ವರದಿ. ವೆಂಕಟೇಶ್ ಬಳ್ಳಾರಿ
ಇಂದು ಬಳ್ಳಾರಿ ನಗರದ ರಾಯಲ್ ಸರ್ಕಲ್ ಹತ್ತಿರರುವ ಗಾಂಧಿ ಭವನದ ಮುಂದೆ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವತಿಯಿಂದ *ಶಹಿದ್ ಭಗತ್ ಸಿಂಗ್* ರವರ 91ನೇ ಹುತಾತ್ಮ ದಿನ ಅಂಗವಾಗಿ ಸೂಕ್ತಿ ಮತ್ತು ಛಾಯಚಿತ್ರ ಪ್ರದರ್ಶನ ಹಾಗೂ ಭಗತ್ ಸಿಂಗ್ ಅವರ ಪುಸ್ತಕ ಮಾರಾಟ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಎಐಡಿಎಸ್ಓ ಅಖಿಲ ಭಾರತ ಉಪಾಧ್ಯಕ್ಷರಾದ ಡಾ.ಪ್ರಮೋದ್ ಅವರು ಶಹೀದ್ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿದರು.
ಈ ಎಐಡಿಎಸ್ಓ ಅಖಿಲ ಭಾರತ ಉಪಾಧ್ಯಕ್ಷರಾದ ಡಾ.ಪ್ರಮೋದ್ ಅವರು ಮಾತನಾಡುತ್ತಾ ಬಂಡವಾಳಶಾಹಿ ಅಧಿಕಾರಶಾಹಿಯು ನಿಮ್ಮ ಗುಲಾಮಿ ಮತ್ತು ಬಡತನದ ಹಿಂದಿನ ಕಾರಣವಾಗಿದೆ. ಎಂದಿಗೂ ಕೂಡ ನೀವು ಅವರ ಜೊತೆಗೆ ಸೇರದಂತೆ ಖಚಿತಪಡಿಸಿಕೊಳ್ಳಬೇಕು. ಅವರ ಕುತಂತ್ರಗಳಿಂದ ಜಾಗರೂಕರಾಗಿರಬೇಕು. ಆಗ ಎಲ್ಲವೂ ಒಳಿತಾಗುತ್ತದೆ. ನೀವು ನಿಜವಾದ ದುಡಿಯುವ ವರ್ಗ. ಶ್ರಮಿಕರೆಲ್ಲ ಒಂದಾಗಿ. ಬೇಡಿಗಳ ಹೊರತು ನಿಮ್ಮಲ್ಲಿ ಕಳೆದುಕೊಳ್ಳಲು ಏನೂ ಇಲ್ಲ. ಎಂದು ಅದಕ್ಕಾಗಿ HRA(Hindustan Republic Army)ನ್ನು HSRA(Hindustan Socialist Republic Army) ಸಂಘಟನೆಯಾಗಿ ಬದಲಿಸಿ ಕ್ರಾಂತಿಕಾರಿ ಹೋರಾಟ ಕಟ್ಟಿ ನಗು ನಗುತ್ತಾ *ಇಂಕ್ವಿಲಾಬ್ ಜಿಂದಾಬಾದ್* ಘೋಷಣೆ ಹೇಳುತ್ತಾ ಮೂವರು ಕ್ರಾಂತಿಕಾರಿಗಳು ಗಲ್ಲುಂಭ ಎರಿದರು. ಆದರೆ ಅವರ ಕನಸಿನ ಸಮಾಜವಾದಿ ಭಾರತ ನೆರವೆರಿಲ್ಲ, ಭಗತ್ ಸಿಂಗ್ ಅವರ ಕನಸನ್ನು ನನಸು ಮಾಡಲು ಮುಂದಾಗಬೇಕು ಎಂದು ಹೇಳಿದರು.
ಈ ಎಐಡಿಎಸ್ಓ ಜಿಲ್ಲಾ ಅಧಕ್ಷರಾದ ಗುರಳ್ಳಿ ರಾಜ ಅವರು ಮಾತನಾಡುತ್ತಾ 23 ಮಾರ್ಚ್ 19031 ಭಗತ್ ಸಿಂಗ್, ರಾಜಗುರು, ಸುಖದೇವ್, ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿದ ದಿನ. ನಗುನಗುತ್ತಾ ಗಲ್ಲಿಗೇರಿದ ಮೂವರು ಅಪ್ರತಿಮ ದೇಶ ಪ್ರೇಮಿಗಳಿಗಾಗಿ ಇಡೀ ದೇಶ ಕಣ್ಣೀರಿಟ್ಟ ದಿನ. ಇಂತಹ ಮಹಾನ್ ವಿಚಾರಗಳನ್ನು ಎಲ್ಲಾ ಕಡೆ ಹರಡುವ ನಿಟ್ಟಿನಲ್ಲಿ ಒಂದು ವಾರದ ಸಂಘರ್ಷ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್ಓ ಜಿಲ್ಲಾ ಸೆಕ್ರೇಟರಿಯಟ್ ಸದಸ್ಯರಾದ ಶಾಂತಿ. ಎಂ ವಹಿಸಿದ್ದರು. ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಸೆಕ್ರೇಟರಿಯಟ್ ಸದಸ್ಯರಾದ ಕೆ.ಈರಣ್ಣ, ನಿಂಗ್ ರಾಜ, ಅನುಪಮಾ, ಸಿದ್ದು ಮತ್ತು ಸದಸ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
