ಗಂಗಾವತಿ ಕ್ಷೇತ್ರದ ಎಲ್ಲಾ ಪಂಚಾಯತಿಗಳ ಅಭಿವೃದ್ಧಿಗೆ ಬದ್ಧ ಗಾಲಿ ಜನಾರ್ದನ್ ರೆಡ್ಡಿ…!!!

ಗಂಗಾವತಿ ಕ್ಷೇತ್ರದ ಎಲ್ಲಾ ಪಂಚಾಯತಿಗಳ ಅಭಿವೃದ್ಧಿಗೆ ಬದ್ಧ ಗಾಲಿ ಜನಾರ್ದನ್ ರೆಡ್ಡಿ. ಕೊಪ್ಪಳ ಜಿಲ್ಲಾ ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಾನು ಬದ್ಧವಾಗಿರುವದಾಗಿ ಶಾಸಕ ಗಾಲಿಜನಾರ್ಧನ್ ರೆಡ್ಡಿ ಹೇಳಿದರು ಶುಕ್ರವಾರದಂದು ಕೆಸರಟ್ಟಿ ಗ್ರಾಮ ಹಾಗೂ ಪಂಚಾಯತಿ ವ್ಯಾಪ್ತಿಯ ಗಂಗಾವತಿ ತಾಲೂಕಿನ ಕೆಸರಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಗ್ರಾಮ ಪಂಚಾಯತಿ ಕಾರ್ಯಾಲಯ ಕಟ್ಟಡ ಹಾಗೂ ಭಾರತ ನಿರ್ಮಾಣ ಸೇವ ಕೇಂದ್ರ ಮತ್ತು ಎನ್ ಆರ್ ಎಲ್ ಎಂ ವರ್ಕ್ ಶೆಡ್ ನೂತನ ಕಟ್ಟಡವನ್ನು ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ಉದ್ಘಾಟಿಸಿ ಮಾತನಾಡಿದ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳನ್ನು ಸಮಗ್ರ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು. ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ರಸ್ತೆ ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಎಂದು ಶಾಸಕರು ಹೇಳಿದರು ರಾಷ್ಟ್ರೀಯ ಜಲಜೀವನ್ ಮಿಷನ್ ಎನ್ ಆರ್ ಎಲ್ ಎಂ ವರ್ಕ್ ಮತ್ತು ನರೇಗೆ ಕೆಲಸಗಳನ್ನು ಸೇರಿದಂತೆ ಎಲ್ಲಾ ಕೆಲಸಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ನಡೆಸಿಕೊಡಲಾಗುತ್ತದೆ ಎಂದರು. ಈ ಸಮಯದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಬಸವರಾಜ್ ಉಪಾಧ್ಯಕ್ಷರು ವಿರುಪಮ್ಮ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತೇಶ್ ಗೌಡ ಪಾಟೀಲ್ ಪಿಡಿಒ ಕೃಷ್ಣ ಎಚ್ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಮೊನೋಹರ್ ಗೌಡ ಹೇರೂರು ಗ್ರಾಮೀಣ ಅಧ್ಯಕ್ಷ ಡಿಕೆ ದುರ್ಗಪ್ಪ ಮಂಜುನಾಥ್ ಧಣಿ ವಿರುಪಾಕ್ಷ ಪೊಲೀಸ್ ಪಾಟೀಲ್ ಜಿಲನ್ ಭಾಷಾ ವಿಶ್ವನಾಥ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು.

ವರದಿ..ಹೆಚ್ ಮಲ್ಲೇಶ್ವರಭಂಡಾರಿ ಗಂಗಾವತಿ ತಾಲೂಕು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend