;

ವಿಶ್ವ ಜಲ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು * ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜಲ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾನವನ ದುರಾಸೆಯಿಂದಾಗಿ ಜಲ ಮೂಲಗಳ ಮೇಲೆ ಪರಿಣಾಮಬೀರುತ್ತಿದೆ.* ಪ್ರತಿಯೊಂದು ಜೀವರಾಶಿಗೂ ಅಮೂಲ್ಯವಾಗಿರುವ ನೀರಿನ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದು ಸಿವಿಲ್ ನ್ಯಾಯಾಧೀಶರಾದ ಎಸ್.ನಿರ್ಮಲ ಹೇಳಿದರು. ಭೂಮಿಯು ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದ್ದರೂ ಜಗತ್ತು ನೀರಿನ ಸಮಸ್ಯೆ ಎದುರಿಸುತ್ತಿದೆ. ಮಾನವರ ಅತಿ ದುರಾಸೆ ಮತ್ತು ಪರಿಸರದ ಮೇಲಾಗುತ್ತಿರುವ ಒತ್ತಡದಿಂದಾಗಿ ಜಲ ಮೂಲಗಳು ನಾಶವಾಗುತ್ತಿವೆ. ಅರಣ್ಯ ನಾಶ, ಮಿತಿ ಮೀರಿದ ಮಾಲಿನ್ಯ, ಪ್ರಾಕೃತಿಕ
ಸಂಪನ್ಮೂಲಗಳ ಬಳಕೆಯಿಂದಾಗಿ ಹಸಿರ ಮನೆಯ ಅವ್ಯಾಹತ ಮೇಲೆ ಕೆಟ್ಟ ಪರಿಣಾಮ ಬೀರಿ ನೀರಿನ ಭೀಕರತೆ ಸೃಷ್ಟಿಗೆ ಕಾರಣವಾಗುತ್ತ ಹಾಗಾಗಿ ಪ್ರತಿಯೊಬ್ಬ ನಾಗರೀಕರು ಜಾಗೃತರಾಗಬೇಕು. ಮಿತ ಬಳಕೆಯಿಂದ ನೀರಿನ ಸಂರಕ್ಷಣೆಗೆ ಮುಂದಾಗಬೇಕು ಎಂದರು. ಪ್ರಸ್ತುತದಿನಗಳಲ್ಲಿ ಅತ್ಯಂತ ಗಂಭೀರ ಬಿಕ್ಕಟ್ಟುಗಳಲ್ಲಿ ನೀರಿನ ಸಮಸ್ಯೆಯೂ ಪ್ರಮುಖವಾಗಿದೆ. ನೀರಿನ ಅಮೂಲ್ಯತೆಯನ್ನು ಅರಿಯದಿದ್ದರೆ ಭವಿಷ್ಯದಲ್ಲಿ ಇಡೀ ಜೀವ ರಾಶಿಗಳ ಬದುಕೇ ನಾಶವಾಗುವ ಆತಂಕ ಎದುರಾಗಲಿದೆ. ಹಾಗಾಗಿ, ಪ್ರತಿಯೊಬ್ಬರಿಗೂ ನಿಸರ್ಗದತ್ತವಾಗಿ ದೊರೆಯುವಂತ ನೀರಿನ ಮಹತ್ವ ಕುರಿತು ಅರಿಯಬೇಕು. ಸುತ್ತಲಿನ ಜಲಮೂಲಗಳನ್ನು ಸಂರಕಣೆ ಮಾಡುವ ಮೂಲಕ ಮುಂದಿನ ತಲೆಮಾರಿಗೂ ನೀರನ್ನು ಜೀವಂತಗೊಳಿಸಬೇಕು ಎಂದು
ಹೇಳಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಆರ್.ಆನಂದ್, ಉಪಾಧ್ಯಕ್ಷ ಡಿ .ಬಸವರಾಜ, ಕಾರ್ಯದರ್ಶಿ
ಎ.ಡಿ ರಾಘವೇಂದ್ರ, ಹಿರಿಯ ವಕೀಲರಾದ ವಿಜಯಲಕ್ಷ್ಮಿ ಎಂ.ಎನ್, ಪಾಪಯ್ಯ, ರಾಮಾಂಜಿನೇಯ ಮತ್ತಿತರರಿದ್ದರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;