ಮಾಜಿ ಶಾಸಕರಾದ ದಿವಂಗತ ಶ್ರೀ ಎನ್ ಟಿ ಬೊಮ್ಮಣ್ಣನವರ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ, ಹಾಲಿ ಕೂಡ್ಲಿಗಿ ಶಾಸಕರಾದ,ಡಾ,ಎನ್ ಟಿ.ಶ್ರೀನಿವಾಸ್…!!!

ಮಾಜಿ ಶಾಸಕರಾದ ದಿವಂಗತ ಶ್ರೀ ಎನ್ ಟಿ ಬೊಮ್ಮಣ್ಣನವರ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರತಿಭಾನ್ವಿತ ಪುರಸ್ಕಾರ ನೀಡುವ ಮೂಲಕ ತಂದೆಯವರ ಹುಟ್ಟು ಹಬ್ಬವನ್ನು ಆಚರಿಸಿದ ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್ ಎನ್ ಟಿ ಅವರು!!!!!! ಕೂಡ್ಲಿಗಿ: ದಿನಾಂಕ, 1-7-23 ಶನಿವಾರ ತಾಲೂಕಿನ ಮಾಜಿ ಶಾಸಕರಾದ ದಿವಂಗತ ಶ್ರೀ ಎನ್ ಟಿ ಬೊಮ್ಮಣ್ಣ ಅವರ ಸ್ಮರಣಾರ್ಥ 80 ನೇ ವರ್ಷದ ಜನ್ಮದಿನವನ್ನು ಕೂಡ್ಲಿಗಿಯ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆಯಿತು. ಇವರ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ತಂದೆಯವರ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಿದ ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್ ಅವರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರ ಸಹೋದರ ಎನ್ ಟಿ ತಮ್ಮಣ್ಣ ಅವರು ವಹಿಸಿದ್ದರು. ಪ್ರಸ್ತಾವಿಕ ನುಡಿಯನ್ನು ಗೌಡ್ರು ಬಸವರಾಜ್ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಕೂಡ್ಲಿಗಿ ಇವರು ಮಾಜಿ ಶಾಸಕರಾದ ದಿವಂಗತ ಎನ್.ಟಿ ಬೊಮ್ಮಣ್ಣನವರ ಬಾಲ್ಯದ ಜೀವನ ಹಾಗೂ ಅವರ ಕುಟುಂಬದವರ ಮಾಹಿತಿ ಹಾಗೂ ಅವರ ರಾಜಕೀಯದ ನಡೆ ಅವರ ಮಹತ್ವವನ್ನು ತಿಳಿಸಿದರು. ವಿಶೇಷ ಉಪನ್ಯಾಸವನ್ನು ಶ್ರೀ ವಿರುಪಾಕ್ಷಪ್ಪ ಪೂಜಾರಹಳ್ಳಿ ಪ್ರಾಧ್ಯಾಪಕರು ಹಂಪಿ ವಿಶ್ವವಿದ್ಯಾಲಯ ಹಂಪಿ ಇವರು ಮಾತನಾಡಿ ಶಿಕ್ಷಣದ ಮಹತ್ವ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಾಧಕರು ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು,


ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್ ಎನ್ ಟಿ ಅವರು ವಿದ್ಯೆಯ ಮುಖ್ಯ ಕೆಲಸವೆಂದರೆ ಪ್ರಯೋಜನಕರವಾದ ಬುದ್ದಿವಂತಿಕೆಯ ಮತ್ತು ರಾಷ್ಟ್ರ ನಿಷ್ಠೆಯ ಭಾವೋದ್ವೇಗಕ್ಕೆ ತುತ್ತಾಗದ ಪ್ರಬಲವಾದ ನೈತಿಕ ಶಕ್ತಿ ನಡೆಯುವ ಸಂಸ್ಕೃತಿಯನ್ನು ಮತ್ತು ವೈಜ್ಞಾನಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಆರೋಗ್ಯ ಪೂರ್ಣ ಪ್ರಜೆಗಳನ್ನು ರೂಪಿಸುವುದೇ ವಿದ್ಯೆಯ ಮಹತ್ವವಾಗಿದೆ, ಸಂಕ್ಷಿಪ್ತವಾಗಿ ಹೇಳಬೇಕೆಂದರೆ ವಿದ್ಯೆಯ ಗುರಿ ಮತ್ತು ವಾಸ್ತವ ಅಂಶಗಳು ಕ್ರಮಬದ್ಧವಾಗಿ ಐಕ್ಯವಾಗಿ ಇರಬೇಕೆಂದು ಹೇಳಿದರು. ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಓದುವಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ಆ ದೇವರು ನಮಗೆ ಆಶೀರ್ವಾದ ಮಾಡಬೇಕು ಎಂದರು, ನಾನು ಒಬ್ಬ ವೈದ್ಯನಾಗಿ ತಂದೆಯವರ ಹುಟ್ಟುಹಬ್ಬ ಹಾಗೂ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ತಮ್ಮ ತಂದೆಯವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿ ಅರ್ಥಪೂರ್ಣವಾಗಿಸಿದ್ದೇವೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕೂಡ್ಲಿಗಿ ಸರ್ಕಾರಿ ಪದವಿಪೂರ್ವ ಕಾಲೇಜ್ ಪ್ರಾಂಶುಪಾಲೆ ಕೆ. ಕೊತ್ಲಮ್ಮ, ನಿವೃತ್ತ ದೈಹಿಕ ಉಪನ್ಯಾಸಕರಾದ ಡಿ. ನಾಗರಾಜ್,ನಿವೃತ್ತ ತಾಲೂಕ ಪಂಚಾಯಿತಿ ಇಒ ಜಿ .ಬಸಣ್ಣ, ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸದಸ್ಯರಾದ ಕಾವಲ್ಲಿ ಶಿವಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಉದಯ್ ಜನ್ನು, ಮುಖಂಡರಾದ ಜಯರಾಮ್ ನಾಯಕ, ಹಾಗೂ ಕಾಂಗ್ರೆಸ್ ಮುಖಂಡರುಗಳು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು, ತಾಲೂಕಿನ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend