ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಮರಳು ಅಕ್ರಮ ಇಲ್ಲಿ ಸಕ್ರಮ.!?-ಕನ್ನಡ ಸೇನೆ ಆರೋಪ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ,ತಾಲೂಕು ಆಡಳಿತ ಕೇಂದ್ರದ ಅನತಿ ದೂರದಲ್ಲಿ ಮರಳು ಅಕ್ರಮ ಸಾಗಾಟ,
ಯಾರ ಅಂಗಿಲ್ಲದೇ ಹಾಡುಗಲೇ ಸಕ್ರಮವಾಗಿ ಜರುಗುತ್ತಿದೆ ಎಂದು, ಕನ್ನಡ ಸೇನೆ ಅಧ್ಯಕ್ಷ ಗುನ್ನಿ ರಾಘವೇಂದ್ರ ಹೇಳಕೆ ನೀಡಿದ್ದು ಈ ಮೂಲಕ ಅವರು ಆರೋಪಿಸಿದ್ದಾರೆ.
ಅವರು ಈ ಕುರಿತು ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ತಾವು ಈ ಅಕ್ರಮ ಹಗಲು ದರೋಡೆಯನ್ನ ತೀವ್ರವಾಗಿ ಖಂಡಿಸುವುದಾಗಿ, ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಲ್ಲಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳಲ್ಲಿ ಸೂಕ್ತ ಕ್ರಮಕ್ಕಾಗಿ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ. ಪಟ್ಟಣದ ಹೊರಭಾಗದಲ್ಲಿರುವ ಕೂಡ್ಲಿಗಿ ಕಂದಾಯ ಭಾಗದಲ್ಲಿರುವ ಹಳ್ಳದಲ್ಲಿ,ಹಾಗೂ ತಾಲೂಕಿನ ಶ್ರೀಕ್ಷೇತ್ರ ಕುಪ್ಪಿನ ಕೇರಿ ಗ್ರಾಮದ ಕಂದಾಯ ಭಾಗದ ಕೆರೆಯಲ್ಲಿ. ನಿರಂತರವಾಗಿ ಮರಳನ್ನ ಅಗೆದಿದ್ದು ಕೆರೆಯ ಮಣ್ಣಿಗಾಗಿ ಹಾಗೂ ಮರಳಿಗಾಗಿ,ಕರೆಯ ತುಂಬೆಲ್ಲಾ ಹತ್ತಾರು ಅಡಿ ಆಳದಷ್ಟು ನೆಲ ಬಗೆದಿದ್ದಾರೆ.ಕೆಲವೆಡೆಗಳಲ್ಲಿ ಮೂವತ್ತು ನಲವತ್ತು ಅಡಿಗಷ್ಟು ಅಂತರದಷ್ಟು ನೆಲ ಅಗೆದಿದ್ದು,ಮರಳಿಗಾಗಿ ಹಾಗೂ ಮಣ್ಣಿಗಾಗಿ ಕೆರೆಯನ್ನ ಗುಹೆಯೋಪಾದಿಯಲ್ಲಿ ಕೊರೆದಿದ್ದಾರೆ.ಅಕ್ರಮ ಸಾಗಾಣಿಕೆಯ ಮೂಲಕ ಸರ್ಕಾರದ ಸಂಪತ್ತನ್ನು ಅಕ್ರಮ ಕೋರರು,ಹಾಡು ಹಗಲೇ ಕದಿಯುತಿದ್ದು ಸಂಬಂಧಿಸಿದ ಇಲಾಖೆಗಳು ಮೌನ ಸಮ್ಮತಿ ನೀಡಿವೆ.ಕನ್ನಡ ಸೇನೆಯಿಂದ
ಮರಳು ಅಕ್ರಮ ದಂಧೆಗೆ ಕಡಿವಾಣ ಹಾಕುವಂತೆ,ಅಧಿಕಾರಿಗಳಿಗೆ ಸಾಕಷ್ಟು ಭಾರಿ ದೂರು ನೀಡಲಾಗಿದ್ದು ಪ್ರಯೋಜನವಾಗಿಲ್ಲ ಎಂದು ಅವರು ದೂರಿದ್ದಾರೆ.
ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಾದ ಕೂಡ್ಲಿಗಿ ಡಿವೈಎಸ್ಪಿ ಹರೀಶ್,ಸಿಪಿಐ ವಸಂತ ಅಸೋದೆ,ಪಿಎಸ್ಐ ಯುವ ಉತ್ಸಾಯಿ ಡಿ.ಸುರೇಶರವರು.
ಖಡಕ್ ತಾಲೂಕು ದಂಡಾಧಿಕಾರಿ ಎಸ್.ಮಹಾಬಲೇಶ್ವರ ಹಾಗೂ ನಿಷ್ಥಾವಂತ ಕಂದಾಯ ಅಧಿಕಾರಿಗಳು ಇದ್ದೂ ಕೂಡ.
ರಾತ್ರಿ ಮಾತ್ರವಲ್ಲ ಹಾಡು ಹಗಲಲ್ಲೇ ಮರಳನ್ನ ಅಗೆದು ಬಗೆದು ಟ್ರಾಕ್ಟರ್ ಗಳಲ್ಲಿ ಸಾಗಿಸಲಾಗುತ್ತದೆ.ಆದರೆ ಯಾವ ಇಲಾಖಾಧಿಕಾರಿಗಳು ಮರಳು ಅಕ್ರಮ ಸಾಗಾಣಿಕೆ ನಿಯಂತ್ರಿಸುವ ಧೈರ್ಯ ತೋರಿಲ್ಲ,ಇಲಾಖೆಗಳ ಅಧಿಕಾರಿಗಳು ಯಾವುದೋ ಕಾರಣಕ್ಕೆ ಅಸಡ್ಯೆ ಮಾಡುತಿದ್ದಾರೋ ಅಥವಾ ಅಸಹಾಯಕತೆಯೋ ತಿಳಿಯದಾಗಿದ್ದು.ಮರಳು ಅಕ್ರಮ ಸಾಗಾಣಿಕೆಗಾರರ ವಾಹನ ತಡೆಯುವಲ್ಲಿ ಅಶಕ್ತರಾಗಿ ವರ್ತಿಸುತಿದ್ದಾರೆ,ಒಂದೇ ಒಂದು ಪ್ರಕರಣ ದಾಖಲಿಸುವ ನಿಷ್ಠೆ ತೋರಲ್ಲ ಇಲಾಖಾಧಿಕಾರಿಗಳು.
ಅವರ ವಿಷಯದಲ್ಲಿ ಪೊಲೀಸ್ ಹಾಗೂ ಕಂದಾಯ ಇಲಾಖಾಧಿಕಾರಿಗಳು ಬೆದರುಗೊಂಬೆಗಳಂತಾಗಿದ್ದಾರೆ.
ಸರ್ಕರದ ಬಹುಬೆಲೆಯ ಮರಳನ್ನ ಅಕ್ರಮಕೋರರು ತಮ್ಮ ಪೂರ್ವಜರ ಆಸ್ಥಿ ಎಂಬಂತೆ,ಹಾಡು ಹಗಲಲ್ಲೇ ಬಗೆದು ಅಗೆದು ಸಾಗಿಸುತಿದ್ದಾರೆ.ಸಂಬಂಧಿಸಿದಂತೆ ಪೊಲೀಸ್ ಹಾಗೂ ಕಂದಾಯ ಇಲಾಖಾಧಿಕಾರಿಗಳ ಗಮನಕ್ಕೆ ತಂದರೆ,ಹಾವು ಬಡಿದು ಹದ್ದಿಗೆ ಹಾಕಿದಂತೆ ಮಾಮೂಲಿಗೆ ಸರಿಮಾಡಿಕೊಳ್ಳುತಿದ್ದಾರೆ ಎಂದು ರಾಘವೇಂದ್ರ ದೂರಿದ್ದಾರೆ.ಮರಳನ್ನ ಸಂರಕ್ಷಿಸಬೇಕಾದ ಇಲಾಖಾಧಿಕಾರಿಗಳು ಮೌನವಾಗಿದ್ದಾರೆ. ಮರಳನ್ನು ರಾಜಾರೋಷವಾಗಿ ಅಕ್ರಮವಾಗಿ ಸಾಗಿಸುತಿದ್ದಾರೆ ಎಂದು ರಾಘವೇಂದ್ರ ದೂರಿದ್ದಾರೆ.
ಇದನ್ನು ಕನ್ನಡ ಸೇನೆ ತೀವ್ರವಾಗಿ ಖಂಡಿಸುತ್ತದೆ ಅಕ್ರಮ ಸಾಗಾಣಿಕೆ ತಡೆಯದಿದ್ದಲ್ಲಿ,ಸಂಬಂಧಿಸಿದ ಇಲಾಖಾಧಿಕಾರಿಗಳ ವಿರುದ್ಧ ಕನ್ನಡ ಸೇನೆಯಿಂದ ಹೋರಾಟ ಅನಿವಾರ್ಯವಾಗಲಿದೆ, ಹಾಗೂ ಭ್ರಷ್ಠ ಅಧಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಲ್ಲಿ ಲಿಖಿತ ದೂರು ನೀಡಲಾಗುವುದು.ತಾಲೂಕು ಹಾಗೂ ಜಿಲ್ಲಾ ನ್ಯಾಯಾಲಯದಲ್ಲಿ ಕಾನೂನು ರೀತ್ಯ ಹೋರಟಗಳನ್ನು,ಹಮ್ಮಿಕೊಳ್ಳ ಲಾಗುವುದು ಎಂದು ಕನ್ನಡ ಸೇನೆಯ ಅಧ್ಯಕ್ಷ ಗುನ್ನಿ ರಾಫವೇಂದ್ರ ನುಡಿದಿದ್ದಾರೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
