ವಿದ್ಯುತ್ ಸ್ಪರ್ಶದಿಂದ ಮನೆ ಹಾಗೂ ಶೇಂಗಾ ಬಣಿವಿಗೆ ಬೆಂಕಿ
ಕಾನ ಹೊಸಹಳ್ಳಿ: ವಿದ್ಯುತ್ ಸ್ಪರ್ಶದಿಂದ ಮನೆಗೆ ಬೆಂಕಿ
ತಗಲಿ ಶೇಂಗಾ ಬಣವೆ, ಮನೆ ಹಾಗೂ ದವಸ ದಾನ್ಯಗಳು, ರೈತ ಬಳಸುವಂತಹ ನೇಗಿಲೆ, ಕುಂಟೆ ಸೇರಿದಂತೆ ಇತರೆ ವಸ್ತುಗಳು ಸುಟ್ಟು ಹೋಗಿರುವ ಘಟನೆ ತಾಲೂಕಿನ ಪೂಜಾರಹಳ್ಳಿ ಗ್ರಾಮದ ಡಾ ಬಿ.ಆರ್ ಅಂಬೇಡ್ಕರ್ ಕಾಲೋನಿಯ ನಿವಾಸಿ ನಿಂಗಮ್ಮ ಲೇಟ್ ದುರುಗಪ್ಪ ಎಂಬುವವರ ಕಣದಲ್ಲಿ ವಿದ್ಯುತ್ ಸ್ಪರ್ಶದಿಂದ ಮನೆಗೆ ಬೆಂಕಿ ತಗಲಿ ಶೇಂಗಾ ಬಣವೆ, ಮನೆಗೆ ಬೆಂಕಿಗೆ ಆಹುತಿಯಾಗಿದೆ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ. ಜಾನುವಾರುಗಳ ಬದುಕಿಗೆ ಆಹಾರಕ್ಕಾಗಿ ರೈತನೋರ್ವ ವರ್ಷಪೂರ್ತಿ ಕಷ್ಟಪಟ್ಟು ಶೇಖರಣೆ ಮಾಡಲಾಗಿದ್ದ ಸುಮಾರು 50 ರಿಂದ 60 ಸಾವಿರ ಬೆಲೆ ಬಾಳುವ ಶೇಂಗಾ ಬಣವೆ, ಇತರೆ ಪ್ರಮುಖ ದಾಖಲೆಗಳು ಹಾಗೂ ಬಟ್ಟೆಗಳು, ದವಸ ಧಾನ್ಯಗಳು ಇತರೆ ವಸ್ತುಗಳು ಬೆಂಕಿಗೆ ಸಿಲುಕಿ ಆಹುತಿ ಆಗಿದೆ. ನೆರೆಮನೆ ನಿವಾಸಿಗಳು ಸೇರಿ ನೀರು ಸುರಿದು ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ, ಸಂಪೂರ್ಣವಾಗಿ ಸುಟ್ಟು ಹೋಗಿರುತ್ತದೆ. ಬೆಂಕಿಯ ಜ್ವಾಲೆ ಸಮೀಪದ ಮನೆಗಳಿಗೆ ಹರಡಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಘಟನೆಯಿಂದಾಗಿ ರೂ. 15 ಲಕ್ಷ ನಷ್ಟ ಉಂಟಾಗಿದೆ. ಇನ್ ಕೂಡ್ಲಿಗಿ ಅಗ್ನಿಶಾಮಕ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯ ಜ್ವಾಲೆಯನ್ನು ನಂದಿಸುವ ಕಾರ್ಯಾಚರಣೆ ಮಾಡಿದ್ದಾರೆ. ಬಣವೆಗೆ ಬೆಂಕಿ ಹತ್ತಿರುವುದನ್ನು ಕಂಡ ರೈತ ಮಹಿಳೆಯ ಗೋಳಾಟ ನಡೆಸಿ ತನ್ನ ಆಕ್ರನಂದನ ಹೊರಹಾಕಿದ್ದು, ಸೂಕ್ತ ಪರಿಹಾರಕ್ಕೆ ಆಗ್ರಹಿಸಿದ್ದಾರೆ..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
