ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕುಡುತಿನಿ:ಠಾಣೆಗೆ ಐಜಿಪಿ ನಂಜುಂಡಸ್ವಾಮಿ ಭೆಟ್ಟಿ* <>ಬಳ್ಳಾರಿ ಜಿಲ್ಲೆ ಕುಡುತಿನಿ ಪೋಲೀಸ್ ಠಾಣೆಗೆ ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡ ಸ್ವಾಮಿರವರು ಫೆ 26ರಂದು ಭೇಟಿ ನೀಡಿ ಪರಿವೀಕ್ಷಿಸಿದರು,
ನಂತರ ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಮಾತನಾಡಿದರು.ಜಿಲ್ಲೆಯಲ್ಲಿ ಕಾನೂನು ಪಾಲನೆ ಮಾಡುವುದೆ ನಮ್ಮ ಪೋಲೀಸರ ಕರ್ತವ್ಯವಾಗಿದೆ, ಅಪರಾಧಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರು ಸಹ ಪೋಲೀಸರಿಗೆ ಸಹಕಾರ ನೀಡಬೇಕೆಂದರು.
ಕೋರಾನಾ ಬಗ್ಗೆ ಯಾರು ನಿರ್ಲಕ್ಷವಹಿಸಬಾರದು ಮುಂಜಾಗ್ರತ ಕ್ರಮವಾಗಿ ಎಲ್ಲರೂ ಕೋರೋನಾ ನಿಯಮಗಳನ್ನು ಪಾಲಿಸಬೇಕೆಂದರು,ಮಾಸ್ಕ್ ಧರಿಸಬೇಕು ಆಗಾಗ್ಗೆ ಸ್ಯಾನಿಟೇಜರ್‍ನಿಂದ ಕೈಗಳನ್ನು ತೊಳೆದು ಸಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಕೋರಾನಾದ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಎಸ್‍ಪಿ. ಸೈದುಲ್‍ಅದಾವತ್,ಬಳ್ಳಾರಿ ಗ್ರಾಮೀಣ ಡಿವೈಎಸ್‍ಪಿ. ಸತ್ಯನಾರಾಯಣ,ಕುರುಗೋಡು ಸಿಪಿಐ.ಚಂದನ್‍ಗೋಪಾಲ್, ಕುಡುತಿನಿ ಪಿಎಸ್‍ಐ. ಮಹಮ್ಮದ್‍ರಫಿಕ್, ಅಪರಾಧವಿಭಾಗದ ಪಿಎಸ್‍ಐ. ಸುರೇಶಪ್ಪ ಸೇರಿದಂತೆ ಸಿಬ್ಬಂದಿವರ್ಗ ಇದ್ದರು.ಕುಡುತಿನಿ ಪೋಲೀಸ್ ಠಾಣೆಗೆ ಆಗಮಿಸಿದ ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ ಅವರನ್ನು ಕುಡುತಿನಿ ಪ.ಪಂಚಾಯಿತಿ ಅದ್ಯಕ್ಷ ವಿ.ರಾಜಶೇಖರ,ಸದಸ್ಯ ವೆಂಕಟರಮಣ ಬಾಬು,ಬಿಕೆ.ಲೆನಿನ್, ಕನಿಕೇರಿಪೊಂಪಾಪತಿ,ಮುಖಂಡ ಚಂದ್ರಾಯಿದೊಡ್ಡಬಸಪ್ಪ,ಪ್ರತಾಪ್ ಹೂಗುಚ್ಚನೀಡಿ ಬರಮಾಡಿಕೊಂಡರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
