;

ಬೈಕ್ ಮುಖಾಮುಕಿ-ಇಬ್ಬರಿಗೆ ತೀವ್ರ ಗಾಯ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಬೈಕ್ ಮುಖಾಮುಕಿ-ಇಬ್ಬರಿಗೆ ತೀವ್ರ ಗಾಯ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು “ಶ್ರೀಕ್ಷೇತ್ರ ಕುಪ್ಪಿನಕೇರಿ”ಕ್ರಾಸ್ ಹತ್ತಿರ ಮಾ 17ರಂದು ರಾತ್ರಿ ಬೈಕ್ ಬೈಕ್ ಮುಖಾಮುಕಿ ಡಿಕ್ಕಿಯಾಗಿದ್ದು, ಇಬ್ಬರು ಬೈಕ್ ಸವಾರರಿಗೆ ತೀವ್ರ ಗಾಯವಾಗಿದ್ದು ಬಳ್ಳಾರಿ ವಿಮ್ಸ್ ಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.ಸಂಡೂರು ಮೂಲದವರೆನ್ನಲಾದ ಬೈಕ್ ಸವಾರರು ಗಜಾಪುರದ ಜಾತ್ರೆಗೆ ಬಂದಿದ್ದು ಜಾತ್ರೆ ಮುಗುಸಿಕೊಂಡು ತಮ್ಮೂರಿಗೆ ತೆರಳುತಿದ್ದು, ಕೈವಲ್ಯಾಪುರ ಮೂಲದ ಬೈಕ್ ಸವಾರ ಬೈಕ್ ಗಜಾಪುರ ಕಡೆ ತೆರಳುತಿದ್ದ ಎನ್ನಲಾಗಿದೆ.ಎರೆಡೂ ಕಡೆಯ ಬೈಕ್ ಗಳು ರಭಸವಾಗಿಯೇ ಮುಖ‍ಮುಕಿ ಡಿಕ್ಕಿ ಹೊಡೆದುಕೊಂಡಿದ್ದು,ಪರಿಣಾಮ ಬೈಕ್ ಬ ಇಬ್ಬರಿಗೆ ತೀವ್ರ ಗಾಯಗಳಾಗಿವೆ.ಸುದ್ದಿ ತಿಳಿದ ಕೂಡಲೇ ಕೂಡ್ಲಿಗಿ108ಸಿಬ್ಬಂದಿ ಪಂಪಾಪತಿ ಹಾಗೂ ಮಲ್ಲೇಶ ಸ್ಥಳಕ್ಕಾಗಮಿಸಿ ರಕ್ಷಿಸಿದ್ದು,ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆ ಚಿಕಿತ್ಸೆಗೆ ದಾಖಲಿಸಿದ್ದಾರೆ.ನಂತರ ಗಾಯ‍‍ಾಳುಗಳನ್ನ ಬಳ್ಳಾರಿ ವಿಮ್ಸ್ ಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;