;

ಕೂಡ್ಲಿಗಿ:ಅಂಗನವಾಡಿ ನೌಕರರಿಂದ ಪ್ರತಿಭಟನೆ, ಹಕ್ಕೋತ್ತಾಯ..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಅಂಗನವಾಡಿ ನೌಕರರಿಂದ ಪ್ರತಿಭಟನೆ, ಹಕ್ಕೋತ್ತಾಯ*
-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು,ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ‌ ಮಾ 15ರಂದು ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಅವರು ಮುಖ್ಯ ಮಂತ್ರಿಗಳಿಗೆ ಮನವಿ‌ ಪತ್ರವನ್ನು ತಹಶಿಲ್ದಾರ್ ಮೂಲಕ ಸಲ್ಲಿಸಿದರು.ಮುಖಂಡರು ಮಾತನಾಡಿದರು,ಸರ್ಕಾರ ತಮಗೆ
ಸೇವಾ ಹಿರಿಮೆ ಆಧಾರಿತ ವೇತನ ಬಡ್ತಿ ನೀಡಬೇಕು ಸೇರಿದಂತೆ,ವಿವಿಧ ಮುಖ್ಯ ಬೇಡಿಕೆಗಳನ್ನು ಸರ್ಕಾರ ಶೀಘ್ರವೇ ಪರಿಗಣಿಸಿ ನಿರ್ಣಯ ತೆಗೆದುಕೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತಿರುವುದಾಗಿ ತಿಳಿಸಿದರು.
ಈ ಕುರಿತು ಸಕಾರಾತ್ಮಕವಾಗಿ ನಿರ್ಣಯ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು,ಸರ್ಕಾರದ ಪ್ರತಿನಿಧಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮತ್ತು ಸಚಿವೆ ಶಶಿಕಲ ಜೊಲ್ಲೆರವರು ಈ ಹಿಂದೆ ನೀಡಿದ್ದು ಬಜೆಟ್ ಮಂಡನೆಯಲ್ಲಿ ಹುಸಿಯಾಗಿಸಿದ್ದಾರೆ ಎಂದರು.
ಸೇವಕಿಯರ ಗೌರವಧನ ಸರ್ಕಾರವೇ ನಿಗದಿಪಡಿಸಿರುವ ಕನಿಷ್ಠ ವೇತನಕ್ಕಿಂತ ಕಡಿಮೆ ಇದ್ದು, ಇದರಿಂದಾಗಿ ಅಂಗನವಾಡಿ ಸೇವಕಿಯರ ಬದುಕು ಅತ್ಯಂತ ದುಸ್ತರವಾಗಿದೆ,ಈ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರಗಳು ಪಾಲಿಸಿರುವ ವಾರ್ಷಿಕ ವೇತನ ಹೆಚ್ಚಳ ನೀಡದೆ, ಬಜೆಟ್‌ನಲ್ಲಿ ನಮ್ಮ ಬೇಡಿಕೆಗಳ ಕುರಿತು ಯಾವುದೇ ರೀತಿಯಲ್ಲಿ ಸ್ಪಂಧನೆ ನೀಡದಿರುವುದು ಖಂಡನೀಯವಾಗಿದ್ದು.ಗೌರವ ಧನ ತುಂಬಾ ಕಡಿಮೆಯಾಗಿದೆ ಕಾರಣ ನಮ್ಮ ದೀರ್ಘಕಾಲದ ಬೇಡಿಕೆಗಳನ್ನು ತಾವುಗಳು ಮಧ್ಯ ಪ್ರವೇಶಿಸಿ,ಶೀಘ್ರವೇ ಸೂಕ್ತ ನಿರ್ಣಯವನ್ನು ಕೈಗೊಳ್ಳುತ್ತೀರೆಂದು ಭರವಸೆ ಹೊಂದಿದ್ದು,ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ರೀತಿ ಪರಿಹಾರ ಒದಗಿಸಬೇಕೆಂದು ಅವರು ಒತ್ತಾಯಿಸಿದರು.ಪಟ್ಟಣದ ಗಾಂಧಿ ಚಿತಾಭಸ್ಮ ಸ್ಮಾರಕದಿಂದ ಪ್ರಾರಂಭವಾದ ಪ್ರತಿಭಟನೆ, ಪ್ರಮುಖ ಮಾರ್ಗಗಳ ಮೂಲಕ ಸಂಚರಿಸಿ ವೃತ್ತಗಳಲ್ಲಿ ಪ್ರತಿಭಟಿಸಲಾಯಿತು,ನಂತರ ತಹಶಿಲ್ದಾರ್ ಕಚೇರಿಗೆ ತೆರಳಿ ತಹಶಿಲ್ದಾರ್ ಎಸ್.ಮಹಾಬಲೇಶ್ವರರಿಗೆ ಹಕ್ಕೋತ್ತಾಯ ಪತ್ರ ನೀಡಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡ ಹೆಚ್.ವೀರಣ್ಣ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರ ಪೆಡರೇಷನ್ ಮುಖಂಡರ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;