;

ಗೊಂಧೂಳಿ ಸಮಾಜ ಸಂಘದ ತಾಲ್ಲೂಕು ಘಟಕದ ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ಗುರುಭವನದಲ್ಲಿ ಗೊಂಧೂಳಿ ಸಮಾಜ ಸಂಘದ ತಾಲ್ಲೂಕು ಘಟಕದ ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ* ಗೋಂಧಳಿ ಸಮಾಜ ಅಭಿವೃದ್ದಿಯಾಗಲು ಸಂಘಟಿತರಾಗಬೇಕು.
ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಅಖಿಲ ಕರ್ನಾಟಕ ಗೋಂಧಳಿ ಸಮಾಜದ ರಾಜ್ಯಾಧ್ಯಕ್ಷ ವಿಠಲ ಬಿ.ಗಣಚಾರಿ ಹೇಳಿದರು. ಪಟ್ಟಣದ ಗುರುಭವನದಲ್ಲಿ ಸಂಘದ ತಾಲೂಕು ಘಟಕದಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗೋಂದಳಿ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಗೋಂದಳಿ ಸಮಾಜಕ್ಕೆ ನಿರೀಕ್ಷಿತ ಮಟ್ಟದಲ್ಲಿ ಸರ್ಕಾರದ ಸೌಲಭ್ಯಗಳು ದೊರೆಯದ ಕಾರಣ ಸಮುದಾಯ ಅತ್ಯಂತ ಹಿಂದುಳಿಯಲು ಕಾರಣವಾಗಿದೆ. ಸರ್ಕಾರಗಳು ಗೋಂಧಳಿ ಸಮಾಜವನ್ನು ಕೇವಲ ಮತಬ್ಯಾಂ ಕನ್ನಗಿಸಿಕೊಂಡು ವಂಚಿಸುತ್ತಲೇ ಬಂದಿವೆ. ಗೊಂದು ಸಮಾಜ ಜಾಗೃತರಾಗಬೇಕು.
ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಮುದಾಯ ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿಸಬೇಕು ಎಂದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಭು ಜಾತಿಗಳಿಗೆ 500 ಕೋಟಿ ನೀಡಿ ತುಳಿತಕ್ಕೊಳಗಾದಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಜನಸಂಖ್ಯೆಗನುಗುಣವಾಗಿ ಅನುದಾನ ನೀಡದವಂಚಿಸಲಾಗಿದೆ. ಇದೇ ರೀತಿ ಗೊಂದಳಿ
ಸಮಾಜವನ್ನು ವಂಚಿಸುತ್ತಲೇ ಬರುತ್ತಿರುವ ಸರ್ಕಾರಗಳಿಗೆಗೊಂದಳಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಒತ್ತಾಯ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿಸಮುದಾಯ ಸಂಘಟಿತರಾಗಬೇಕು. ಜಿಲ್ಲಾ ಅಧ್ಯಕ್ಷರು ಮಲಿಯಪ್ಪ 10 ಲಕ್ಷಕ್ಕೆ ಜನಸಂಖ್ಯೆ ಹೊಂದಿರುವ ಗೊಂದಳಿ ಸಮುದಾಯವು ಸದಾ ತುಳಿತಕ್ಕೊಳಗಾಗುತ್ತಲೇ ಬಂದಿದೆ. ಈಗಿದ್ದರೂ, ಆಳಿದ ಸರ್ಕಾರಗಳುಗೋಂದಳಿಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸದೆ ಹಿಂದುಳಿದ ವರ್ಗದಲ್ಲಿ ಮುಂದುವರೆಸಿಕೊಂಡು ವಂಚನೆ ಮಾಡಲಾಗುತ್ತಿದೆ. ಸಮುದಾಯ ಒಟ್ಟಾಗಬೇಕು. ಆ ಮೂಲಕ ಸಮುದಾಯ ವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಡ ಹೇರಬೇಕು. ಜತೆಗೆ ಮಕ್ಕಳಿಗೆ ಸಮ ಶಿಕ್ಷಣ ನೀಡುವ ಮೂಲಕ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ದಿ ಹೊಂದಬೇಕು ಎಂದು ಹೇಳಿದರು. ಸಂದರ್ಭದಲ್ಲಿ ಗೋಂಧಳಿ ಸಮಾಜದ ರಾಜ್ಯ ಕಾರ್ಯದರ್ಶಿ ನಾಗರಾಜ ಗೋಗರೆ, ನಿಂಗಪ್ಪ,ಗುರುಪ್ರಸಾದ್, ರಮೇಶ ಬಿಸೆ, ಪ್ರವೀನ್ ಕುಮಾರ್, ದೇವೆಂದ್ರ ಪಾಟೀಲ್,
ನಿಂಗಪ್ಪ ನಾಯ್ಕಲ್, ಹನುಮಂತಪ್ಪ, ನರಸಪ್ಪ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;