;

ಎರಡು ದಿನಗಳ ಕಾರ್ಯಾಗಾರ (ಜಾಗೃತಿ ಶಿಭಿರ) ನಡೆಸುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.!!!

ಶುಕ್ರವಾರ ಮಳವಳ್ಳಿ ಪ್ರವಾಸಿ ಮಂದಿರದಲ್ಲಿ ಹೊಲೆಯ-ಮಾದಿಗ ಒಂದೇ ತಾಯಿಯ ಮಕ್ಕಳು ಎಂದು ಎರಡು ದಿನಗಳ ಕಾರ್ಯಾಗಾರ (ಜಾಗೃತಿ ಶಿಭಿರ) ನಡೆಸುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.!!!!!!!!

ರಾಜಕೀಯ ಕುತಂತ್ರ ಗಳಿಂದ ನಮ್ಮನ್ನು ಅಗಲಿಕೆ ಮಾಡಿ ಎರಡು ಸಮುದಾಯಗಳ ಬಿಂಬಿಸುರಿವುದರಿಂದ ಇವತ್ತು ನಾವುಗಳು ಹೊಲಯ ಮತ್ತು ಮಾದಿಗ ಅಂತ ಎರಡು ಪಂಗಡ ಗಳನ್ನಾಗಿ ಬೇರೆ ಮಾಡುವಲ್ಲಿ ಯಶಸನ್ನು ಕಂಡು ನಮ್ಮ ಮನೋಬಲವನ್ನು ಕಡಿಮೆ ಮಾಡಿ ನಮ್ಮನ್ನು ಆಳಿದರು
30 ಕ್ಕಿಂತಲೂ ಹೆಚ್ಚು ಮಂದಿ ಯುವ ಹಾಗು ಸಮಾನ ಚಿಂತನೆಯ ಹಿರಿಯ ನಾಯಕರುಗಳು ಭಾಗವಹಿಸಿದ್ದ ಸಭೆಯು ಅತ್ಯಂತ ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಜರುಗಿತು.ಸುಮಾರು 3 ತಾಸುಗಳ ಕಾಲ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೊಫೆಸರ್ ಚಂದ್ರಶೇಖರನ್ ಬಿ ಎಸ್ (ವಿಶ್ರಾಂತ ಪ್ರಾಂಶುಪಾಲರು) ಪ್ರಸ್ತುತ ಸಂಧರ್ಭದಲ್ಲಿ ನಮ್ಮ ಒಗ್ಗಟ್ಟು ಮಾತ್ರ ನಮ್ಮಸಮುದಾಯವನ್ನು ರಕ್ಷಣೆ ಮಾಡಲು ಸಾಧ್ಯ, ಒಡೆದು ಆಳುವ ನೀತಿಯ ಕುತಂತ್ರಿ ರಾಜಕಾರಣ ನಮ್ಮ ಸಮುದಾಯವನ್ನು ವಿಭಜಿಸಿದೆ,ಇದನ್ನು ಅರಿತು ಒಗ್ಗೂಡಿ ದೃಢ ಹೆಜ್ಜೆ ಇಡಬೇಕಿದೆ ಎಂಬ ಕಿವಿಮಾತು ಹೇಳಿದರು. ಸಭೆಯಲ್ಲಿ ಭಾಗವಹಿಸಿದ್ದ ನೆಲಮಾಕನಹಳ್ಳಿ ಶ್ರೀ ಮಹದೇವು (ವಿಶ್ರಾಂತ ಡಿ ಸಿ ಸಾರಿಗೆ ಇಲಾಖೆ) ಮಾತನಾಡಿ ಎಲ್ಲರೂ ನಮ್ಮೆಲ್ಲರ ವಿಮೋಚಕ ಡಾ. ಬಾಬಾ ಸಾಹೇಬ ಅಂಬೇಡ್ಕರರು ತೋರಿರುವ ಹಾದಿಯಲ್ಲೆ ನಡೆದು,ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳಾಗಿ ಸೇರಿ ಹರಿದು ಸಮಾನ ಅವಕಾಶಗಳನ್ನು ದಕ್ಕಿಸಿಕೊಳ್ಳಬೇಕಾಗಿದೆ ಎಂದರು.ಮತ್ತೋರ್ವ ಹಿರಿಯ ಸಾಮಾಜಿಕ ಹಾಗು ಪ್ರಗತಿಪರ ಚಿಂತಕ ಪ್ರೊ.ಎಂ ವಿ ಕೃಷ್ಣ (ವಿಶ್ರಾಂತ ಪ್ರಾಂಶುಪಾಲರು) ಮಾತನಾಡಿ ಸಾವಿರಾರು ವರ್ಷಗಳಿಂದ ಸಾಮಾಜಿಕವಾಗಿ ತುಳಿತಕ್ಕೊಳಗಾಗಿರುವ ಅಸ್ಪೃಶ್ಯ ಸಮುದಾಯಗಳು ಎಚ್ಚರ ಗೊಳ್ಳದಿದ್ದರೆ ಸರ್ವನಾಶವಾಗುವ ಅಪಾಯ ಕಾದಿದೆ ಎಂದರು. ಇದನ್ನು ಮನಗಂಡಿದ್ದ ಚಿಂತಕ,ವಿಶ್ವದ ಏಕೈಕ ಸಮಾನತೆಯ ಹರಿಕಾರ ಡಾ ಬಾಬಾ ಸಾಹೇಬ ಅಂಬೇಡ್ಕರರ ಕನಸುಗಳು ನನಸಾಗಲು ಹಾಗು ಅಸ್ಪೃಶ್ಯರ ಬದುಕುಗಳು ಹಸನಾಗಲು ಅವರು ಹಾಕಿಕೊಟ್ಟಿರುವ ಮಾರ್ಗಗಳಲ್ಲಿ ನಡೆಯಬೇಕೆಂದರು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ನಿವೃತ್ತ ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಎಚ್ ಕೆ ಚಂದ್ರಹಾಸ ಹಿಟ್ನನಹಳ್ಳಿ ರವರು ಇಂದಿಗೆ ಐತಿಹಾಸಿಕ ಪೂನ ಒಪ್ಪಂದಕ್ಕೆ ಸಹಿ ಹಾಕಿ 89 ವರ್ಷಗಳಾಗಿವೆ. ಅಂದಿನ ಕರಾಳ ಒಡಂಬಡಿಕೆಗೆ ಒತ್ತಾಯ ಪೂರ್ವಕವಾಗಿ ಹಾಗು ಅನಿವಾರ್ಯ ಸನ್ನಿವೇಶದಲ್ಲಿ ಹಾಕಿದ ಸಹಿ ಅಸ್ಪೃಶ್ಯರ ಪಾಲಿಗೆ ರಾಜಕೀಯವಾಗಿ ಹಾಗು ಸಾಮಾಜಿಕವಾಗಿ ಮರಣ ಶಾಸನ ವಾಯಿತು. ಅಂದಿನ ಬ್ರಿಟಿಷ್ ಪ್ರಧಾನಿ ರಾಂಸೆ ಮ್ಯಾಕ್ ಡೊನಾಲ್ಡ್ ರವರು ನೀಡಿದ್ದ ಕಮ್ಯೂನಲ್ ಅವಾರ್ಡ್ ನ್ಯಾಯ ಸಮ್ಮತ ತೀರ್ಮಾನವಾಗಿತ್ತು. ಆದರೆ ಮಹಾತ್ಮ ಗಾಂಧಿಯವರ ಹಠಮಾರಿ ಧೋರಣೆ ಯಿಂದಾಗಿ ಈವತ್ತಿಗೂ ದಲಿತ ಮಂತ್ರಿ ಶಾಸಕರುಗಳು ಬಲಿಷ್ಠ ಸಮುದಾಯಗಳ ಹಿಡಿತಕ್ಕೆ ಸಿಕ್ಕಿಹಾಕಿಕೊಂಡು ದಲಿತರದಿನಾ ದಲಿತರ ಒಂದು ತಲೆಮಾರಿನ ಬಹು ಪಾಲು ವಿದ್ಯಾರ್ಥಿ & ಯುವ ಸಮೂಹಗಳ ಪಾಲಿಗೆ ಮೊದಲು ದಲಿತ ಚಳುವಳಿ, ನಂತರ ದಸಂಸ ಒಂದು ಸನ್ನಿ ಸೃಷ್ಟಿ ಮಾಡಿತು, ಈ ಸನ್ನಿಯ ಕಾರಣ ಹೆಚ್ಚಿನ ಭರವಸೆ ಹೊಂದಿ ಇದರ ಪ್ರಭಾವಗಳಿಂದ ಹೊರಬರದೆ ಹೊದರು. ಕೊನೆಗೆ ಸ್ವಾರ್ಥಿಗಳ ಸ್ವಾರ್ಥ ದಸಂಸ ಹದಗೆಡಿಸ ತೊಡಗಿದಾಗ ಅಲ್ಲಿ ದಲಿತರ ಕೂಸುಗಳ ಬದುಕು ಬರಡಾಯಿತು. ಒಂದು ಕಡೆ ಸವರ್ಣಿಯರ ಕೆಲವು ನೀತಿಗಳ ಕಾರಣಕೆ ಸಮಾಜಿಕ ಪೀಡುಗು, ಜಾಡ್ಯ & ಅನಿಷ್ಟಗಳಿಂದ ಇವರಿಗೆ ದೊರಕಬೇಕಾದ ಬಿಡುಗಡೆ ಹೇಳಿಕೊಳ್ಳುವ ಬಗೆಯಲಿ ದೊರಕಲಿಲ್ಲ, ಮತ್ತೊಂದು ಕಡೆ ಸಮಯ ಸಾಧಕ ಸ್ವಾರ್ಥಿಗಳು ಇವರ ನಾಯಕರಾಗಿ ಸ್ಥಾಪಿತರಾಗ ತೊಡಗಿದಾಗ ಇವರು ಅಸಹಾಯಕ & ಅತಂತ್ರರಾಗಿ ಉಳಿವ ಮೂಲಕ ಇಲ್ಲಾ ಸಲ್ಲದವರಾದರು, ಇಂದಿಗೂ ಎಷ್ಟೋ ಜನ ದಲಿತ ಸಮುದಾಯದ & ಹಿರಿಯರು ಇಂಥ ಸಂಘಟನೆಗಳ ಕಾರಣಕೆ ಮನೆಯ ಜವಾಬ್ದಾರಿ ನಿಭಾಯಿಸದೇ ಸಮುದಾಯಿಕ ಚಟುವಟಿಕೆಯಲಿ ತೊಡಗಿದ್ದಾರೆ, ಸ್ಥಾಪಿತ ಹಿತಾಸಕ್ತಿಗಳ ಚಿತಾವಣೆ & ಅನೇಕರ ನಯವಂಚಕತೆ ಕಾರಣಕೆ ಬಂಡುಕೋರ ಮನಸ್ಥಿತಿ ಹೊಂದಿದವರಾಗಿ ಬದುಕಿನ ಮಟ್ಟ ಎತ್ತರಿಸಿಕೊಳ್ಳಲಾಗದೆ ಕುಸಿತ ಕಾಣುತ್ತಲೆ ಇದ್ದಾರೇ, ಈ ದಲಿತರೇ ಹೀಗೆ, ಸಂಘಟನೆ ಹೆಸರಲಿ ಅಹಿತವಾದುದಕೆ ತೊಡಗುವ ಜನ ಎಂಬ ಹಣೆ ಪಟ್ಟಿ ಕಟ್ಟಿಕೊಳ್ಳುತಲಿದ್ದಾರೆ. ಹೀಗೆ ತಮ್ಮ ಒಂದು ತಲೆಮಾರಿನ ಭವಿಷ್ಯ ತಮ್ಮ ಕೈಯಾರ ನಾಶ ಮಾಡಿಕೊಂಡರು ಹಾಗು ತಮ್ಮ‌ಸಂತತಿಗಳನು ಅತಂತ್ರತೆಗೆ ದೂಕಿದರು, ಆದರೆ ಸಮಾನಂತರ ಜಾತಿಗಳ ಭವಿಷ್ಯ ಮಾತ್ರ ಉಜ್ವಾಲವಾಯಿತು, ಕಾರಣ ದಲಿತರ ಪ್ರಯತ್ನ ಅವರ ಬಲವರ್ಧನೆಗೆ ಹವಿಸ್ಸಾಯಿತು. ಇಲ್ಲಿ ಮಾದಿಗರು ತೋರುತ ಸಾಗಿದ ಅಪ್ರಬುದ್ದ ಹಾಗು ಅಸಂಬದ್ದ ನಡಾವಳಿಕೆಗಳು ಸಮಾನಂತರ ಜಾತಿಯ ಏಳಿಗೆಗೆ ಕೀಲೆಣ್ಣೆ ಆಯಿತು. ದಲಿತ ಸಮಾಜ ಮಾತ್ರ ಹಿಂದುಳಿಯುತ ಹೋಯಿತು. ಹೀಗೆ ರಾಜಕೀಯವಾಗಿ ಪತನಗೊಂಡು, ಸಮಾಜಿಕವಾಗಿ ಅಃಧಪತನದ ಹಾದಿ ಹಿಡಿಯಿತು. ಈಗ ಕೆಟ್ಟ ಮೇಲೆ ಬುದ್ದಿ ಬಂತು ಅನ್ನುವಂತೆ ಈಗಿನ ದಲಿತ ಯುವ ಸಮುದಾಯ ವಿವೇಚನಾಪೂರ್ವಕವಾಗಿ ಸಾಗ ತೊಡಗಿದೆ, ಯಾರನ್ನು ನಂಬದೆ, ನೆಚ್ಚದೆ ಅನೇಕ ಏಳು ಬೀಳಿನ ನಡುವೆ. ಮುಂದೆ ಕುಂಟತ ಸಾಗುತ್ತಿದೆ.ನಮ್ಮ ಜನ ಪಾಲಿಗೆ ನಿಷ್ಪಯೋಜಕರಾಗಿ ಶಕ್ತಿಹೀನರಾಗಿ ಸ್ವಾರ್ಥ ರಾಜಕಾರಣ ಮಾಡಿಕೊಂಡು ಬಾಬಾ ಸಾಹೇಬರ ವಿಮೋಚನೆ ಚಳುವಳಿ ದಾರಿಗೆ ಬೇ ಲಿ ನಿರ್ಮಿಸಿಕೊಂಡು ತಮ್ಮ ವಂದಿಮಾಗದರ ನಡುವೆ ಬೆರೆತುಹೋಗಿದ್ದಾರೆ, ಐತಿಹಾಸಿಕ ವಿಚಾರಗಳನ್ನು ಇಂದಿನ ಯುವ ದಲಿತ ಸಮುದಾಯ ಮನನ ಮಾಡಿಕೊಂಡು ಒಂದಾಗಿ ಮುನ್ನಡೆಯಬೇಕಿದೆ ಎಂದರು. ಮಂಡ್ಯ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಪೂರಿಗಾಲಿ ಜಯರಾಜ್ ರವರು ಎಲ್ಲರನ್ನೂ ಸ್ವಾಗತಿಸಿ ಸಭೆಯ ಮುಂದಿನ ರೂಪು- ರೇಷೆ ಗಳ ಬಗ್ಗೆ ವಿಸ್ತೃತ ವಾಗಿ ಮಾತನಾಡಿದರು. ಡಾ. ಎಂ ಆರ್ ಪ್ರಸಾದ್ ವಂದಿಸಿದ ಈ ಯಶಸ್ವಿ ಸಭೆಯಲ್ಲಿ ಎ ಜೆ ನಾರಾಯಣ , ಎಸ್ ಎಂ ಕೃಷ್ಣ ,ಲಿಂಗದೇವರು,
ನಡಕಲಪುರ ಮಂಜುನಾಥ್,ಜಗದೀಶ್,ಪ್ರಜಾವಾಣಿ ಚೇತನ ಕುಮಾರ್,ಕಲ್ಕುಣಿ ಮಹದೇವ,ಮರಿಸಿದ್ದಯ್ಯ, ಶಂಕರ್,ನಂಜೇಗೌಡನದೊಡ್ಡಿ ಮಹದೇವಪ್ಪ,ಬಿ ಜಿ ಪುರ ಶಾಂತಕುಮಾರ್,ಮಂಟೇಸ್ವಾಮಿ,ಹೂವಿನ ಕೊಪ್ಪಲ್ ಪ್ರಸನ್ನ ಕುಮಾರ್,ಬಂಡೂರ್ ಸಿದ್ದರಾಜ್,ಮುಟ್ಟನಹಳ್ಳಿ ಸೋಮಣ್ಣ ಉಪಸ್ತಿತರಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;