ವರದಿ. ಧನಂಜಯ್

ಹೂವಿನಹಡಗಲಿ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮ ಗಳ ಬಗ್ಗೆ ತಿಳಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನೂತನ ವಿಜಯನಗರ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ದೊಡ್ಡಮನಿ ಅವರಿಗೆ ಕಚೇರಿಯಿಂದ ಆಚೆ ಹೋಗಲೇ ಎಂದು ಏಕವಚನದಲ್ಲಿ ನಿಂದಿಸಿರುವುದು ವಿಡಿಯೋದಲ್ಲಿ ನೋಡಬಹುದು.
ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿರುವ ಇದರಿಂದ ಗೊತ್ತಾಗುತ್ತದೆ ಇವರಿಗೆ ಸಾರ್ವಜನಿಕರು ದೂರು ನೀಡುವುದು ಇಷ್ಟವಿಲ್ಲ ಎಂಬುದು ಇದರಿಂದ ತಿಳಿಯುತ್ತದೆ.
ವಿಜಯನಗರ ಜಿಲ್ಲೆಯಲ್ಲಿ ಬಹುತೇಕ ಅಬಕಾರಿ ಅಧಿಕಾರಿಗಳ ವರ್ತನೆ ಇದೇ ರೀತಿ ಇದೆ ಕಾರಣ ಇವರು ಮದ್ಯದಂಗಡಿ ಗಳಿಂದ, ಡಬಾ ಗಳಿಂದ, ಅಕ್ರಮ ಮದ್ಯ ಮಾರಾಟಗಾರರಿಂದ, CL 2 ಮತ್ತು ಸರ್ಕಾರಿ ಸ್ವಾಮ್ಯದ MRPL ಮದ್ಯದಂಗಡಿ ಗಳಿಂದ ಪ್ರತಿ ತಿಂಗಳು ಲಂಚವನ್ನು ಪಡೆಯುತ್ತಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಚಾರ.
ಅಧಿಕಾರಿಗಳು ಸಾರ್ವಜನಿಕರ ಜೊತೆ ಸರಿಯಾಗಿ ವರ್ತಿಸದೆ ಹೋದರೆ ಹಾಗೂ ಅಕ್ರಮಗಳನ್ನು ತಡೆಯದೆ ಹೋದರೆ ಶೀಘ್ರದಲ್ಲೇ ಅಕ್ರಮಗಳ ಮಾಹಿತಿ ಸಂಗ್ರಹಿಸಿ ಲೋಕಾಯುಕ್ತ, ಎಸಿಬಿಯಲ್ಲಿ ಮತ್ತು ಅಬಕಾರಿ ಇಲಾಖೆಯ ಉನ್ನತಾಧಿಕಾರಿಗಳಿಗೆ ಹಾಗೂ ಅಬಕಾರಿ ಮಂತ್ರಿಗಳಿಗೆ ಲಿಖಿತ ದೂರು ನೀಡಲಾಗುವುದು..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
