ಶ್ರೀಕಂಠಾಪುರ ತಾಂಡಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ಭೇಟಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀಕಂಠಾಪುರ ತಾಂಡಕ್ಕೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ರವಿಕುಮಾರ್, ಭೇಟಿ ನೀಡಿ.
ಗ್ರಾಮದ ಸಮಸ್ಯೆಯನ್ನು ಆಲಿಸಿ ಸರ್ಕಾರದಿಂದ, ನೀಡಿರುವ, ಮನೆಗಳ ಹಣ ರದ್ದಾಗಿರುವ ಕುರಿತು, ಅಲ್ಲಿನ ಸದಸ್ಯರುಗಳ ಜೊತೆ ಚರ್ಚಿಸಿ, ಸರ್ಕಾರಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಶೌಚಾಲಯ ಮತ್ತು ಕೊಠಡಿಗಳ ಸ್ವಚ್ಛತೆಯನ್ನು ಆಲಿಸಿದರು.
ನಂತರ ಗ್ರಾಮ ಪಂಚಾಯಿತಿ ಸದಸ್ಯರು ಒಕ್ಕೂಟದ ತಾಲೂಕು ಅಧ್ಯಕ್ಷರಾದ ಕೆ ಮುರಳಿ ರಾಜ್, ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿಗೆ, ಬರುವಂತಹ ಅನುದಾನ, ಸಾಕಾಗುವುದಿಲ್ಲ, ಮುಖ್ಯವಾಗಿ, ಕುಡಿಯುವ ನೀರಿನ ಸಮಸ್ಯೆಯನ್ನು, ಬಗೆಹರಿಸಬೇಕೆಂದು ಅಧಿಕಾರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಂಚಪ್ಪ, ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು , ಸರ್ವ ಸದಸ್ಯರುಗಳು ಇದ್ದರು..

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
