;

ಸಚಿವ ಆನಂದ್ ಸಿಂಗ್ ಅವರು ಸಿಹಿ ಸುದ್ದಿ ನೀಡುವ ಮೂಲಕ ವಿಜಯ ನಗರ ಜಿಲ್ಲೆಯ ಜನತೆಗೆ!!!

ಅ.2 ರಂದು ಸಿಎಂ ಅವರಿಂದ ನೂತನ ವಿಜಯನಗರ ಜಿಲ್ಲೆ ಉದ್ಘಾಟನೆ: ಜನವರಿಯಲ್ಲಿ ಜಿಲ್ಲಾ‌ಕಚೇರಿಗಳು ಕಾರ್ಯಾರಂಭ -ಸಚಿವ ಆನಂದ್ ಸಿಂಗ್ ಅವರು ಸಿಹಿ ಸುದ್ದಿ ನೀಡುವ ಮೂಲಕ ವಿಜಯ ನಗರ ಜಿಲ್ಲೆಯ ಜನತೆಗೆ!!!

ವಿಜಯನಗರ (ಹೊಸಪೇಟೆ),ಸೆ. 25: ಅ.2 ಮತ್ತು 3 ರಂದು ಅದ್ದೂರಿಯಾಗಿ ವಿಜಯನಗರ ಜಿಲ್ಲಾ ಉತ್ಸವ ಕಾರ್ಯಕ್ರಮ ನಡೆಯಲಿದೆ ಪ್ರವಾಸೋದ್ಯಮ , ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಜಯನಗರ ಉತ್ಸವ ದಿನಾಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಾಂಧಿಜಯಂತಿಯ ದಿನದಂದು ವಿಜಯನಗರ ಜಿಲ್ಲೆ ಅಧಿಕೃತವಾಗಿ ಉದ್ಘಾಟನೆಯಾಗಲಿದೆ‌. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೇರಿದಂತೆ ವಿವಿಧ ಮಠಾಧೀಶರು, ಶ್ರೀಗಳು, ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಹಬ್ಬದಂತೆ ಆಚರಣೆ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಿದ್ದು, ಈ ದಿನದ ಸವಿನೆನಪಿಗಾಗಿ ಜಿಲ್ಲೆಯ ಎಲ್ಲಾ ಮನೆಗಳಲ್ಲಿ ರಂಗೋಲಿ ತಳಿರು ತೋರಣಗಳಿಂದ ಹಬ್ಬದಂತೆ ಈ ದಿನ ಆಚರಿಸಿ. ನಗರದ ಎಲ್ಲಾ ಮಳಿಗೆಗಳಿಗೆ ದೀಪಾಲಂಕಾರ ಮಾಡಿ, ಎರಡು ದಿನಗಳ ಕಾಲ ದೀಪಗಳಿಂದ ನಗರ ಕಂಗೊಳಿಸಲಿ ಎಂದು ಅವರು ಹೇಳಿದರು.
ಮುಂದಿನ‌ ಜನವರಿ ತಿಂಗಳ ಹೊತ್ತಿಗೆ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳು ಪ್ರಾರಂಭಿಸಲು ಚಿಂತನೆ ನಡೆದಿದೆ.‌ಈಗಾಗಲೇ ಎಲ್ಲಾ ಇಲಾಖೆಗಳ ಕಚೇರಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಆದಷ್ಟು ಬೇಗ ಪೂರ್ಣಗೊಳ್ಳಲಿವೆ. ಇದಕ್ಕಾಗಿ ಈಗಾಗಲೇ 6 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಅವರು ‌ವಿವರಿಸಿದರು.
ನಗರದ ವಡಕರಾಯನ ದೇವಸ್ಥಾನದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ವಿಜಯ ರಥ ಮೆರವಣಿಗೆ ಮಾಡಲಾಗುತ್ತದೆ. ಸಂಜೆ ನಡೆಯುವ ಸಾಂಸ್ಕ್ರತಿಕ ಮೆರವಣಿಗೆಯಲ್ಲಿ ಸುಮಾರು 80 ತಂಡಗಳು ಪಾಲ್ಗೊಳ್ಳಲಿದ್ದು,
ಕೋವಿಡ್ ನಿಯಮಗಳನ್ನು ಪಾಲಿಸಿ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಇದೇ ಸಮಯದಲ್ಲಿ ಜಿಲ್ಲೆಯ ಕುರಿತು ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಮುಂದೆ ಮೂರನೇ ಅಲೆ ಎದುರಾಗುವ ಸಂಭವವಿದೆ ಇದನ್ನು ಗಮನದಲ್ಲಿಟ್ಟುಕೊಂಡು‌ ಕೋವಿಡ್ ನಿಯಮ ಪಾಲಿಸಿ ವಿಜಯನಗರ ಉತ್ಸವದಲ್ಲಿ ಭಾಗವಹಿಸುವಂತೆ ಅವರು ಹೇಳಿದರು.
ಈ ಸಂದರ್ಭದಲ್ಲಿ ವಿಶೇಷಾಧಿಕಾರಿ ಅನಿರುದ್ಧ್ ಶ್ರವಣ್, ಅಪರ ಜಿಲ್ಲಾಧಿಕಾರಿ ಪಿ.ಎಸ್ ಮಂಜುನಾಥ,
ಸಂಸದ ದೇವೆಂದ್ರಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಮತ್ತಿತರ ಅಧಿಕಾರಿಗಳು ಇದ್ದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;