ಬಣವಿಕಲ್ಲು ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಗೇಟ್ ಬೀಗ ಒಡೆದು ಗಂಟೆ ಕದ್ದೋಯ್ದ ಕಳ್ಳರು!!!!

ಬಣವಿಕಲ್ಲು ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಗೇಟ್ ಬೀಗ ಒಡೆದು ಗಂಟೆ ಕದ್ದೋಯ್ದ ಕಳ್ಳರು!!!! ಕಾನಹೊಸಹಳ್ಳಿ:- ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿರುವ ಶ್ರೀ ಈಶ್ವರ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ಗೇಟ್ ಬೀಗವನ್ನು ಒಡೆದು ಒಂದು ಗಂಟೆಯನ್ನು ಕದ್ದು ತದ ನಂತರ ದೇವಸ್ಥಾನದ ಆವರಣದಲ್ಲಿರುವ ಸಮುದಾಯ ಭವನದ ಬೀಗ ಮುರಿದ ಕಳ್ಳರು , ಸ್ಥಳಕ್ಕೆ ಕಾನಹೊಸಹಳ್ಳಿ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆಯೂ ಸಹ ದೇವಸ್ಥಾನದ ಸುತ್ತ ಮುತ್ತ ಇರುವ ರೈತರ ಹೊಲಗಳಲ್ಲಿ ನೀರಾವರಿ ಸೌಲಭ್ಯವನ್ನು ಹೊಂದಿರುವ ರೈತರ ಜಮೀನುಗಳಲ್ಲಿ ಮೋಟಾರ್ ಡಬ್ಬಿ ಮತ್ತು ಕೇಬಲ್ ಕಟ್ ಮಾಡಿಕೊಂಡು ಹೋಗಿರುವ ಪ್ರಕರಣಗಳು ಸಾಕಷ್ಟು ಬಾರಿ ಇಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದು. ಅದಕ್ಕಾಗಿ ಕೂಡಲೇ ಸಂಬಂಧಪಟ್ಟ ಕಾನಹೊಸಹಳ್ಳಿ ಪೋಲಿಸರು ಕಳ್ಳರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸುತ್ತಮುತ್ತಲಿನ ರೈತರು , ಹಾಗೂ ಶ್ರೀ ಈಶ್ವರ ದೇವಸ್ಥಾನದ ಸಮೀತಿಯವರು ಮನವಿ ಮಾಡಿದ್ದಾರೆ…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend