;

ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ ಬಿಜೆಪಿ ಮುಖಂಡ ಕೋಡಿಹಳ್ಳಿ ಭೀಮಣ್ಣ…!!!

ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ ಬಿಜೆಪಿ ಮುಖಂಡ ಕೋಡಿಹಳ್ಳಿ ಭೀಮಣ್ಣ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಿಸ್ನಳ್ಳಿಯಲ್ಲಿ ಗ್ರಾಮ ದೇವತಾ ಜಾತ್ರೋತ್ಸವದ ನಿಮಿತ್ತ ಇತ್ತೀಚಿಗೆ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಸೋಲು ಗೆಲುವಿಗಿಂತ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಕೋಡಿಹಳ್ಳಿ ಭೀಮಣ್ಣ ತಿಳಿಸಿದರು.
ನಂತರ ಮಾತನಾಡಿ ಮಾನಸಿಕ ದೈಹಿಕ ಸದೃಢಕ್ಕಾಗಿ ಕ್ರೀಡಾಕೂಟಗಳನ್ನು ನಡೆಸುವುದರ ಜೊತೆಗೆ ಕ್ರೀಡಾಪಟುಗಳ ಮಧ್ಯೆ ಸಹೋದರತೆ ಇರುವುದು ಉತ್ತಮ ನಡೆಯಾಗಲಿದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದರ ಮೂಲಕ ಉತ್ತಮ ಆಟಗಾರರನ್ನು ಅವರ ಪ್ರಪಂಚಕ್ಕೆ ಪರಿಚಯಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಚಿತ್ರ ನಟ ರಾಕೇಶ್ ದಳವಾಯಿ. ಮಾನವ ಬಂಧುತ್ವ ವೇದಿಕೆಯ ಈಶ್ವರ ನಾಯಕ್. ಸಂದೀಪ್. ಹಿರಿಯ ಮುಖಂಡರಾದ ಹುಲಿಕೆರೆ ಮಾರಪ್ಪ. ಭದ್ರಪ್ಪ .ನಾಗರಾಜ್ ಗೌಡ್ರು. ಹುಲಿ ರಾಜ್. ಸೇರಿದಂತೆ ಊರಿನ ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;