ಸ.ಮಾ.ಹಿ.ಪ್ರಾ.ಶಾಲೆ ಬಣವಿಕಲ್ಲು 23 ನೇ ಸಾಲಿನ ಶಾಲಾಭಿವೃದ್ಧಿ ಸಮಿತಿ (ಎಸ್ ಡಿ ಎಂ ಸಿ) ಪ್ರಥಮ ಪೂರ್ವಭಾವಿ ಸಭೆ!!!!! ಕೂಡ್ಲಿಗಿ: ದಿನಾಂಕ. 9-2-23 ಗುರುವಾರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾಭಿವೃದ್ಧಿ ಸಮಿತಿ (ಎಸ್ ಡಿ ಎಂ ಸಿ) ಪೂರ್ವಭಾವಿ ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್ ಡಿ ಎಂ ಸಿ ವಿಜಯನಗರ ಜಿಲ್ಲಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ ಅವರು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ನೂತನ ಸದಸ್ಯರುಗಳಿಗೆ ಎಸ್ ಡಿ ಎಂ ಸಿ ಯ ಜವಾಬ್ದಾರಿಗಳು, ಮತ್ತು ಕರ್ತವ್ಯಗಳನ್ನು ತಿಳಿಸಿ, ಸರ್ಕಾರಿ ಶಾಲೆಗಳಿಗೆ ಹೆಚ್ಚು ಹೆಚ್ಚು ಹಾಜರಾತಿ ತರುವುದಕ್ಕೆ.

ಗ್ರಾಮದ ಮಕ್ಕಳ ಪೋಷಕರನ್ನು ಮನವೊಲಿಸಿ ಸರ್ಕಾರಿ ಶಾಲೆಗೆ ಸೇರಿಸುವಂತೆ ಶಿಕ್ಷಕರು ಹಾಗೂ ತಾಲೂಕು ಶಿಕ್ಷಕರ ಸಂಘದವರನ್ನು ಕರೆಯಿಸಿ, ನಾವು ಕೂಡ ನಿಮ್ಮ ಜೊತೆಗೆ ಸೇರಿಕೊಂಡು ಮನೆ ಮನೆಗೆ ಹೋಗಿ ಸರ್ಕಾರಿ ಶಾಲೆಗೆ ಸೇರಿಸುವಂತೆ ಪೋಷಕರಿಗೆ ಜಾಗೃತಿ ಮೂಡಿಸಬೇಕು ಅಂದಾಗ ಮಾತ್ರವೇ ಸರ್ಕಾರಿ ಶಾಲೆಗಳು ಸಬಲೀಕರಣ ವಾಗುವುದು. ಸರ್ಕಾರಿ ಶಾಲೆಯಲ್ಲಿ ಓದಿದವರು ಮಾತ್ರ ಬಂಗಾರದ ಪದಕಗಳನ್ನು ಪಡೆದಿರುತ್ತಾರೆ ಹೊರತು, ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಯಾವ ಪದಕಗಳನ್ನು ಪಡೆದಿರುವ ಉದಾಹರಣೆಗಳಿಲ್ಲ ಎಂದು ಹೇಳಿದರು…

ಹಾಗೂ ಈ ಸಭೆ ನಿರ್ಣಯಗಳು, ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಮತ್ತು ಶಾಲಾ ಅಂಗಳವನ್ನು ಸಮತಟ್ಟು ಮಾಡುವುದು. ಹಾಗೂ ಹಳೆ ಸ.ಮಾ.ಹಿ.ಪ್ರಾ. ಶಾಲೆಯ ಕಟ್ಟಡವು ಬೀಳುವ ಹಂತದಲ್ಲಿದ್ದು, ಈ ಕಟ್ಟಡದ ಹಿಂದೆ ಅಂಗನವಾಡಿ ಕೇಂದ್ರವಿದ್ದು ಮಕ್ಕಳ ಜೀವಕ್ಕೆ ಅಪಾಯವಿರುವುದರಿಂದ. ಕೂಡಲೇ ಎಸ್ ಡಿ ಎಂ ಸಿ ವತಿಯಿಂದ .ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅವರ ಗಮನಕ್ಕೆ ತಂದು ಸರ್ಕಾರದ ಅನುದಾನದಲ್ಲಿ ದುರಸ್ತಿಗೊಳಿಸುವ ಬಗ್ಗೆ ಚರ್ಚಿಸಿ ಎಲ್ಲಾ ಸದಸ್ಯರು ಅನುಮೋದಿಸಿದರು. ಮುಖ್ಯ ಶಿಕ್ಷಕ ಪಿ ತಿಪ್ಪೇಸ್ವಾಮಿ, ಸಹ ಶಿಕ್ಷಕರಾದ ಜಿ. ಕೊಟ್ರಗೌಡ, ಓ ಬಸಮ್ಮ, ದೈಹಿಕ ಶಿಕ್ಷಕ ಜಿ ಕರಿಬಸವನಗೌಡ, ಹಾಗೂ ಎಸ್ ಡಿ ಎಂ ಸಿ ತಾಲೂಕು ಅಧ್ಯಕ್ಷೆ ಶ್ರೀಮತಿ ಶ್ರೀ ಟಿ. ಭಾಗ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಎಂ.ಬಸವರಾಜ , ಉಪಾಧ್ಯಕ್ಷರಾದ ಶ್ರೀಮತಿ ಶ್ರೀ ಅಕ್ಕಮ್ಮ, ಸದಸ್ಯರಾದ ಜಿ ಸಂತೋಷ್ ಕುಮಾರ್, ಬಿ. ಎಂ. ಕವಿತ, ಸಂಪೂರ್ಣಮ್ಮ, ಸಾಕಮ್ಮ, ಎಂ ಶಿವಮ್ಮ, ಮೈಮೂನ, ಟಿ ಮಲ್ಲಮ್ಮ, ಎಸ್ ಬಸಮ್ಮ, ಚನ್ನಬಸಮ್ಮ, ಬಟ್ರಳ್ಳಿ ಬಸವರಾಜ್, ಡಿ ಮಂಜುನಾಥ್, ಅರುಧಿ ಸಿದ್ದೇಶ್, ಪಿ .ಬಸವರಾಜ್, ಶ್ರೀ ಚನ್ನಬಸವನಗೌಡ, ಇಮಾಮ್ ಸಾಬ್ ಡಿ , ಅಂಜನ ಮೂರ್ತಿ ಹಾಗೂ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.

ವರದಿ. ವಿರೇಶ್ ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
