ವರದಿ. ಧನಂಜಯ್

ಹಗರಿಬೊಮ್ಮನಹಳ್ಳಿ:ಮೈರಾಡ್ ಟಿ.ಬಿ.ರೀಚ್ ನಿಂದ ಜನ ಜಾಗ್ರತಾ ಜಾಥ*-
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಮಾ 26ರಂದು,ಮೈರಾಡ್ ಟಿ.ಬಿ.ರೀಚ್.ಮತ್ತು ಮಲ್ಲಿಗೆ ಸಮುದಾಯ ನಿಮ್ಮ ಹಿತ ಸಂಪನ್ಮೂಲ ಸಂಸ್ಥೆ,ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ. ವಿಶ್ವ ಕ್ಷಯರೋಗ ನಿರ್ಮೂಲನಾ ದಿನಾಚರಣೆ ಜರುಗಿತು.”ಕಾಲಘಟಿಸುತ್ತದೆ” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ಹಾಗೂ ಜಾಗ್ರತ ಜಾಥ ನೆರವೇರಿಸಲಾಯಿತು. ಜಾಥದಲ್ಲಿ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ,ಕ್ಷಯ ನಿರ್ಮೂಲನೆಯ ಘೋಷಣೆ ಕೂಗಿ ಜನತೆಯಲ್ಲಿ ಜಾಗ್ರತೆ ಮೂಡಿಸಿದರು.ತಾಲೂಕು ವೈದ್ಯಾಧಿಕಾರಿ ಡಾ”ಎಂ.ಶಿವರಾಜ್,ಕೋಗಳಿ ಉಪ ಆರೋಗ್ಯಕೇಂದ್ರದ ಆರೋಗ್ಯಾಧಿಕಾರಿ ಡಾ”ಗಂಗಾ,ಎಸ್.ಟಿಎಸ್.ನ ಎಂ.ಲಿಂಗರಾಜು,ಟಿ.ಬಿ.ರೀಚ್ ಹಾಗೂ ಮೈರಾಡ್ ವ್ಯವಸ್ಥಾಪಕ ಕೆ.ಮಲ್ಲಿಕಾರ್ಜುನ,ಮಲ್ಲಿಗೆ ಸ.ನಿ.ಸಂ ಸಂಸ್ಥೆ ಅಧ್ಯಕ್ಷೆ ವಸಂತಮ್ಮ,ವ್ಯವಸ್ಥಾಪಕಿ ಎಂ.ಸುಮಂಗಳ,ಹಗರಿಬೊಮ್ಮನಹಳ್ಳಿ ಪ್ರಾಥಮಿಕ ಆರೋಗ್ಯಕೇಂದ್ರದ ಸಿಬ್ಬದಿಯವರು ಹಾಗೂ ಆಶಾಕಾರ್ಯಕರ್ತರು.ಮೈರಾಡ್ ಟಿ.ಬಿ.ರೀಚ್ ಎನ್.ಸಿ.ಡಿ ಮತ್ತು ಸಿ.ಆರ್.ಡಿ ಯವರು,ಮೈರಾಡ್ ಎನ್.ಸಿ.ಡಿ ಕ್ಷೇತ್ರ ವ್ಯವಸ್ಥಾಪಕ ಸೈಯದ್ ಹೈದರ್ ಕಾರ್ಯಕ್ರಮದಲ್ಲಿ ಹಾಜರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
