;

ಹೊಳಲು:ಸರ್ಕಾರಿ ಗೌಕರವದೊಂದಿಗೆ ಮೃತ ಪೇದೆಯ ಅಂತ್ಯಕ್ರಿಯೆ…

ವರದಿ.ಧನಂಜಯ್

*ಹೊಳಲು:ಸರ್ಕಾರಿ ಗೌಕರವದೊಂದಿಗೆ ಮೃತ ಪೇದೆಯ ಅಂತ್ಯಕ್ರಿಯೆ*
-ವಿಜಯನಗರ ಜಿಲ್ಲೆ ಹೂವಿನಹಡಗಲಿ ಪಟ್ಟಣದ ಎಪಿಎಂಸಿ ಹತ್ತಿರದ ಪೆಟ್ರೋಲ್ ಬಂಕ್ ಬಳಿ,ಬೈಕ್ ಅಪಘಾತದಲ್ಲಿ ಮೃತಪಟ್ಟ ಮುಖ್ಯಪೇದೆ ಹೆಚ್.ಎಂ.ಶಿವಕುಮಾರಸ್ವಾಮಿ ಅವರ ಅಂತ್ಯಕ್ರಿಯೆ.ಹಡಗಲಿ ತಾಲೂಕು ಸ್ವಗ್ರಾಮ ಹೊಳಲು ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿದ್ದ ಮೃತದೇಹವನ್ನು ರಾತ್ರಿ ಹೊಳಲು ಗ್ರಾಮದ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿತ್ತು,ಈ ಸಂದರ್ಭದಲ್ಲಿ ಮೃತರ ಕುಟುಂಬ ಸದಸ್ಯರ ರೋದನ ಮುಗಿಲು ಮುಟ್ಟಿತ್ತು.ಕಳೇಬರವನ್ನು ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು.ನಂತರ ಗ್ರಾಮದ ಮುಖ್ಯಬೀದಿಯಲ್ಲಿ ಅಂತಿಮಯಾತ್ರೆ ನಡೆಸಿ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಅಂತ್ಯಕ್ರಿಯಲ್ಲಿ ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿರಾವ್, ಸಿಪಿಐ ಕೆ.ರಾಮರೆಡ್ಡಿ,ಪಿಎಸ್‍ಐ ಎಸ್.ಪಿ.ನಾಯ್ಕ ಸೇರಿದಂತೆ ಪೊಲೀಸ್ ಸಿಬ್ಬಂದಿ ಅಂತಿಮ ದರ್ಶನ ಪಡೆದರು.ಬಳ್ಳಾರಿಯ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸರು ಇಲಾಖಾ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು,ಗ್ರಾಮದ ಅಪಾರ ಜನಸ್ಥೋಮ ಮುಖ್ಯಪೇದೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;