;

ಮ್ಯಾಸ ನಾಯಕ ಸಮಾಧಿಯ ಮೇಲೆ ನಿಧಿಗಳ್ಳರ ದಾಳಿ: ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಸೂಕ್ತ ಕ್ರಮ ಜರುಗಿಸಿ.!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮುರು/ ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಮ್ಯಾಸ ಬೇಡ(ಮ್ಯಾಸ ನಾಯಕ) ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಮಿತಿಯ ಸಂಚಾಲಕ ಕೆ.ಬಿ.ಓಬಣ್ಣ ಮಾತನಾಡಿ ಹೊಳಲ್ಕೆರೆ ತಾಲ್ಲೂಕಿನ ಮಿಂಚೇರಿ ಕಾಯ್ದಿಟ್ಟ ಅರಣ್ಯ ಹಾಗೂ ಗಾದ್ರಿಮಲೆ ಬೆಟ್ಟದಲ್ಲಿ ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಧಾರ್ಮಿಕ ಮಹಾ ಪುರುಷ ಶ್ರೀ ಗಾದ್ರಿಪಾಲನಾಯಕರ ಸಮಾಧಿಯನ್ನು ನಿಧಿ ಆಸೆಗಾಗಿ ಕೆಲ ಕಿಡಿಗೇಡಿಗಳು ವಿರೂಪಗೊಳಿಸಿದರೆ. ಈ ಘಟನೆಯಿಂದ ನಾಯಕ ಪಂಗಡದ ಮ್ಯಾಸ ನಾಯಕ ಬುಡಕಟ್ಟ ಜನಾಂಗಕ್ಕೆ ಅವಮಾನ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಕೂಡಲೇ ಅಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಸೂಕ್ತ ಕ್ರಮ ಜರುಗಿಸಿ ಬುಡಕಟ್ಟು ಜನರ ಧಾರ್ಮಿಕ ಕ್ಷೇತ್ರಗಳಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕೆಂದು ಒತ್ತಾಯಿಸಿ  ತಹಶೀಲ್ದಾರ್ ಸುರೇಶ್ ರವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೋನಸಾಗರ ಪಾಲಯ್ಯ, ಮೊಗಲಹಳ್ಳಿ ಜಯಣ್ಣ , ರ‍್ಜೇನಹಳ್ಳಿ ನಾಗರಾಜ, ದಾನಸೂರಯ್ಯ, ಜಿ.ಎಸ್.ಚಂದ್ರಣ್ಣ , ಗುರುಸ್ವಾಮಿ, ಪಾಲಯ್ಯ, ಯುವರಾಜ, ಬೋರಯ್ಯ, ಡಿ.ಬೋರಯ್ಯ, ಟಿ.ಮಹೇಶ ಇತರರು ಹಾಜರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;