ಸಿಂಧನೂರು :ಬಿಜೆಪಿ ಕಛೇರಿಯಲ್ಲಿ ಪೂರ್ವಭಾವಿ ಸಭೆ.
ಇಂದು ಬಿಜೆಪಿ ಕಾರ್ಯಾಲಯದಲ್ಲಿ ದಿನಾಂಕ 25.9.2021 ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಜಯಂತಿಯ ಅಂಗವಾಗಿ ಭಾರತೀಯ ಜನತಾ ಪಾರ್ಟಿ ರಾಜ್ಯದ ಪ್ರತಿಯೊಂದು ಬೂತ್ ಗಳಲ್ಲಿ ಆಚರಿಸಲು ಆದೇಶಿಸಿದೆ ಅದರಂತೆ ಬಿಜೆಪಿ ಸಿಂಧನೂರು ಗ್ರಾಮೀಣ ಮಂಡಲ ವತಿಯಿಂದ ಇಂದು ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಕಾರ್ಯಕ್ರಮ ಆಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಪ್ರತಿಯೊಂದು ಬೂತ್ ಗಳಿಗೆ ದೀನದಯಾಳ್ ಉಪಾಧ್ಯಾಯರ ಭಾವಚಿತ್ರವನ್ನು ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡ ಕೊಲ್ಲಾ ಶೇಷಗಿರಿರಾವ್, ಶಿವನಗೌಡ ಗೊರೆಬಾಳ ,ಮಧ್ವರಾಜ್ ಆಚಾರ್ಯ , ಹನುಮೇಶ್ ಸಾಲಗುಂದ, ಶಿವರಾಜ್ ಪಾಟೀಲ್ ಬಸಾಪುರ, ಶೈಲಜಾ ಶಡಕ್ಷರಪ್ಪ ,ಹನುಮಂತರೆಡ್ಡಿ ಹುಡಾ ,ರಾಮನಗೌಡ ಹಾರಾಪುರ, ಗ್ರಾಮೀಣ ಮಂಡಲದ ಎಲ್ಲಾ ಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
