;

ರೈತರಿಗೆ ಸ್ಥಳದಲ್ಲಿ ಹೋಗಿ ಕೋವಿಡ್- 19 ರ ಲಸಿಕೆ ನೀಡಲಾಯಿತು…!!!

ರೈತರಿಗೆ ಸ್ಥಳದಲ್ಲಿ ಕೋವಿಡ್- 19 ರ ಲಸಿಕೆ ನೀಡಲಾಯಿತು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ
ಹೋಬಳಿ ವ್ಯಾಪ್ತಿಗೆ ಬರುವಹೂಡೇಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾರಹಟ್ಟಿ.ಸುಟ್ಟ ಕರ್ಣರ ಹಟ್ಟಿ, ನಡುವಲ ಹಟ್ಟಿ. ಗ್ರಾಮಗಳಲ್ಲಿ ಲಸಿಕೆಯಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಗ್ರಾಮಗಳಲ್ಲಿ ಅತಿಕಡಿಮೆ ಪ್ರಮಾಣದಲ್ಲಿ ಜನರು ಲಸಿಕೆ ಪಡೆದಿರುವುದರಿಂದ ಜಿಲ್ಲಾ ಮತ್ತು ತಾಲ್ಲೂಕಿನ ಅಧಿಕಾರಿಗಳೇ ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಮನವೊಲಿಸುವ ಪ್ರಯತ್ನ ಮಾಡಲು ಮುಂದಾದರು,. ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತಿ ಅಧಿಕಾರಿಗಳಾದ ಜಿಎಂ ಬಸಣ್ಣನವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮತ್ತೊಂದು ವೈರಸ್ ರಾಜ್ಯದಲ್ಲಿ ಹರಡಲು ಪ್ರಾರಂಭವಾಗಿದೆ, ದಯವಿಟ್ಟು ಮುಂಜಾಗ್ರತಾ ಕ್ರಮವಾಗಿ ಪ್ರತಿಯೊಬ್ಬರು ಒಂದನೇ ಮತ್ತು ಎರಡನೇ ಲಸಿಕೆ ಹಾಕಿಸಿಕೊಂಡು ಜಾಗೃತರಾಗಿರಿ ಎಂದು ಈ ಸಂದರ್ಭದಲ್ಲಿ ಹೇಳಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈರಣ್ಣ, ಕಾರ್ಯದರ್ಶಿ ಚಂದ್ರಣ್ಣ ಬಿಲ್ ಕಲೆಕ್ಟರ್ ತಿಪ್ಪೇರುದ್ರಪ್ಪ, ಆರೋಗ್ಯ ಇಲಾಖೆಯ ಸಹಾಯಕಿಯರಾದ, ಪ್ರೇಮ ರಾಜಮ್ಮ ಆಶಾ ಕಾರ್ಯಕರ್ತೆಯರಾದ ಚೌಡಮ್ಮ ತಿಪ್ಪಮ್ಮ ನಾಗವೇಣಿ, ಅಂಗನವಾಡಿ ಕಾರ್ಯಕರ್ತರ ಆದ ಲಲಿತ. ಸುಜಾತ, ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ.ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;