ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಪೂಜಾರಹಳ್ಳಿ:ಮಡದಿಯ ಕೊಂದ ಮದ್ಯವ್ಯಸನಿ ಪತಿ*-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಖಾನಾಹಿಸಹಳ್ಳಿ ಹೋಬಳಿ,ಖಾನಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೂಜಾರಹಳ್ಳಿಯಲ್ಲಿ(ಪಾಲಯ್ಯನಕೋಟೆ) ಮದ್ಯವ್ಯಸನಿ ಪತಿ ತನ್ನ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಹಾಕಿರುವ ಹೃದಯ ವಿದ್ರಾವಕ ಘಟನೆ ಮಾ15ರಂದು ಮಧ್ಯಾಹ್ನ ಜರುಗಿರುವುದಾಗಿ ತಿಳಿದುಬಂದಿದೆ.ಶಾಂತಮ್ಮ(25)ಹತ್ಯೆಗೊಳಗಾದ ಮಹಿಳೆಯಾಗಿದ್ದಾಳೆ ಇವಳನ್ನ ಇವಳ ಪತಿ ಹುರುಳಿಹಾಳು ಮೂಲದ ಮಂಜುನಾಥ ಕೊಲೆ ಆರೋಪಿಯಾಗಿದ್ದಾನೆ.ವಿಪರೀತ ಮದ್ಯವ್ಯಸನಿಯಾಗಿರುವ ಈತನು ಪೂಜಾರಹಳ್ಳಿಯ ತನ್ನ ತವರು ಮನೆಯಲ್ಲಿದ್ದ ತನ್ನ ಮಡದಿಯನ್ನ, ಕೊಡಲಿಯಿಂದ ಹೊಡೆದು ಕೊಂದಿದ್ದಾನೆ ವಿಪರೀತ ಮದ್ಯ ವ್ಯಸನಿ ಮಂಜುನಾಥನು ತನ್ನ ಮೊದಲ ಹೆಂಡತಿ ತೀರಿಹೋದ ಹಿನ್ನಲೆಯಲ್ಲಿ,ಮೃತ ಶಾಂತಳನ್ನು ಐದು ವರ್ಷಗಳ ಹಿಂದೆಯಷ್ಟೇ ಎರೆಡನೇ ಹೆಂಡತಿಯನ್ನಾಗಿ ಸ್ವೀಕರಿಸಿದ್ದನು.ಗಂಡ ಹೆಂಡಿರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗುತಿತ್ತೆನ್ನಲಾಗಿದೆ.ಮಂಜುನಾಥ ವಿಪರೀತ ಮದ್ಯ ವ್ಯಸನಿಯಾಗಿದ್ದು, ಆಗಾಗ್ಗೆ ವಿಪರೀತ ಕುಡಿದು ಹೆಂಡತಿಯೊಂದಿಗೆ ವಿನಾಕಾರಣ ಗಲಾಟೆ ಮಾಡುತಿದ್ದ ಎನ್ನಲಾಗುತ್ತಿದೆ,ಈ ದಂಪತಿಗಳು 3ಮಕ್ಕಳನ್ನು ಹೊಂದಿದ್ದು ಮೃತ ಶಾಂತಮ್ಮ ಏಳು ತಿಂಗಳ ಮಗುವನ್ನ ಹೊಂದಿದ್ದು ಅದನ್ನು ಮಡಿಲ್ಲಲ್ಲಿಟ್ಟುಕೊಂಡಾಗಲೇ ಗಂಡ ಏಕಾ ಏಕಿ ಕೊಡಲಿಯಿಂದ ಹಲ್ಲ್ಯೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೊಡಲಿಯಿಂದ ನೇರವಾಗಿ ಗಂಟಲಿಗೆ ಹೊಡೆದಿದ್ದಾನೆಂದು ಹೇಳಲಾಗುತಿದ್ದು,ಮನೆಯಲ್ಲಿ ಹಸುಗೂಸನ್ನ ಮಡಿಲಲ್ಲಿ ಇಟ್ಟುಕೊಂಡು ಕುಳಿತಿದ್ದ ಶಾಂತಮ್ಮಳ ಮೇಲೆ.ಆಕೆಯ ಪತಿ ದಿಢಿರ್ ದಾಳಿ ಮಾಡಿದ್ದು ಕೊಡಲಿಯ ಪೆಟ್ಟಿಗೆ ಹಾಗೇ ನೆಲ್ಲಕುರುಳಿದ್ದಾಳೆ.ವಿಪರೀತ ರಕ್ತ ಸಾವ್ರವಾಗಿ ರಕ್ತದ ಮಡುವಿಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ,ಘಟನೆಯ ಸಂದರ್ಭದಲ್ಲಿ ಯಾರೂ ಇಲ್ಲವಾದ್ದರಿಂದಾಗಿ ತಾಯಿಯ ಮಡಿಲಲ್ಲಿದ್ದ ಮಗು ಅಕ್ಷರಸಹಃ ಅನಾಥವಾಗಿತ್ತೆಂದು,ತಡವಾಗಿ ತಿಳಿದು ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ತಿಳಿಸಿದ್ದಾರೆ.ಮೃತ ಶಾಂತಮ್ಮಳ ಮಡಿಲಲ್ಲಿದ್ದ ಅನಾಥ ಮಗುವನ್ನು ನೆರೆದವರೇ ಎತ್ತಿಕೊಂಡಿದ್ದಾರೆ ಎನ್ನಲಾಗಿದೆ, ಘಟನೆಯ ವಿವರ ಪಡೆದ ಪೂಜಾರಳ್ಳಿ ಗ್ರಾಮಸ್ಥರು ಆರೋಪಿಯನ್ನ ಬೆನ್ನತ್ತಿದ್ದು ಮತ್ತು ಚೆನ್ನಾಗಿ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ.ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ಬೆಟ್ಟಿ ನೀಡಿದ್ದು ಆರೋಪಿಯನ್ನ ವಶಕ್ಕೆ ಪಡೆದಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗುತಿದ್ದು ತನಿಖೆಯನಂತರ ಘಟನೆಗೆ ಕಾರಣ ತಿಳಿದು ಬರಲಿದ್ದು,ಹೊಸಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
