಲವೂ ರೈತರ ಮಿತ್ರ ಎರೆಹುಳುವಿ ನಿಂದ ಮಾತ್ರ ದೊರೆಯುತ್ತದೆ. ವಿಪರ್ಯಾಸ ಅಂದರೆ ವಿಪರೀತ ರಾಸಾಯನಿಕ ಸಿಂಪರಣೆ ಹಾಗೂ ಮಣ್ಣಿಗೆ ರಸಗೊಬ್ಬರ ಬಳಕೆಯಿಂದ ಹೆರೆಹುಳು ಸಾಯುತ್ತದೆ ಆಲೂರು ಆದುದರಿಂದ ರೈತರು ಆರೋಗ್ಯವಂತ ಬೆಳೆ ಬೆಳೆಯಬೇಕೆಂದರೆ ಮಣ್ಣನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಬೊಮ್ಮಯ್ಯ. ತಾಲೂಕು ಪಂಚಾಯಿತಿ ಅಧ್ಯಕ್ಷರಾದ ನಾಗರತ್ನಮ್ಮ ನಿಂಗಪ್ಪ. ತಾಲೂಕು ಪಂಚಾಯಿತಿ ಸದಸ್ಯರಾದ ಗುರು ಸಿದ್ದನಗೌಡ. ಹೂಡೇoಪಾಪನಾಯಕ. ಕೃಷಿ ಸಮಾಜದ ಬಣವಿಕಲ್ಲು ಎರಿಸ್ವಾಮಿ. ಪೂಜಾರಹಳ್ಳಿ ವಿಎಸ್ ಎಸ್ ಎನ್ ಓಬಳೇಶ್. ಕೃಷಿ ಮಹಿಳೆ ದ್ರಾಕ್ಷಾಯಣಮ್ಮ. ಹಾರಕಬಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುನಿಯಪ್ಪ. ಸಾವಯವ ಕೃಷಿಕರ ವಿಘ್ನೇಶ್ವರ ಸಜ್ಜನ್. ಶರಣಪ್ಪ ತಿಪ್ಪೇಸ್ವಾಮಿ ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಹಾಂತಮ್ಮ ಮಲಿಯಪ್ಪ. ಕೃಷಿ ಇಲಾಖೆಯ ಗುರುಬಸವರಾಜ್. ಚೈತ್ರ. ರಾಮಕೃಷ್ಣಪ್ಪ ಬಂಡ್ರಿ. ಚೀಲ ಗೋಲ್ಡ್ . ಗೌತಮ್ ಕುಮಾರ್. ರಾಕೇಶ್ . ರಾಜಪ್ಪ. ಕೃಷಿ ಇಲಾಖೆಯ ಶ್ರವಣ್ ಕುಮಾರ್ ಹೇಮನಗೌಡ. ನೂರಾರು ಕೃಷಿಕರು ಸುತ್ತಮುತ್ತಲಿನ ಹಳ್ಳಿಯ ರೈತರು ಸಾರ್ವಜನಿಕರು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ವರ್ಗ ಇಲಾಖೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;