;

ತುಂಗಭದ್ರಾ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ!!

ತುಂಗಭದ್ರಾ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ!!

ಹೂವಿನ ಹಡಗಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ದಿನ ಪತ್ರಿಕೆ ಓದು ಅತ್ಯವಶಕ ಎಂದು
ಉಪನ್ಯಾಸಕ ಶಂಕರ್ ಬೆಟಗೇರಿ ಹೇಳಿದರು.

ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಶುಕ್ರವಾರ ಸರಸ್ವತಿ ಪೂಜೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕಠಿಣ ವಿಷಯಗಳಾದ ಗಣಿತ ಇಂಗ್ಲೀಷ್ ವಿಜ್ಞಾನಕ್ಕೆ ಹೆಚ್ಚು ಆದ್ಯತೆ ನೀಡಬೇಕು.
ಪ್ರತಿ ನಿತ್ಯ ಎಲ್ಲಾ ವಿಷಯಗಳನ್ನು ಪುನರಾವರ್ತನೆ ಮಾಡಬೇಕು.
ಉನ್ನತ ಗುರಿ ಸಾಧನೆಗೆ
ಹೆಚ್ಚಿನ ಅಧ್ಯಯನ ನಡೆಸಿ ಎಂದು ತಿಳಿಸಿದರು.

ತುಂಗಭದ್ರಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ
ಡಾ ಎಂ ಧರ್ಮಣ್ಣ ಮಾತನಾಡಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರಿ ಎಂದು ಶುಭ ಹಾರೈಸಿದರು.

ನಿರ್ದೇಶಕ ಈ ಟಿ ಮಾಲತೇಶ ಮುಖ್ಯ ಗುರುಗಳಾದ ಸುರೇಶ ಅಂಗಡಿ ವಿದ್ಯಾರ್ಥಿಗಳಿಗೆ
ಮಾಹಿತಿ ನೀಡಿದರು.

2019-20 ಹಾಗೂ 2020-21 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ
ಹೆಚ್ಚು ಅಂಕ ಗಳಿಸಿದ
ಬಿ ನಿಖಹತ್, ಕಮ್ಮಾರ ಪಾರ್ವತಿ ರವರಿಗೆ ಶಾಲೆಯಿಂದ ಪುಸ್ತಕ
ಹಾಗೂ ಸಿಂಚನ ಪ್ರಕಾಶನದ ವತಿಯಿಂದ
ಎರಡು ಸಾವಿರ ಗೌರವ ಪುರಸ್ಕಾರ ನೀಡಲಾಯಿತು.

ಹತ್ತನೇ ತರಗತಿ ವರ್ಗ ಶಿಕ್ಷಕರಾದ ಕೆ ಬಸವರಾಜ
ಜಿ ಆನಂದ್ ದೈಹಿಕ ಶಿಕ್ಷಕ ‌‌ಸ್ವಾಮಿನಾಥ ರಾಮಸ್ವಾಮಿ
ನಿರ್ವಹಿಸಿದರು. ಶಿಕ್ಷಕರಾದ
ವೈ ಜಯಮ್ಮ, ಪ್ರತಿಮಾ ಎನ್, ಲಂಬಾಣಿ ಗಿಡ್ಡಾನಾಯ್ಕ್, ಲಾವಣ್ಯ ಜಿ. ರೇಖಾ ಎಸ್ ಸಂತೋಷ್ ಕುಮಾರ್ ಎಸ್ ಹಾಜರಿದ್ದರು. ಎಸ್. ಸಮೀರ್ ಹಾಗೂ ಕೆ ಎಂ ನಂದಿನಿ ಪ್ರಸಕ್ತ ಸಾಲಿನ ಉತ್ತಮ ವಿದ್ಯಾರ್ಥಿ
ಪ್ರಶಸ್ತಿ ಪಡೆದರು.

ವರದಿ: ಅಜಯ.ಚ.ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;