ಕಟ್ಟಡ ಕಾರ್ಮಿಕರ ನೊಂದಣಿ ಕಾರ್ಡ್ ರದ್ದತಿ ಅಭಿಯಾನದ ಜಾಗೃತಿ ಮೂಡಿಸುವ ವಾಹನಕ್ಕೆ ಚಾಲನೆ
ಬಳ್ಳಾರಿ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಕಲಿ ದಾಖಲಾತಿ ಸೃಷ್ಠಿಸಿ ಹಾಗೂ ಅನರ್ಹವಾದ ಕಾರ್ಮಿಕರು ಕಟ್ಟಡ ಕಾರ್ಮಿಕರೆಂದು ನೊಂದಣಿ ಮಾಡಿಸಿಕೊಂಡಿರುವ ಕುರಿತು “ಕಟ್ಟಡ ಕಾರ್ಮಿಕರ ನೊಂದಣಿ ಕಾರ್ಡ್ ರದ್ದತಿ ಆಭಿಯಾನ”ವನ್ನು ಕೈಗೊಂಡಿದ್ದು, ಆಟೋ ಪ್ರಚಾರದ ಮೂಲಕ ಜಾಗೃತಿ ಮೂಡಿಸುವ ವಾಹನಕ್ಕೆ ಬಳ್ಳಾರಿ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಕಮಲ್‍ಷಾ ಅಲ್ತಫ್ ಅಹಮದ್ ಅವರು ಕಾರ್ಮಿಕ ಇಲಾಖೆ ಕಚೇರಿ ಅವರಣದಲ್ಲಿ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಮಿಕ ಮಂಡಳಿಯಿಂದ ಕಾರ್ಡ್ ರದ್ದತಿ ಅಭಿಯಾನವನ್ನು ಜಿಲ್ಲೆಯಾದ್ಯಂತ ಫೆ.25ರವರೆಗೆ ಹಮ್ಮಿಕೊಳ್ಳಲಾಗಿದೆ.
ಕಟ್ಟಡ ಕಾರ್ಮಿಕರೆಂದು ನಕಲಿ ದಾಖಲೆ ಸೃಷ್ಠಿಸಿ ಕಾರ್ಮಿಕರೆಂದು ನೋಂದಣಿ ಮಾಡಿಸಿಕೊಂಡಿದ್ದಲ್ಲಿ ತಾವು ಪಡೆದಿರುವ ಗುರುತಿನ ಚೀಟಿಯನ್ನು ಸ್ವ ಇಚ್ಚೆಯಿಂದ ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿಗೆ ಹಿಂದಿರುಗಿಸಿ ಸದಸ್ಯತ್ವವನ್ನು ರದ್ದುಪಡಿಸಿಕೊಳ್ಳಬೇಕು ಎಂದರು.
ಇಲ್ಲವಾದಲ್ಲಿ ಇಲಾಖಾ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ ನಕಲಿ ದಾಖಲೆ ಹಾಗೂ ಅನರ್ಹ ಕಾರ್ಮಿಕರು ಪಡೆದಿರುವ ಮಂಡಳಿಯ ಗುರುತಿನ ಚೀಟಿಯನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಹಾಗೂ ಮಂಡಳಿಯಿಂದ ಸೌಲಭ್ಯಗಳನ್ನು ಪಡೆದುಕೊಂಡಲ್ಲಿ ಅಂತಹ ಫಲಾನುಭವಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರಾದ ಎಂ.ರವಿದಾಸ್, ಕಾರ್ಯನಿರ್ವಾಹಕ ಅಧಿಕಾರಿ ಎನ್.ಶಿವರಾಜ, ಪಿ.ತುರುಮಂದೆಪ್ಪ, ಹೆಚ್.ರಮೇಶ್ ಶ್ರೀನಿವಾಸ, ಕೊಟ್ರೇಶ ಹಾಗೂ ಇತರರು ಇದ್ದರು…

ವರದಿ. ಉಮೇಶ್, ಎಚ್, ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
