;

ಜನಪದ ಗ್ರಾಮೀಣ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ…!!!

ಜನಪದ ಗ್ರಾಮೀಣ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಕೂಡ್ಲಿಗಿ: ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಮತ್ತು ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಲು ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ರಾಜ್ಯ ಕಲಾವಿದರ ಸಂಘದ ಅಧ್ಯಕ್ಷ ಗುಬ್ಬಿ ವೀರೆಶ್ ಪ್ರಸಾದ್ ಹೇಳಿದ್ದರು. ಎಲ್ಲಾ ಕಲಾವಿದರ ಪರವಾಗಿ ನಾನು ರಾಜ್ಯ ದಲ್ಲಿ ಹೋರಾಟ ಮಾಡುತ್ತೇನೆ ಫೆಬ್ರವರಿ 1ನೇ ತರೀಕು ಬೆಂಗಳೂರಿನ ನಲ್ಲಿ ವಿಧಾನ ಸೌದದ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿಯನ್ನು ಹೋರಾಟ ಮಾಡೋಣ ಕಲಾವಿದರಗಾಗಿ ಮಂಡಳಿಯನ್ನು ಸ್ಥಾಪನೆ ಮಾಡಬೇಕು ಎಲ್ಲಾ ಕಲಾವಿದರಿಗೆ ಸರ್ಕಾರ ದ ಸೌಲಭ್ಯ ಸಿಗಬೇಕೆಂದು ನಾವು ಎಲ್ಲರೂ ಸೇರಿ ಹೋರಾಟ ಮಾಡಿದರೆ ನಮ್ಮಗೆ ಮುಂದು ಒಂದು ದಿನ ಜಯ ಸಿಗುತ್ತದೆ ಎಂದು ತಿಳಿಸಿದರು. ತಾಲೂಕಿನ ಹುರುಳಿಹಾಳ್ ಗ್ರಾಮದಲ್ಲಿ ಗ್ರಾಮೀಣ ಜನಪದ ಕಲೋಸ್ತವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕೂಡ್ಲಿಗಿ ಕ್ಷೇತ್ರದ ಪಕ್ಷೇತರದ ಅಭ್ಯರ್ಥಿಯಾದ ಯಮನೂರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಭಜನೆ ವಾದ್ಯಗಳು ನುಡಿಸುವದರ ಮುಖಾಂತರ ಪ್ರಾರ್ಥನೆಯನ್ನು ಮಾಡಿದರು. ಇನ್ನು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕ್ಷೇತ್ರ ಅಭ್ಯರ್ಥಿಯಾದ ಯಮನೂರಪ್ಪನವರು ಮಾತನಾಡಿ ಕಲಾವಿದರಿಗಾಗಿ ಎಲ್ಲ ರೀತಿಯಿಂದ ನಾನು ಕಲಾವಿದರ ಪರವಾಗಿ ನಾನು ಹೋರಾಟ ಮಾಡುತ್ತೇನೆ ಕಾರ್ಯಕ್ರಮದಲ್ಲಿ ಕಲಾವಿದರ ಜಿಲ್ಲಾ ಅಧ್ಯಕ್ಷರು ನಿಂಗಪ್ಪ. ಜಿಲ್ಲಾ ಕಾರ್ಯದರ್ಶಿಯಾಗಿ ಬಣಕಾರ ಮುಗಪ್ಪ ನವರಿಗೆ ಆಯ್ಕೆ ಪತ್ರವನ್ನು ವಿತರಿಸಲಾಯಿತು. ಎಲ್ಲಾ ಕಲಾವಿದರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. ಹುರುಳಿಹಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ತಾಲೂಕಿನ ಎಲ್ಲಾ ಕಲಾವಿದರು ಭಾಗವಹಿಸಿದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;