ಮಹಾಲಿಂಗಪುರ ಪೋಲೀಸರಿಂದ ಅಂತರಾಜ್ಯ ಕಳ್ಳನ ಬಂಧನ…!!!

ಮಹಾಲಿಂಗಪುರ ಪೋಲೀಸರಿಂದ ಅಂತರಾಜ್ಯ ಕಳ್ಳನ ಬಂಧನ

ಮಹಾಲಿಂಗಪುರ: ಪಟ್ಟಣದಲ್ಲಿ ಚಿನ್ನದ ಅಂಗಡಿಯ ವ್ಯಾಪಾರಿಯ ನೆದರನ್ನು ಗಲಿಬಿಲಿಗೊಳಿಸಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪ್ರಕರಣ ದಾಖಲಿಸಿಕೊಂಡು ಬಂದಿಸಿರುವುದು ಬೆಳಕಿಗೆ ಬಂದಿದೆ. ನಗರದ ನಡುಚೌಕಿ ಸಮೀಪದ ಮಹಾಲಿಂಗಪ್ಪ ಮಹಾದೇವ ಲೋಹಾರ ಎಂಬಾತನ ಒಡವೆ ವ್ಯಾಪಾರಿಯ ಅಂಗಡಿಯಿಂದ ಅಪಾರ ಮೌಲ್ಯದ ಚಿನ್ನಾಭರನ ದೋಚಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು ಆರೋಪಿಗಾಗಿ ಬಲೆ ಬಿಸಿದ್ದ ಮಹಾಲಿಂಗಪುರ ಪೋಲೀಸರು. ಆರೋಪಿ ಪಟ್ಟಣದಲ್ಲಿ ಮತ್ತೆ ಬೈಕ್ ಕದಿಯಲು ಬಂದು ಪೋಲೀಸರ ಬಲೆಗೆ ಸಿಕ್ಕುಬಿದ್ದಿದ್ದಾನೆ ಠಾಣೆಯ ಠಾಣಾಧಿಕಾರಿ ಪ್ರವೀಣ್ ಬೀಳಗಿ ನೇತೃತ್ವದಲ್ಲಿ ಪೋಲೀಸ್ ಸಿಬ್ಬಂದಿ ಅಂತರಾಜ್ಯ ಕಳ್ಳತನ ಆರೋಪಿಯನ್ನು ಬಂಧಿಸಿವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಸಿಕಂದರ ಶೇರಅಲಿ ಇರಾನಿ ಮಹಾರಾಷ್ಟ್ರದ ಸಾಂಗಲಿ ಪಟ್ಟಣದ ನಿವಾಸಿ ಎಂದು ತಿಳಿದು ಬಂದಿದೆ. ಆರೋಪಿತನಿಂದ 84 ಸಾವಿರ ಮೌಲ್ಯದ ಚಿನ್ನಾಭರನ ಮತ್ತು 60 ಸಾವಿರ ಮೌಲ್ಯದ ಟಿ.ವ್ಹಿ.ಎಸ್ ಅಪಾಚೆ ಬೈಕ್ ವಶಪಡಿಸಿಕೊಂಡು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. ಮಹಾಲಿಂಗಪುರ ಪೋಲೀಸ್ ಠಾಣೆಯ ಪೋಲೀಸರ ಕಾರ್ಯವನ್ನು ಬಾಗಲಕೋಟ ಜಿಲ್ಲಾ ಪೊಲೀಸ್ ಶ್ಲಾಘನೀಯ ವ್ಯಕ್ತಪಡಿಸಿ ಸೂಕ್ತ ಬಹುಮಾನ ಘೋಷಿಸಿಲಾಗಿದೆ. ಜಮಖಂಡಿಯ ಉಪ ವಿಭಾಗಧಿಕಾರಿ ಡಿ.ಎಸ್.ಪಿ ಶಾಂತವೀರ ಬನಹಟ್ಟಿಯ ವೃತ್ತ ನೀರಿಕ್ಷಕರಾದ ಸಂಜು ಬಳಗಾರ ಮಹಾಲಿಂಗಪುರ ಠಾಣಾಧಿಕಾರಿ ಪ್ರವೀಣ್ ಬೀಳಗಿ ಪೋಲೀಸ್ ಸಿಬ್ಬಂದಿಗಳಾದ ಎಲ್.ಬಿ.ದುದ್ದನಗಿ,ಎಸ್.ಡಿ. ಬಾರಿಗಿಡದ,ಬಿ.ಪಿ.ಹಡಪದ,ಐ.ಎಮ್.ಪಣಿಬಂಧ,ಬಿ.ಜೆ.ದೇಸಾಯಿ,ಎಮ್.ಎಸ್.ಕನಶೆಟ್ಟಿ ಉಪಸ್ಥತಿಯಲ್ಲಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend