ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕಳ್ಳತನ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತೆ ಪಾಲಿಸಬೇಕು -ಸಿಪಿಐ ವಸಂತ ಅಸೋದೆ* _ವಿಜಯನಗರ ಜಿಲ್ಲೆ ಕೂಡ್ಲಿಗಿ:ಅಪರಾಧ ಮುಕ್ತ ಸಮಾಜಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕಿದೆ,ಇಲಾಖೆ ಸೂಚಿಸುವ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ತಪ್ಪದೇ ಪಾಲಿಸಬೇಕಿದೆ ಎಂದು ಸಿಪಿಐ ವಸಂತ ಅಸೋದೆ ತಿಳಿಸಿದರು.ಅವರು ದಲಿತರ ಸಭೆಯಲ್ಲಿ ಕೇಳಿಬಂದ ಕೆಲ ಅಹವಾಲುಗಳನ್ನ ಆಲಿಸಿ ಉತ್ತರಿಸಿದರು,ಸಭೆಯಲ್ಲಿ ಪಪಂ ಸದಸ್ಯ ಗೋವಿಂದಗಿರಿ ತಾಂಡದ ಬಾಸುನಾಯ್ಕ ಮಾತನಾಡಿ, ತಾಂಡದಲ್ಲಿ ಅಕ್ರಮ ಮರಳು ಗಾರಿಕೆ ಎಗ್ಗಿಲ್ಲದೇ ಜರುಗುತ್ತಿದೆ.ಮರಳು ತುಂಬಿದ ವಾಹನಗಳ ಹಾವಳಿ ಮಿತಿಮೀರಿದೆ,ಮರಳುಗಳ್ಳರು ತಾಂಡದ ಸ್ಮಶಾನವನ್ನು ಅಗೆದು ಮರಳು ಕದ್ದಿದ್ದಾರೆ.ಮೈಲಕ್ಕನಕಟ್ಟೆಯಲ್ಲಿ ಅಕ್ರಮ ಮರಳುಗಾರಿಕೆಯಿಂದ ಬೃಹತ್ ತೆಗ್ಗು ಗುಂಡಿಗಳು ನಿರ್ಮಾಣವಾಗಿವೆ.ರಸ್ಥೆ ಹಾಳಾಗಿದ್ದು ರೈತರ ಹೊಲಗಳನ್ನ ಕೂಡ ಮರಳುಗಳ್ಳೆು ಮರಳಿಗಾಗಿ ಬಗೆದಿದ್ದಾರೆ.ತಾಂಡಾದ ಜನ ಗುಳೇ ಹೋಗಿದ್ದು ದುಡಿದು ಬಂದ ಮೇಲೆ ಇಸ್ಪೀಟ್ ಗೆ ಹಣ ಹಾಳುಮಾಡುತ್ತಾರೆ,ಆಗಾಗ್ಗೆ ತಾಂಡದಲ್ಲಿ ಕಳ್ಳತನ ಜರುಗುತಿರುತ್ತವೆ,ಅಕ್ರಮ,ಕಳವು,ಇಸ್ಪೀಟ್ ಜೂಜು ಅಪರಾಧಗಳನ್ನ ನಿಯಂತ್ರಿಸಬೇಕಾಗಿದೆ ಎಂದು ಸಭೆಯಲ್ಲಿ ಕೋರಿದರು.
ಸಿಪಿಐ ವಸಂತ ಅಸೋದೆ ಮಾತನಾಡಿ,ಅಕ್ರಮಗಳನ್ನ ನಿಯಂತ್ರಿಸಲು ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಅಕ್ರಮಗಳ ಹಾಗೂ ಜೂಜು ಪ್ರಕರಣಗಳ ಕುರಿತ ಮಾಹಿತಿ ನೀಡಬೇಕು,ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು ಎಂದರು.
ಕಳ್ಳವು ಪ್ರಕರಣ ಸಂಬಂಧಿಸಿದಂತೆ ಸಾರ್ವಜನಿಕರು ಅಗತ್ಯವಾಗಿ ಪಾಲಿಸಲೇಬೆಕಾದ ಮುಂಜಾಗ್ರತಾ ಕ್ರಮಗಳನ್ನ ಅವರು ವಿವರಿಸಿದರು, ಜಾಗ್ರತಾ ನಿಯಮ ಪಾಲಿಸಿದ್ದಲ್ಲಿ ಕಳವು ನಿಯಂತ್ರಿಸಬಹುದಾಗಿದೆ, ಬೆಲೆಬಾಳುವ ವಡವೆ,ನಗದು ಸಂರಕ್ಷಿಸುವ ವಿಧಾನಗಳನ್ನ ಅವರು ತಿಳಿಸಿದರು.ಮನೆಗೆ ಬೀಗ ಹಾಕಿ ಬಹುದಿನಗಳ ಪ್ರಯಾಣ ತೆರಳುವುದಾದರೆ ಠಾಣೆಗೆ ಮಾಹಿತಿ ನೀಡಬೇಕಿದೆ,ಅಕ್ಕ ಪಕ್ಕದವರ ಸಹಕಾರ ಪಡೆಯಬೇಕು,ಅಕ್ರಮ ತಡೆ ಹಾಗೂ ಕಳವು ನಿಯಂತ್ರಣ, ಅಪರಾಧ ತಡೆಗೆ ಇಲಾಖೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ.
ಈ ನಿಟ್ಟಿನಲ್ಲಿ ಸಾರ್ವಜನಿಕರು ನಾಗರೀಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ತಪ್ಪದೇ ಪಾಲಿಸಬೇಕು,ಈ ಮೂಲಕ ಇಲಾಖೆಯೊಂದಿಗೆ ಸಹಕರಿಸಿದ್ದಲ್ಲಿ ಮಾತ್ರ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.ಹಿರಿಯ ನಾಗರೀಕರು, ದಲಿತ ಮುಖಂಡರು ಹಾಗೂ ವಿವಿದ ಸಮುದಾಯಗಳ ಮುಖಂಡರು, ಜನಪ್ರತಿನಿಧಿಗಳು ಸಭೆಯಲ್ಲಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
